ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಕಲ್ಯಾಣ ಕರ್ನಾಟಕ ಚಾಲಕರ ತರಬೇತಿ ಕೇಂದ್ರ ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವೇಕಾನಂದ ರಕ್ತ ಭಂಡಾರ ಸಂಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
40ಕ್ಕೂ ಹೆಚ್ಚು ಜನರು ತರಬೇತಿ ಕಾರ್ಯಾಗಾರದಲ್ಲಿ ರಕ್ತದಾನ ಮಾಡಿದರು. ತರಬೇತಿ ಕಾರ್ಯ ಗಾರದ ಪ್ರಿನ್ಸಿಪಾಲ್ ತಿಮ್ಮಾರೆಡ್ಡಿ ಹೀರಾ, ಅಧೀಕ್ಷಕ ಮಂಜುನಾಥ ಸ್ವತಃ ರಕ್ತ ನೀಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Blood Donate: ಎಚ್.ಡಿ.ಎಫ್.ಸಿ. ಬ್ಯಾಂಕ್ ನಿಂದ ಡಿಸೆಂಬರ್ 5ರಂದು 17ನೇ ವಾರ್ಷಿಕ ರಕ್ತದಾನ ಉಪಕ್ರಮ
ಇಲಾಖೆ ಜಿಲ್ಲಾ ಅರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಹೆಚ್.ಶ್ರೀನಿವಾಸ ರೆಡ್ಡಿ, ವಿಶ್ವಪತಿ ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ. ಕೆಂಚಪ್ಪ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.