ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

S V Sankanur: ನನ್ನ ಗೆಲುವು ನನ್ನದಲ್ಲ, ಕಾರ್ಯಕರ್ತರದ್ದು: ಶಿರಸಿ ನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಂಕನೂರ

ಪ್ರಜಾಪ್ರಭುತ್ವದಲ್ಲಿ ನಿಜವಾಗಿಯೂ ಅಭಿನಂದನಾ ಅರ್ಹರಾದವರು ಮತದಾರರು ಅವರನ್ನು ಇಂದು ನಾವು ಅಭಿನಂದಿಸಲೇ ಬೇಕು. ಇಂಥ ಕ್ಷೇತ್ರದಲ್ಲಿ ಪರಿವರ್ತನಾ ಮತವಾಗಲು ಕಾರ್ಯಕರ್ತರ ಕಾರ್ಯವೇ ಶ್ರಮವೇ ಇದಕ್ಕೆ ಸಾಧ್ಯ ಇಂದು ಸಂಕನೂರ ಅವರ ಅಭಿನಂದನಾ ಸಭೆಯ ಸಂಭ್ರಮ ವೊಂದಾದರೆ ನಮ್ಮ ಜಿಲ್ಲೆಗೆ ಒಂದೇ ಭಾರತ್ ಎಕ್ಸ್ ಪ್ರೆಸ್ ಬರುತ್ತಿದ್ದು ಪ್ರಧಾನಿ ಮೋದಿಯವರು ಚಾಲನೆ ನೀಡುವ ಸಂಭ್ರಮದ ದಿನವೂ ಇದಾಗಿದೆ

ಶಿರಸಿ: ನಾನು ಗೆದ್ದಿದ್ದೇನೆಂದು ನಾನು ಹೇಳುವುದಿಲ್ಲ. ನನ್ನ ಗೆಲುವು ನನ್ನದಲ್ಲ. ಕಾರ್ಯಕರ್ತ ರದ್ದು. ಈ ಗೆಲುವನ್ನು ನಮ್ಮ ಕಾರ್ಯಕರ್ತರಿಗೇ ಅರ್ಪಿಸುತ್ತೇನೆ, ಪರಿವಾರದವರು, ಎಬಿವಿಪಿ (ABVP) ಯವರು, ಜೆಡಿಎಸ್(JDS) ನವರು ಸಕ್ರೀಯವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಪಶ್ಚಮ ಪದವೀಧರ ಕ್ಷೇತ್ರದ ವಿಪ ಸದಸ್ಯ ಎಸ್ ವಿ ಸಂಕನೂರ(S V Sankanur) ಹೇಳಿದರು.

ಅವರು, ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಎಸ್ ವಿ ಸಂಕನೂರಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ(Member of Parliament Vishweshwar Hegde Kageri) ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಿಜವಾಗಿಯೂ ಅಭಿನಂದನಾ ಅರ್ಹರಾದವರು ಮತದಾರರು ಅವರನ್ನು ಇಂದು ನಾವು ಅಭಿನಂದಿಸಲೇ ಬೇಕು. ಇಂಥ ಕ್ಷೇತ್ರದಲ್ಲಿ ಪರಿವರ್ತನಾ ಮತವಾಗಲು ಕಾರ್ಯಕರ್ತರ ಕಾರ್ಯವೇ ಶ್ರಮವೇ ಇದಕ್ಕೆ ಸಾಧ್ಯ ಇಂದು ಸಂಕನೂರ ಅವರ ಅಭಿನಂದನಾ ಸಭೆಯ ಸಂಭ್ರಮವೊಂದಾರೆ ನಮ್ಮ ಜಿಲ್ಲೆಗೆ ಒಂದೇ ಭಾರತ್ ಎಕ್ಸ್ ಪ್ರೆಸ್ ಬರುತ್ತಿದ್ದು ಪ್ರಧಾನಿ ಮೋದಿಯವರು ಚಾಲನೆ ನೀಡುವ ಸಂಭ್ರಮದ ದಿನವೂ ಇದಾಗಿದೆ ಎಂದರು.

