ನಾಳೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿ ಹಬ್ಬ; ಲೇಖಕ ಡಾ. ಜಿ.ರಾಮಕೃಷ್ಣ ಸೇರಿ ಮೂವರಿಗೆ ನಾಡೋಜ ಗೌರವ
ಈ ಬಾರಿ ಬೆಂಗಳೂರಿನ ವಿದ್ವಾಂಸ ಮತ್ತು ಲೇಖಕ ಡಾ. ಜಿ.ರಾಮಕೃಷ್ಣ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಮಹಾದೇವಪ್ಪ, ವಿಶ್ರಾಂತ ಆಡಳಿತಾಧಿಕಾರಿ ಡಾ.ಎಚ್.ಸಿ.ಸತ್ಯನ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆಯಾಗಿದ್ದಾರೆ. ಇನ್ನು 107 ಮಂದಿಗೆ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪ್ರದಾನ ಮಾಡಲಾಗುತ್ತದೆ.
ನಾಡೋಜ ಪದವಿಗೆ ಭಾಜನರಾದ ಡಾ. ಜಿ.ರಾಮಕೃಷ್ಣ, ಪ್ರೊ.ಸಿ.ಮಹಾದೇವಪ್ಪ ಮತ್ತು ಡಾ.ಎಚ್.ಸಿ.ಸತ್ಯನ್. -
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬ-ಘಟಿಕೋತ್ಸವ (Hampi Kannada Universityʼs 34th Nudi Habba) ಫೆ. 24 ರಂದು ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.
ಹಂಪಿ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಸಂಜೆ 5.30 ಕ್ಕೆ ನಡೆಯುವ ಸಮಾರಂಭದಲ್ಲಿ ವಿವಿ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಾಧಕರಿಗೆ ನಾಡೋಜ ಗೌರ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಈ ಬಾರಿ ಬೆಂಗಳೂರಿನ ವಿದ್ವಾಂಸ ಮತ್ತು ಲೇಖಕ ಡಾ. ಜಿ.ರಾಮಕೃಷ್ಣ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಮಹಾದೇವಪ್ಪ, ವಿಶ್ರಾಂತ ಆಡಳಿತಾಧಿಕಾರಿ ಡಾ.ಎಚ್.ಸಿ.ಸತ್ಯನ್ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ 107 ಮಂದಿಗೆ ಪಿಎಚ್‌ಡಿ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿ ಪೂರೈಸಿದ 123 ಮಂದಿ ಸಹ ಪದವಿ ಪಡೆಯಲಿದ್ದಾರೆ.
Mobile Ban in Schools: ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ವಿಚಾರ ಚರ್ಚೆಯಲ್ಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಸಮಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್ ಅವರು ಡಿ.ಲಿಟ್ ಮತ್ತು ಪಿಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ಘಟಿಕೋತ್ಸವ ಭಾಷಣವನ್ನು ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಂಸ್ಕೃತಿ ಚಿಂತಕರಾದ ಡಾ.ಕೆ. ಮರುಳಸಿದ್ಧಪ್ಪ ಮಾಡಲಿದ್ದಾರೆ ಎಂದು ತಿಳಿಸಿದರು.