Danta Purana Movie: ಫೆ.6ರಂದು ಮಕ್ಕಳ ಚಲನಚಿತ್ರ ʼದಂತಪುರಾಣʼ ಬಿಡುಗಡೆ
Vijayanagara News: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಮಾನ್ಯತೆ ಪಡೆದು, ಮೂರು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ವಿಭಿನ್ನ ಕಥಾನವಸ್ತುವಿನ ಕನ್ನಡ ಸಿನಿಮಾ “ದಂತಪುರಾಣ” ಫೆ.6ರಂದು ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ನವೀನ್ ಶರ್ಮಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಂತಪುರಾಣ ಚಿತ್ರದ ನಿರ್ಮಾಪಕ ನವೀನ್ ಶರ್ಮಾ. -
ಹೊಸಪೇಟೆ, ಫೆ.2: ಕರ್ನಾಟಕ ರಾಜ್ಯ ಮೂರು ಪ್ರಶಸ್ತಿ ಪುರಸ್ಕೃತ ಮಕ್ಕಳ ಚಲನಚಿತ್ರ ದಂತಪುರಾಣ ಕನ್ನಡ ಚಲನಚಿತ್ರ (Danta Purana Movie) ಫೆ.6ರಂದು ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ನವೀನ್ ಶರ್ಮಾ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಮಾನ್ಯತೆ ಪಡೆದು, ಮೂರು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ವಿಭಿನ್ನ ಕಥಾನವಸ್ತುವಿನ ಕನ್ನಡ ಸಿನಿಮಾವಾಗಿದೆ. ಚಲನಚಿತ್ರದ ನಿರ್ದೇಶಕ ವಿಶಾಲ್ ರಾಜ್ ನಿದೇರ್ಶಿಸಿದ್ದಾರೆ ಎಂದು ಹೇಳಿದರು.
ಈ ಚಲನಚಿತ್ರ ಸಾಮಾಜಿಕ ಸಂದೇಶ, ನೈಜ ಪಾತ್ರಗಳು ಹಾಗೂ ಶಕ್ತಿಶಾಲಿ ನಿರೂಪಣೆ ಹೊಂದಿದೆ ಎಂದು ಅವರು ತಿಳಿಸಿದರು.
ಹೊಸಪೇಟೆ ಸ್ಥಳೀಯರ ಸಹಕಾರದೊಂದಿಗೆ ವಿಜಯನಗರ ಜಿಲ್ಲೆಯಲ್ಲಿ ಹೆಮ್ಮೆಯ ವಿಷಯವಾಗಿದೆ. ಈ ಗೌರವಪೂರ್ಣ ಸಾಧನೆಯೊಂದಿಗೆ, ಪ್ರಶಸ್ತಿ ಪಡೆದ ಮಕ್ಕಳ ಚಲನಚಿತ್ರ ದಂತಪುರಾಣ ಫೆ.6ರಂದು ಹೊಸಪೇಟೆ ನಗರದ ಮಿರಲಾಂ ಚಿತ್ರಮಂದಿರದಲ್ಲಿ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಎಲ್ಲಾ ಸಿನಿ ಪ್ರೇಕ್ಷಕರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಂದು ಈ ಐತಿಹಾಸಿಕ ಚಿತ್ರದ ಸವಿಯನ್ನು ಅನುಭವಿಸಿಬೇಕೆಂದು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.
Winter Fashion 2026: ವಿಂಟರ್ ಟ್ರಾವೆಲ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಶಿಯರ್ಲಿಂಗ್ ಜಾಕೆಟ್ಸ್
ಈ ಸಂದರ್ಭದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ನಿರ್ದೇಶಕ ವಿಶಾಲ್ ರಾಜ್, ಚಿತ್ರ ತಂಡದ ಗಣೇಶ್ ಯಾದವ್, ಶಿವ ಕುಮಾರ್, ಯೋಹನ್, ವಿರುಪಾಕ್ಷಿ ಹಾಗೂ ಇತರರು ಉಪಸ್ಥಿತರಿದ್ದರು.