ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಈ ಶಿಬಿರವು ಏಳು ದಿನಗಳ ಕಾಲ ಇರಲಿದ್ದು, ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನ ಮೂರು ನಕಲಿ ಪ್ರತಿಗಳನ್ನು ತರಬೇಕು. ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಬಿರದ ಮಾರ್ಗದರ್ಶಕರಾದ ಗೌತಮ್‌ ಚಂದ್‌ ನಹಾರ್‌ ತಿಳಿಸಿದ್ದಾರೆ.

ಬೆಂಗಳೂರು: ಜೈಪುರದ ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿ ಹಾಗೂ ರೋಟರಿ ಬೆಂಗಳೂರು ಪೀಣ್ಯಾ ಸಂಘಟನೆಯಿಂದ 28ನೇ ವರ್ಷದ ಉಚಿತ ಕೃತಕ ಕಾಲು, ಕ್ಯಾಲಿಪರ್ ಗಳು ಹಾಗು ಮುಂಗೈ ಬೃಹತ್ ಜೋಡಣ ಶಿಬಿರವನ್ನು ಜನವರಿ 3 ರಿಂದ 9 ರವರೆಗೆ ಆಯೋಜಿಸ ಲಾಗಿದೆ.

ಶಿವಾಜಿನಗರ ಇನ್‌ ಫೆಂಟ್ರಿ ರಸ್ತೆಯಲ್ಲಿರುವ ಗಣೇಶ್ ಬಾಗ್, ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್, ಭಗವಾನ್ ಮಹಾವೀರ ರಸ್ತೆ, ಇಲ್ಲಿ ಶಿಬಿರ ನಡೆಯುತ್ತಿದ್ದು, ದಿವ್ಯಾಂಗರಿಗೆ ಉಚಿತವಾಗಿ ಪರಿಕರ ಗಳನ್ನು ಅಳವಡಿಸಲಾಗುತ್ತಿದೆ ಎಂದು ಲಿಂಬ್‌ ಕ್ಯಾಂಪ್‌ ಅಧ್ಯಕ್ಷರಾದ ರೋಟರಿ ಜಿ.ಆರ್.‌ ವಸಂತ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Bangalore Cabs KSP App: ಕ್ಯಾಬ್​ಗಳಲ್ಲಿ 112 ತುರ್ತು ಸಹಾಯವಾಣಿ ಸ್ಟಿಕ್ಕರ್​ ಅಂಟಿಸಲು ಸೂಚನೆ; ಪೊಲೀಸರಿಂದ ಹೊಸ ಮಾರ್ಗ ಸೂಚಿ ಬಿಡುಗಡೆ

ಈ ಶಿಬಿರವು ಏಳು ದಿನಗಳ ಕಾಲ ಇರಲಿದ್ದು, ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನ ಮೂರು ನಕಲಿ ಪ್ರತಿಗಳನ್ನು ತರಬೇಕು. ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಬಿರದ ಮಾರ್ಗದರ್ಶಕರಾದ ಗೌತಮ್‌ ಚಂದ್‌ ನಹಾರ್‌ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ- 9845052554 ಮತ್ತು 9341214915 ಸಂಖ್ಯೆಗೆ ಸಂಪರ್ಕಿಸ ಬೇಕಿಸುವಂತೆ ಕೋರಲಾಗಿದೆ.