Blood Donate: ಎಚ್.ಡಿ.ಎಫ್.ಸಿ. ಬ್ಯಾಂಕ್ ನಿಂದ ಡಿಸೆಂಬರ್ 5ರಂದು 17ನೇ ವಾರ್ಷಿಕ ರಕ್ತದಾನ ಉಪಕ್ರಮ
ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ( HDFC Bank) ತನ್ನ ಮುಂಚೂಣಿಯ ಸಿ.ಎಸ್.ಆರ್. ಉಪಕ್ರಮ ಪರಿವರ್ತನ್ ಅಡಿಯಲ್ಲಿ ದೇಶವ್ಯಾಪಿ 17ನೇ ರಕ್ತದಾನ( blood donation) ಕಾರ್ಯಕ್ರಮ ಆಯೋಜಿಸಲಿದೆ. ಈ ಉಪಕ್ರಮ ಡಿಸೆಂಬರ್ 5, 2025ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಭಾರತದಲ್ಲಿ 1,100ಕ್ಕೂ ಹೆಚ್ಚು ನಗರಗಳಲ್ಲಿ ನಡೆಯಲಿದೆ.
-
ಮುಂಬೈ: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ( HDFC Bank) ತನ್ನ ಮುಂಚೂಣಿಯ ಸಿ.ಎಸ್.ಆರ್. ಉಪಕ್ರಮ ಪರಿವರ್ತನ್ ಅಡಿಯಲ್ಲಿ ದೇಶವ್ಯಾಪಿ 17ನೇ ರಕ್ತದಾನ( blood donation) ಕಾರ್ಯಕ್ರಮ ಆಯೋಜಿಸಲಿದೆ. ಈ ಉಪಕ್ರಮ ಡಿಸೆಂಬರ್ 5, 2025ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಭಾರತದಲ್ಲಿ 1,100ಕ್ಕೂ ಹೆಚ್ಚು ನಗರಗಳಲ್ಲಿ ನಡೆಯಲಿದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಉದ್ಯೋಗಿಗಳು, ಗ್ರಾಹಕರು, ಕಾರ್ಪೊರೇಟ್ ಗಳು, ರಕ್ಷಣಾ ಪಡೆಗಳ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಮುದಾಯ ಸದಸ್ಯರು ಒಳಗೊಳ್ಳಲಿದ್ದಾರೆ. ಈ ಉಪಕ್ರಮವು ಸಮುದಾಯ ಕಲ್ಯಾಣಕ್ಕೆ ಬ್ಯಾಂಕಿನ ಬದ್ಧತೆಯನ್ನು ಬಿಂಬಿಸುತ್ತದೆ ಮತ್ತು ಸುರಕ್ಷಿತ ಹಾಗೂ ಸಕಾಲಿಕ ರಕ್ತದಾನಗಳ ದೇಶದ ಮುಂದುವರಿದ ಅಗತ್ಯಕ್ಕೆ ಬೆಂಬಲ ಮುಂದುವರಿಸುತ್ತದೆ. ವಾರ್ಷಿಕ ರಕ್ತದಾನ ಉಪಕ್ರಮವು ಬ್ಯಾಂಕ್ ಪ್ರಾರಂಭಿಸಿದ ಮೊದಲ ಸಿ.ಎಸ್.ಆರ್. ಉಪಕ್ರಮಗಳಲ್ಲಿ ಒಂದಾ ಗಿದೆ ಮತ್ತು ಆರೋಗ್ಯಸೇವೆ ಮತ್ತು ನೈರ್ಮಲ್ಯದ ಪ್ರಮುಖ ಆದ್ಯತೆಯ ಕ್ಷೇತ್ರದಲ್ಲಿ ಬರುತ್ತದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಉಪ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೈಝದ್ ಭರೂಚಾ, “ಹಲವು ವರ್ಷಗಳ ಕಾಲದಿಂದ ಈ ಉಪಕ್ರಮವು ಜನರನ್ನು ಒಂದು ಸಾಮಾನ್ಯ ಉದ್ದೇಶಕ್ಕೆ ಒಗ್ಗೂಡಿಸಿದೆ. ರಕ್ತದಾನವು ಸರಳ ಕ್ರಮವಾಗಿದ್ದು ಅದು ಮತ್ತೊಬ್ಬರ ಜೀವನದಲ್ಲಿ ತಕ್ಷಣದ ವ್ಯತ್ಯಾಸ ತರಬಲ್ಲದು. ಪ್ರತಿ ವರ್ಷ ಈ ಪ್ರಯತ್ನದಲ್ಲಿ ಭಾಗವಹಿಸುವ ಮತ್ತು ಬೆಂಬಲಿಸುವ ಪಾಲುದಾರರಿಗೆ ನಾವು ಆಭಾರಿಯಾಗಿದ್ದೇವೆ” ಎಂದರು.