ಇದನ್ನೂ ಓದಿ: Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ

ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ(MLA Mahesh Tenginakayi) ಮಾತನಾಡಿ, ವೋಟ್ ಚೋರಿ(Vote Chori), ಎಸ್ ಐ ಅರ್(SIR), ಇವಿಎಂ(EVM) ಸರಿ ಇಲ್ಲ ಎನ್ನುವ ಕಾಲದಲ್ಲಿ ಬ್ಯಾಲೆಟ್ ಪೇಪರ್(Ballot Paper) ಮೂಲಕ ನಾವಿಂದು ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ನವರು ಹನ್ನೆರಡು ಎಂ ಎಲ್ ಎ ಗಳ ನಡುವೆ ನಾವು ಆರು ಎಂ ಎಲ್ ಗಳಷ್ಟೇ ಇದ್ದು ಉತ್ತಮ ಫಲಿತಾಂಶ ನೀಡಿದ್ದೇವೆಂದರು.

ಕುಮಟಾ ಶಾಸಕ ದಿನಕರ ಶೆಟ್ಟಿ(MLA Dinakar Shetty) ಮಾತನಾಡಿ, ನಮ್ಮ ಶಿಸ್ತಿನ ಪಕ್ಷದ ಶಾಸಕರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ್ ಸೇರಿದಂತೆ ಅನೇಕರು ಕಾಂಗ್ರೆಸ್ ನ ಹಗರಣವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದು, ಕಾಂಗ್ರೆಸ್ ಆಡಳಿತಕ್ಕೆ ಬೇಸತ್ತ ಮತದಾರರು ಬಿಜೆಪಿಗೆ ಈ ಕಳೆದ ಚುನಾವಣೆ ಯಿಂದಲೇ ಬಿಜೆಪಿ ಗೆಲುವಿಗೆ ಮಣೆ ಹಾಕಿದ್ದಾರೆ ಎಂದರು.

ಮಾಜಿ ಶಾಸಕ ಸುನಿಲ್ ನಾಯ್ಕ(Sunil Naik) ಮಾತನಾಡಿ, ಸಾಮಾನ್ಯ ಕಾರ್ಯಕರ್ತನಿಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ(Pralhad Joshi)ಯವರು ಮಾತನಾಡಿಸಿ ಕಾರ್ಯಕರ್ತರಿಗೆ ಪ್ರೊತ್ಸಾಹಿ ಸುವ ಕಾರ್ಯ ಮಾಡುತ್ತಾರೆ ಅದೇ ಕಾರ್ಯಕರ್ತರು ಪ್ರತಿನಿಧಿಗಳ ಗೆಲುವಿಗೆ ಕಠಿ ಬದ್ದರಾಗುತ್ತಾರೆ ಎಂದರು.

ಮಾಜಿ ವಿಪ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ವಿಧಾನ ಪರಿಷತ್ ನಲ್ಲು ನಮ್ಮ ಸಂಖ್ಯೆ ಕಡಿಮೆ ಇದೆ. ಇರುವ ಕಡಿಮೆ ಸಂಖ್ಯೆಯಲ್ಲಿ ಸಂಕನೂರ ಇದ್ದು ಜಿಲ್ಲೆಯ ಸಮಸ್ಯೆಯ ಬಗ್ಗೆ , ಅಭಿವೃದ್ಧಿಯ ಬಗ್ಗೆ ಸದನದಲ್ಲಿ ಗಮನ ಸೆಳೆಯುವ ವಿಶ್ವಾಸವಿದೆ ಎಂದರು.

