ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nandigiridhama police crack grape theft case: ದ್ರಾಕ್ಷಿ ಕಳವು ಪ್ರಕರಣ ಭೇದಿಸಿದ ನಂದಿಗಿರಿಧಾಮ ಪೊಲೀಸರು: ಐವರು ಆರೋಪಿಗಳ ಬಂಧನ; 2.48 ಲಕ್ಷ ನಗದು ವಶ

ಜು.14ರ ರಾತ್ರಿ ಕೊಳವನಹಳ್ಳಿ ಗ್ರಾಮದ ಬಸವರಾಜು ಎಸ್.ಪಿ. ಅವರ ತೋಟದಲ್ಲಿ ಸುಮಾರು ಎರಡು ಟನ್ ರೆಡ್ ಗ್ಲೋಬ್ ದ್ರಾಕ್ಷಿಯನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಬಸವರಾಜು ಅವರು ದೂರು ನೀಡಿದ್ದು, ಜು.15ರಂದು ತಾಲೂಕು ಕೃಷಿಕ ಸಮಾಜದ ವತಿಯಿಂದಲೂ ಪ್ರಕರಣ ವನ್ನು ಶೀಘ್ರ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು.

ಐವರು ಆರೋಪಿಗಳ ಬಂಧನ; 2.48 ಲಕ್ಷ ನಗದು ವಶ

-

Profile
Ashok Nayak Jul 28, 2026 9:31 PM

ಚಿಕ್ಕಬಳ್ಳಾಪುರ: ತಾಲೂಕಿನ ಕೊಳವನಹಳ್ಳಿ ಗ್ರಾಮದ ರೈತರ ತೋಟದಲ್ಲಿ ಸುಮಾರು ಎರಡು ಟನ್ ರೆಡ್ ಗ್ಲೋಬ್ ದ್ರಾಕ್ಷಿ ಕಳವು ಮಾಡಿದ್ದ ಪ್ರಕರಣವನ್ನು ನಂದಿಗಿರಿಧಾಮ ಪೊಲೀಸ್ ಠಾಣೆ ಪೊಲೀಸರು ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 2.48 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಜು.14ರ ರಾತ್ರಿ ಕೊಳವನಹಳ್ಳಿ ಗ್ರಾಮದ ಬಸವರಾಜು ಎಸ್.ಪಿ. ಅವರ ತೋಟದಲ್ಲಿ ಸುಮಾರು ಎರಡು ಟನ್ ರೆಡ್ ಗ್ಲೋಬ್ ದ್ರಾಕ್ಷಿಯನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಬಸವರಾಜು ಅವರು ದೂರು ನೀಡಿದ್ದು, ಜು.15ರಂದು ತಾಲೂಕು ಕೃಷಿಕ ಸಮಾಜದ ವತಿಯಿಂದಲೂ ಪ್ರಕರಣ ವನ್ನು ಶೀಘ್ರ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Chinthamani Crime: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!

ಪ್ರಕರಣ ದಾಖಲಿಸಿಕೊಂಡ ನಂದಿಗಿರಿಧಾಮ ಠಾಣೆ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ಯಲಹಂಕದ ಅಂಬರೀಶ್, ಗುಡಿಬಂಡೆ ತಾಲೂಕಿನ ಹಳೆ ಹಂಪಸಂದ್ರ ಗ್ರಾಮದ ಅನಿಲ್, ಯಲಹಂಕದ ವೆಂಕಟೇಶ್, ವಿಶ್ವನಾಥ್ ಹಾಗೂ ವೆಂಕಟೇಶ್ ತಿಮ್ಮರಾಜು ಎಂಬ ಐವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ರೂ.2.48 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ ರೈ ಹಾಗೂ ಡಿವೈಎಸ್ಪಿ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ, ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ರಂಜನ್ ಕುಮಾರ್ ಡಿ. ನೇತೃತ್ವದಲ್ಲಿ ನಂದಿಗಿರಿಧಾಮ ಠಾಣೆಯ ಪಿಎಸ್‌ಐ ದುಂಡಪ್ಪ ಬಾರ್ಕಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.