ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Birsa Munda: ಬಿರ್ಸಾ ಮುಂಡಾ ಕುರಿತು ಅರಿವು ಮೂಡಿಸಲು ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ: ಪದ್ಮಶ್ರೀ ಪುರಸ್ಕೃತ ತೆ.ಚಿ ಗೋಬಿನ್

ಹೋರಾಟದ ಸಂದರ್ಭದಲ್ಲಿ ಮುಂಡಾರನ್ನು ರಾಂಚಿ ಜೈಲಿನಲ್ಲಿ ಬಂಧಿಸಲಾಗಿತ್ತು. ಅವರು ಬ್ರಿಟಿಷರ ನೇರ ದಾಳಿಯಿಂದ ಹತ್ಯೆಗೀಡಾಗದೆ, , ಬದಲಿಗೆ ವಿಚಾರಣಾಧೀನ ಕೈದಿಯಾಗಿ ನಿಧನರಾದರು. ​ಅವರು ಕ್ರಿಶ್ಚಿಯನ್ ಧರ್ಮ ತೊರೆದರಲ್ಲದೇ, ಶಾಲೆಯಿಂದ ಹೊರ ಬಂದರು. ವಸಾಹತುಶಾಹಿ ಆಡಳಿತ, ಶೋಷಣೆ ಹಾಗೂ ಭೂಮಿ ಬಾಡಿಗೆ ಹೆಚ್ಚಳದ ವಿರುದ್ಧ 'ಉಲ್ಗುಲಾನ್' ಎಂಬ ಮಹಾನ್ ಚಳುವಳಿ ಆರಂಭಿಸಿದರು. ಅಂಥವರ ಜನ್ಮ ದಿನಾಚರಣೆ ಮಾಡಲಾಗುತ್ತಿದೆ.

ಶಿರಸಿ: ಬ್ರಿಟಿಷ್ ವಸಾಹತುಶಾಹಿ ಆಡಳಿತ ಮತ್ತು ಶೋಷಣೆಯ ವಿರುದ್ಧ ಬಿರ್ಸಾ ಮುಂಡಾ(Birsa Munda) ಅವರು ದೊಡ್ಡಮಟ್ಟದ ಹೋರಾಟ ಸಂಘಟಿಸಿದರು. ಈ ಹೋರಾಟದ ಸಂದರ್ಭದಲ್ಲಿ ಮುಂಡಾರನ್ನು ರಾಂಚಿ ಜೈಲಿನಲ್ಲಿ ಬಂಧಿಸಲಾಗಿತ್ತು. ಅವರು ಬ್ರಿಟಿಷರ ನೇರ ದಾಳಿಯಿಂದ ಹತ್ಯೆಗೀಡಾಗದೆ, , ಬದಲಿಗೆ ವಿಚಾರಣಾಧೀನ ಕೈದಿಯಾಗಿ ನಿಧನರಾದರು. ​ಅವರು ಕ್ರಿಶ್ಚಿಯನ್ ಧರ್ಮ ತೊರೆದರಲ್ಲದೇ, ಶಾಲೆಯಿಂದ ಹೊರ ಬಂದರು. ವಸಾಹತುಶಾಹಿ ಆಡಳಿತ, ಶೋಷಣೆ ಹಾಗೂ ಭೂಮಿ ಬಾಡಿಗೆ ಹೆಚ್ಚಳದ ವಿರುದ್ಧ 'ಉಲ್ಗುಲಾನ್' ಎಂಬ ಮಹಾನ್ ಚಳುವಳಿ ಆರಂಭಿಸಿ ದರು. ಅಂಥವರ ಜನ್ಮ ದಿನಾಚರಣೆ ಮಾಡಲಾಗುತ್ತಿದೆ. ಈ ಕುರಿತೇ ನಾನು ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ(Padmashri Awardee), ವನವಾಸಿ ಕಲ್ಯಾಣದ ರಾಷ್ಟ್ರಿಯ ಉಪಾಧ್ಯಕ್ಷ ಅರುಣಾಚಲ ಪ್ರದೇಶದ ತೆ.ಚಿ ಗೋಬಿನ್(Te.Chi Gobin) ಹೇಳಿದರು.

ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ‌ನಡೆಸಿ‌ ಮಾತನಾಡಿದರು.

ಇದನ್ನೂ ಓದಿ: Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ

ಬಿರ್ಸಾರವರ ಬಳಿ ಕೇವಲ ಒಂದು ಲಾಠಿ, ಬಿಲ್ಲು ಮತ್ತು ಬಾಣಗಳು ಮಾತ್ರ ಇದ್ದವು. ಈ ಸೀಮಿತ ಸಂಪನ್ಮೂಲಗಳೊಂದಿಗೆ ಅವರು ಬ್ರಿಟಿಷರ ವಿರುದ್ಧ ದೇಶದ ಅತಿ ದೊಡ್ಡ ಹೋರಾಟ ಸಂಘಟಿಸಿ ದರು.

​ನವೆಂಬರ್ 15, 1875 ರಂದು ಜನಿಸಿದ ಬೀರ್ಸಾ ಮುಂಡಾ, ಡೊರಾಂಡಾದ ಬ್ರಿಟಿಷ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಪಡೆದಿದ್ದರು. 19ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ನಡೆದ ಈ ಪ್ರತಿಭಟನೆ ಯು ಭಾರತದ ಇತಿಹಾಸಕ್ಕೆ ಮತ್ತು ಜನಜಾತಿಗಳಿಗೆ ದೊಡ್ಡ ಹೆಮ್ಮೆಯ ವಿಚಾರವಾಗಿದೆ ಎಂದರು.

ಮಾಜಿ ವಿಪ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಬುಡಕಟ್ಟು ಜನಾಂಗದ ಹಲವಾರು ಜನ ಸ್ವತಂತ್ರ ಕಾಲದಲ್ಲಿ ಹೋರಾಟ ಮಾಡಿದ್ದಾರೆ. ಅದರ ಉಲ್ಲೇಖ ಅನೇಕ ಕಡೆಗಳಲ್ಲಿಲ್ಲ. ಬೆಟ್ಟ, ನೀರು ಎಲ್ಲವೂ ನಮ್ಮದಾಗಿದ್ದು, ಬ್ರಿಟಿಷರು ಬಿಟ್ಟು ಹೋಗಬೇಕೆಂದು ಹೋರಾಟ ಮಾಡಿದ್ದೇವೆ. ಅದರಲ್ಲಿ ಭಗವಾನ್ ಬಿರ್ಸಾ ಮುಂಡ ಕೂಡಾ ಒಬ್ಬರು ಎಂದರು.

ಈ ಸಂದರ್ಭದಲ್ಲಿ ಜಾನು ಕೊಕರೆ, ರಾಜ್ಯ ಉಪಾಧ್ಯಕ್ಷ ಮಣಿವಣ್ಣರ್ ಉಪಸ್ಥಿತರಿದ್ದರು.