ಮಾಜಿ ಶಾಸಕ ಸುನಿಲ್ ಹೆಗಡೆ(Sunil Hegde) ಮಾತನಾಡಿ, ನಮ್ಮಲ್ಲೂ ಇರುವ ಬಿನ್ನಾಭಿಪ್ರಾಯ ಬದಿಗೊತ್ತಿ ಸಂಘಟನಾತ್ಮಕವಾಗಿ ಕಾರ್ಯ ಮಾಡಿದ್ದರ ಫಲವೇ ಇಂದು ಸಂಕನೂರ ಗೆಲುವು ಸಾಧ್ಯವಾಗಿದೆ. ಮುಂದಿನ ಅವಧಿಗೆ ನಾವು ಬಿಜೆಪಿ ಚಿನ್ಹೆಯೇ ಅಧಿಕಾರದಲ್ಲಿರುವ ನಿಟ್ಟಿನಲ್ಲಿ ಸಂಕನೂರ ಅವರು ಕಾರ್ಯ ನಿರ್ವಹಿಸಬೇಕು ಎಂದರು.

ಬಿಜೆಪಿ ವಕ್ತಾರ ಹರಿ ಪ್ರಕಾಶ ಕೋಣೇಮನೆ ಮಾತನಾಡಿ, ಉತ್ತಮ ಪ್ರಯತ್ನದ ಕಾರ್ಯಕ್ಕೆ ಉತ್ತಮ ಫಲ ಸಿಕ್ಕೇ ಸಿಗುತ್ತದೆ ಎನ್ನುವುದು ಸಂಕನೂರ ಗೆಲುವೇ ಹೇಳುತ್ತದೆ. ಆದರೆ ಪದವೀಧರರ ನೋಂದ ಣಿಯ ಸಂಖ್ಯೆಯೇ ಕಡಿಮೆ ಆಗಿದೆ. ನೋಂದಣಿಯ ಕಾರ್ಯ ಇಂದಿನಿಂದಲೇ ಮಾಡಬೇಕಿದೆ. ಅದಾದಾಗ ಮಾತ್ರ ಎಲ್ಲ ಚುನಾವಣೆಯಲ್ಲೂ ನಾವೇ ಗೆಲುವು ಸಾಧಿಸಲು ಸಾಧ್ಯ ಎಂದರು.

ಜೆಡಿ ಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಮಾತನಾಡಿ, ಎನ್ ಡಿ ಎಂದು ನಾವು ಚುನಾವಣಾ ಕಣಕ್ಕೆ ಇಳಿದರೆ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು ನಾವು ಗೆದ್ದಿದ್ದೇವೆ. ರಾಜ್ಯದಲ್ಲಿ ಎನ್ ಡಿ ಎ ಬರಬೇಕು ದೇಶಕ್ಕೆ ಮೋದಿಯವರು ಪ್ರಧಾನಿಯಾಗಬೇಕೆನ್ನುವುದು ನಮ್ಮ ಆಶಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ,  ಸಂಕನೂರು ಗೆಲುವನ್ನು ಮತದಾರರು ಮೊದಲೇ ನಿರ್ಧರಿಸಿದ್ದರು. ಆದ್ದರಿಂದ ಅವರ ಕಳೆದ ಅವಧಿಯ ಕಾರ್ಯ ಪ್ರವೃತ್ತತೆಯೂ ಕಾರಣವಾಗಿದೆ ಎಂದು ಹೇಳಿದರು.

image

ಮತಾಂತರ ಕಾಯ್ದೆಯನ್ನು ಗೋಹತ್ಯಾ ನಿಷೇಧ ಕಾಯ್ದೆಯನ್ನು ನಾವು ಮತ್ತೆ ಬಂದು ಅದನ್ನೇ ಜಾರಿಗೆ ಮಾಡುತ್ತೇವೆ. ನಮ್ಮ ಧರಗಮ, ಶ್ರಾದ್ಧಾ ಭಕ್ತಿ ನಂಬಿಕೆಯ ಬಿಲ್ ಅನ್ನು ನೀವು ಅದೇಗೆ ವಾಪಸ್ ತೆಗೆದುಕೊಳ್ಳುತ್ತೀರೆಂದು ನಾವು ನೋಡುತ್ತೇವೆ.

--ಸಂಸದ ಕಾಗೇರಿ.