ಅ.24 ರಂದು ವಿಶ್ವ ಬಂಧಿತ್ವ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ
ದಾದಿ ಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ ಸ್ಮರಣಾರ್ಥ ವಿಶ್ವ ಬಂಧಿತ್ವ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ ಅ.24 ರಂದು ಬೆಳಗ್ಗೆ 10 ರಿಂದ 1.30 ರ ವರೆಗೆ ನಗರದ ಪಂಡಿತ್ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಈಶ್ವರೀಯ ಪ್ರಾಂಶುಪಾಲೆ ಡಾ.ವೀಣಾ ಜೀ ಹೇಳಿದರು.


ಶಿರಸಿ: ದಾದಿ ಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ ಸ್ಮರಣಾರ್ಥ ವಿಶ್ವ ಬಂಧಿತ್ವ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ ಅ.24 ರಂದು ಬೆಳಗ್ಗೆ 10 ರಿಂದ 1.30 ರ ವರೆಗೆ ನಗರದ ಪಂಡಿತ್ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಈಶ್ವರೀಯ ಪ್ರಾಂಶುಪಾಲೆ ಡಾ.ವೀಣಾ ಜೀ ಹೇಳಿದರು.
ಇದನ್ನೂ ಓದಿ: Sirsi News: 19 ರಂದು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ
ಅವರಿಂದು ನಗರದ ಈಶ್ವರೀಯ ಸದ್ಬಾವನಾ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾತ ನಾಡಿದರು. ಹಳೆಯ ರಕ್ತದಾನಿಗಳ ಜತೆಗೆ ಹೊಸ ರಕ್ತದಾನಿಗಳಿಗೆ ಪ್ರೊತ್ಸಾಹ ನೀಡುವ ಕಾರ್ಯ ವಾಗಬೇಕಿದೆ ಎಂದರು.
ಡಾ.ಶಾಂತಾ ಭಟ್ ಮಾತನಾಡಿ, ರಕ್ತ ಅಂದಿದ್ದೆ ಯಾರೂ ಭಯ ಪಡಬೇಕಿಲ್ಲ. ರಕ್ತದಾನದಿಂದ ಸಾರ್ಥಕತೆಯ ಜತೆಗೆ ನಮ್ಮಲ್ಲಿ ಯ ರಕ್ತ ಹೊಸದಾಗಿ ಬರುತ್ತದೆ. ಇದರಿಂದ ಬೋನ್ ಮ್ಯಾರೊ ಗೆ ಪ್ರಚೋದನೆಯ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜ್ನಾಪಕ ಶಕ್ತಿ ಹೆಚ್ಚಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ ನಾಯ್ಕ ವಿನಾಯಕ ಗಾಂವ್ಕರ್, ಪ್ರಭಾಕರ ಶಿರಾಲ, ಶಿವಾನಂದ ಭಟ್ ಇದ್ದರು.