ಇದನ್ನೂ ಓದಿ: Blood Donation: ರಕ್ತದಾನ ಜೀವದಾನ; ಜೀವ ಉಳಿಸಲು ಎಂದೂ ಹಿಂಜರಿಯಬೇಡಿ
ಎಚ್.ಡಿ.ಎಫ್.ಸಿ. ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಭವೇಶ್ ಝವೇರಿ, “ವಾರ್ಷಿಕ ರಕ್ತದಾನ ಉಪಕ್ರಮವು ಸ್ಥಿರವಾಗಿ ಬೆಳೆಯುತ್ತಿದ್ದು ಅದಕ್ಕೆ ನಮ್ಮ ಉದ್ಯೋಗಿಗಳು ಮತ್ತು ಪಾಲುದಾರರು ಪ್ರಾಮಾಣಿಕವಾಗಿ ಮತ್ತು ತಂಡದ ಕೆಲಸದಲ್ಲಿ ಭಾಗವಹಿಸುತ್ತಿರುವುದರಿಂದ ಸಾಧ್ಯವಾಗಿದೆ. ಹೇಗೆ ಈ ಉಪಕ್ರಮ ವಿಕಾಸಗೊಂಡಿದೆ ಎಂದು ಕಾಣಲು ನಾವು ಹೆಮ್ಮೆ ಪಡುತ್ತೇವೆ ಹಾಗೂ ದೇಶದ ಆರೋಗ್ಯಸೇವಾ ವ್ಯವಸ್ಥೆಗೆ ಕೊಡುಗೆ ನೀಡಲು ಬದ್ಧವಾಗಿದ್ದೇವೆ. ಪ್ರತಿ ದಾನಿಯೂ ಈ ಒಗ್ಗಟ್ಟಿನ ಪ್ರಯತ್ನವನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ” ಎಂದರು.
ಪ್ರತಿ ವರ್ಷ ಬ್ಯಾಂಕ್ ಪ್ರತಿಷ್ಠಿತ ರಕ್ತನಿಧಿಗಳು ಮತ್ತು ಆರೋಗ್ಯಸೇವಾ ಸಂಸ್ಥೆಗಳೊಂದಿಗೆ ಸುರಕ್ಷತೆ, ಪಾರದರ್ಶಕತೆ ಮತ್ತು ವೈದ್ಯಕೀಯ ನಿಯಮಗಳಿಗೆ ಬದ್ಧವಾಗಿ ಕೆಲಸ ಮಾಡುತ್ತದೆ. ಈ ವರ್ಷ ಈ ಉಪಕ್ರಮವು ತನ್ನ ಸಹಯೋಗಗಳನ್ನು ದೇಶಾದ್ಯಂತ ಮಾನ್ಯತೆ ಪಡೆದ ರಕ್ತನಿಧಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಎನ್.ಜಿ.ಒ.ಗಳೊಂದಿಗೆ ಮುಂದುವರಿಸುತ್ತದೆ.
ಈ ಉಪಕ್ರಮವು 18ರಿಂದ 60 ವರ್ಷ ವಯಸ್ಸಿನ ಉತ್ತಮ ಆರೋಗ್ಯವುಳ್ಳ ಎಲ್ಲ ಅರ್ಹ ದಾನಿಗಳಿಗೆ ಮುಕ್ತವಾಗಿದೆ. ಆಸಕ್ತ ವ್ಯಕ್ತಿಗಳು ನೇರವಾಗಿ ಯಾವುದೇ ಶಿಬಿರಕ್ಕೆ ಪ್ರವೇಶಿಸಬಹುದು. ಸ್ಥಳಗಳ ಸಂಪೂರ್ಣ ಪಟ್ಟಿಯು ಎಚ್.ಡಿ.ಎಫ್.ಸಿ. ಬ್ಯಾಂಕ್ ವೆಬ್ಸೈಟ್ ನಲ್ಲಿ ಲಭ್ಯ(ದಿನಾಂಕದಂದು) ವಾಗಲಿದೆ.
