Sirsi Breaking: ಕಾಂಗ್ರೆಸ್ ಕಾನೂನು ಕೈಗೆತ್ತಿಕೊಂಡಿದೆ
ಸಿ.ಟಿ ರವಿ ಅವರ ತೇಜೋವಧೆ ಮಾಡಲು ಕಾಂಗ್ರೆಸ್ ಮಾಡುತ್ತಿದೆ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನೂ ತಿರುಚಿ ಅಂಬೇಡ್ಕರ್ ಹೆಸರನ್ನು
Ashok Nayak
December 21, 2024
ಶಿರಸಿ: ಕಾಂಗ್ರೆಸ್ ಇವತ್ತು ಗೂಂಡಾಗಿರಿ ಆಡಳಿತ ಮಾಡುತ್ತಿದ್ದು, ಬಿಜೆಪಿ ನಾಯಕರ ವಿರುದ್ಧ ಷಡ್ಯಂತ್ರ ಮಾಡಿದೆ ಎಂದು ಬಿಜೆಪಿ ವಕ್ತಾರ ಸದಾನಂದ ಭಟ್ ಹೇಳಿದರು.
ಅವರು ಇಂದು ನಗರದ ದೀನದಯಾಳು ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆರೋಪಿಗಳೇ ಆದರೂ ಅದಕ್ಕೊಂದು ನಿಯಮವಿದೆ. ಆದರೆ ಕಾಂಗ್ರೆಸ್ ಪೊಲೀಸರನ್ನು ಬಳಸಿಕೊಂಡು ಕಾನೂನು ಬಾಹಿರ ಕಾರ್ಯ ಮಾಡುತ್ತಿದೆ. ಬಿಜೆಪಿಯನ್ನು ಸಂಘಟನೆಯಿಂದ ಎದುರಿಸಲಾರದ ಕಾಂಗ್ರೆಸ್ ಇಂದು ನಾಯಕರ ವೈಯಕ್ತಿಕವಾಗಿ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ.
ಸಿ.ಟಿ ರವಿ ಅವರ ತೇಜೋವಧೆ ಮಾಡಲು ಕಾಂಗ್ರೆಸ್ ಮಾಡುತ್ತಿದೆ ಎಂದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನೂ ತಿರುಚಿ ಅಂಬೇಡ್ಕರ್ ಹೆಸರನ್ನು ತಂದು ಸದನ ಯಶಸ್ವಿಯಾಗಿ ನಡೆಯದಂತೆ ಮಾಡು ತ್ತಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಗೆ ಬಿಜೆಪಿ ಹಾಗೂ ಬಿಜೆಪಿ ನಾಯಕರನ್ನು ಹತ್ತಿಕ್ಕಲು ಇಲ್ಲ ಸಲ್ಲದ ತಂತ್ರಗಾರಿಕೆ ಮಾಡುತ್ತಿದೆ. ಸುಳ್ಳು ಸುದ್ದಿ, ಸುಳ್ಳು ಮಾಹಿತಿಯನ್ನು ಹಂಚುತ್ತಿದೆ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತ ಮೂರ್ತಿ ಹೆಗಡೆ, ಉಷಾ ಹೆಗಡೆ, ಶ್ರೀರಾಮ ನಾಯ್ಕ ಮುಂತಾದವರಿದ್ದರು.ಬೆಳೆ ವಿಮೆ ಹಣವನ್ನು ಸರಕಾರ ತಕ್ಷಣಕ್ಕೆ ನೀಡಬೇಕು. ಇಲ್ಲವಾದಲ್ಲಿ ನಾವು ಹೋರಾಟಕ್ಕಿಳಿಯುತ್ತೇವೆ. ಮತ್ತೆ ಮಳೆ ಮಾಪನ ಸಾಧ್ಯವಿಲ್ಲ.
ಇದನ್ನೂ ಓದಿ: #SirsiBreaking