ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವ ವೇಳೆ ರೌಡಿಯ ಎನ್ ಕೌಂಟರ್ ಮಾಡಿದ್ದಕ್ಕಾಗಿ ಉತ್ತಮ ಆಧಿಕಾರಿ ಎಂದೆನಿಸಿಕೊಂಡಿದ್ದ ಜಯರಾಜ್

ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಲೇ ಜನಪರ ಕಾರ್ಯ, ದಕ್ಷತೆ, ಮತ್ತು ಪ್ರಾಮಾಣಿ ಕತೆಗೆ ಹೆಸರಾಗಿರುವ ಜಯರಾಜ್ ಎಚ್ ಅವರನ್ನು ಅತ್ಯುತ್ತಮ ಸೇವೆಗೆ ಕೊಡ ಮಾಡುವ ರಾಷ್ಟ್ರ ಪತಿ ಪದಕ ಪ್ರಶಸ್ತಿಗೆ ಈ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ.

President Award: ಗೋವಿಂದಪುರ ಠಾಣೆಯ ಸಿಪಿಐ ಜಯರಾಜ್ ಎಚ್ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ

Profile Ashok Nayak Jan 25, 2025 3:36 PM

ಶಿರಸಿ: ಈ ಹಿಂದೆ ಯಲ್ಲಾಪುರ, ಅಂಕೋಲಾದಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ಬೆಂಗಳೂರು ಸಿಟಿ ಗೋವಿಂದಪುರ ಠಾಣೆಯ ಸಿಪಿಐ ಜಯರಾಜ್ ಎಚ್ ಅವರು ತಮ್ಮ ಅಮೋಘ ಸೇವಾ ಹಾದಿಗೆ ಮತ್ತೊಂದು ಹೆಜ್ಜೆಹಾಕಿ ತಮ್ಮ ಕಿರೀಟಕ್ಕೆ ಇನ್ನೊಂದು ಕೀರ್ತಿಯ ಗರಿ ಸೇರಿಸಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಲೇ ಜನಪರ ಕಾರ್ಯ, ದಕ್ಷತೆ, ಮತ್ತು ಪ್ರಾಮಾಣಿ ಕತೆಗೆ ಹೆಸರಾಗಿರುವ ಜಯರಾಜ್ ಎಚ್ ಅವರನ್ನು ಅತ್ಯುತ್ತಮ ಸೇವೆಗೆ ಕೊಡ ಮಾಡುವ ರಾಷ್ಟ್ರ ಪತಿ ಪದಕ ಪ್ರಶಸ್ತಿಗೆ ಈ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Sirsi Breaking: ಕಾಂಗ್ರೆಸ್ ಕಾನೂನು ಕೈಗೆತ್ತಿಕೊಂಡಿದೆ

ಇವರು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವ ವೇಳೆ ರೌಡಿಯ ಎನ್ ಕೌಂಟರ್ ಮಾಡಿದ್ದಕ್ಕಾಗಿ ಉತ್ತಮ ಆಧಿಕಾರಿ ಎಂದೆನಿಸಿಕೊಂಡಿದ್ದ ಅವರು, ಶಿವಮೊಗ್ಗ ನಗರದಲ್ಲಿ ರೌಡಿಸಂ ವಿರುದ್ಧ ಕೈಗೊಂಡ ದಿಟ್ಟ ಕಾನೂನು ಕ್ರಮಗಳನ್ನು ಗುರುತಿಸಿ ರಾಜ್ಯ ಸರಕಾರ 2015 ಸಾಲಿನಲ್ಲಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿತ್ತು.

ಕೆಲಸದಲ್ಲಿ ಇವರ ಶಿಸ್ತು, ವೃತ್ತಿಜೀವನದಲ್ಲಿ ನಿರಂತರ ಪರಿಶ್ರಮ, ಮತ್ತು ಜನಸಾಮಾನ್ಯರ ಆಶಯ ಗಳಿಗೆ ಸ್ಪಂದಿಸುತ್ತಾ, ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಜಯ ರಾಜ್ ಅವರಿಗೆ ರಾಷ್ಟ್ರ ಮಟ್ಟದ ಈ ಗೌರವ ಲಭಿಸಿರುವುದು ಯಲ್ಲಾಪುರ ಹಾಗೂ ಅಂಕೋಲಾ ಸೇರಿದಂತೆ ಅನೇಕ ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.

ಇವರು ತಮ್ಮ ಜನಪದ ಗಾಯನದ ಮೂಲಕ ಅನೇಕ ಸಂಗೀತಾಸಕ್ತರನ್ನು ಸೆಳೆದಿದ್ದಲ್ಲದೆ ಅದರ ಮೂಲಕವೂ ಜಾಗ್ರತಿ ಮೂಡಿಸಿದ ಹೆಮ್ಮೆ ಅವರದು. ಮಾನವೀಯತೆಯ ನೆಲೆಯಲ್ಲಿ ಇವರು ಕೈಗೊಂಡ ಕಾರ್ಯಗಳಿಗೂ ಲೆಕ್ಕವೇ ಇಲ್ಲ.

ಜಯರಾಜ್ ಅವರ ಅವರ ಈ ಸಾಧನೆಯು ವ್ಯಕ್ತಿಗತ ಕೀರ್ತಿಗೆ ಮಾತ್ರ ಸೀಮಿತವಾಗದೆ, ಕನ್ನಡದ ಪೊಲೀಸ್ ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಿಲ್ಲ.

ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಸಾಮಾಜಿಕ, ಧಾರ್ಮಿಕ, ಮಾನವೀಯ ಕಾರ್ಯ ಮಾಡಿದ ಜಯರಾಜ್ ಎಚ್. ಅವರಿಗೆ ನಾಳೆ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೊತ್ಸವದಂದು ರಾಷ್ಟ್ರ ಪ್ರಶಸ್ತಿ ಪದಕವನ್ನು ರಾಷ್ಟ್ರಪತಿ ಪ್ರದಾನ ಮಾಡಲಿದ್ದಾರೆ.