2007ರಲ್ಲಿ ಪ್ರಾರಂಭವಾದ ದಿನದಿಂದಲೂ ಈ ಉಪಕ್ರಮವು ಮೊದಲ ವರ್ಷ 88 ಕೇಂದ್ರಗಳಿಂದ 4,385 ಯೂನಿಟ್ ಗಳ ರಕ್ತ ಸಂಗ್ರಹದಿಂದ ಪ್ರಾರಂಭವಾಗಿ 2024ರಲ್ಲಿ 5,533 ಶಿಬಿರಗಳು ಮತ್ತು 3.38 ಲಕ್ಷ ಯೂನಿಟ್ ಗಳ ಸಂಗ್ರಹಕ್ಕೆ ವಿಸ್ತರಿಸಿದೆ. 2013ರಲ್ಲಿ ಪರಿವರ್ತನ್ ರಕ್ತದಾನ ಉಪಕ್ರಮವು ಒಂದೇ ದಿನ ಹಲವು ಸ್ಥಳಗಳಲ್ಲಿ ರಕ್ತದಾನದ ಉಪಕ್ರಮ ನಿರ್ವಹಿಸಿದ್ದಕ್ಕೆ ಗಿನ್ನೆಸ್ ವಿಶ್ವ ದಾಖಲೆ ಸೇರಿದೆ.
ರಕ್ತದಾನ ಮಾಡಲು ಅರ್ಹತೆಯ ಮಾನದಂಡ
* ದಾನಿಯ ವಯಸ್ಸು 18ರಿಂದ 60 ವರ್ಷಗಳ ನಡುವೆ ಇರಬೇಕು
* ಹಿಂದಿನ ರಕ್ತದಾನವು ಕನಿಷ್ಠ ಮೂರು ತಿಂಗಳ ಹಿಂದೆ ಆಗಿರಬೇಕು.
* ದಾನಿಯು ಹಿಂದಿನ ಏಳು ದಿನಗಳಲ್ಲಿ ಜ್ವರ, ಕೆಮ್ಮು ಅಥವಾ ನೆಗಡಿ ಹೊಂದಿರಬಾರದು.
* ದಾನಿಯು ರಕ್ತದಾನಕ್ಕೆ ಮುನ್ನ ಕನಿಷ್ಠ ಮೂರು ಗಂಟೆಗಳ ಮುಂಚೆ ಲಘು ಉಪಾಹಾರ ಸೇವಿಸಿರಬೇಕು ಮತ್ತು ಖಾಲಿ • ಹೊಟ್ಟೆಯಲ್ಲಿ ರಕ್ತದಾನ ಮಾಡಬಾರದು.
* ರಕ್ತದಾನ ಮಾಡುವ ಮುನ್ನ ದಾನಿಯು ಎರಡು ಲೋಟಗಳ ನೀರು ಕುಡಿಯಬೇಕು
* ದಾನಿಯು ಹಿಂದಿನ ನಾಲ್ಕರಿಂದ ಆರು ಗಂಟೆಗಳು ಧೂಮಪಾನ ಮಾಡಿರಬಾರದು ಅಥವಾ ತಂಬಾಕು ಜಗಿದಿರಬಾರದು
* ದಾನಿಯು 24 ಗಂಟೆಗಳ ಮುನ್ನ ಮದ್ಯಪಾನ ಮಾಡಿರಬಾರದು
* ದಾನಿಯು ನೋಂದಣಿಯ ಅರ್ಜಿಯಲ್ಲಿ ಎಲ್ಲ ಪ್ರಶ್ನೆಗಳಿಗೂ ನಿಜವಾದ ಉತ್ತರ ನೀಡಬೇಕು
* ರಕ್ತದಾನವು ತೂಕ, ಹಿಮೋಗ್ಲೋಬಿನ್ ಮಟ್ಟ ಮತ್ತು ರಕ್ತದೊತ್ತಡ ಹಾಗೂ ಒಟ್ಟಾರೆ ಫಿಟ್ನೆಸ್ ಪರೀಕ್ಷೆಗಳ ವೈದ್ಯಕೀಯ ಅನುಮೋದನೆಗೆ ಒಳಪಟ್ಟಿರುತ್ತದೆ.
ಹೇಗೆ ಭಾಗವಹಿಸಬೇಕು
ರಕ್ತದಾನ ಮಾಡಲು ಬಯಸುವ ಯಾರೇ ಆದರೂ ಡಿಸೆಂಬರ್ 5, 2025ರಂದು ನೇರವಾಗಿ ಶಿಬಿರ ದಲ್ಲಿ ಭಾಗವಹಿಸಬಹುದು. ದಾನಿಯ ಸುರಕ್ಷತೆಗೆ ಸರಳ ನೋಂದಣಿ ಮತ್ತ ವೈದ್ಯಕೀಯ ಪರೀಕ್ಷಾ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಶಿಬಿರದ ತಾಣಗಳು ಮತ್ತಿತರೆ ವಿವರಗಳ ಕುರಿತು ಹೆಚ್ಚಿನ ಮಾಹಿತಿಗೆ ದಯವಿಟ್ಟು ಎಚ್.ಡಿ.ಎಫ್.ಸಿ. ಬ್ಯಾಂಕ್ ವೆಬ್ಸೈಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಭೇಟಿ ಮಾಡಿ ಪಡೆಯಿರಿ.