Sunil Grover: ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್; ಮೆಚ್ಚಿದ ಫ್ಯಾನ್ಸ್
Sunil Grover: ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಸ್ಯನಟ ಸ್ವತಃ ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಯನಟ ಮತ್ತು ಬಾಲಿವುಡ್ ನಟ ಸುನಿಲ್ ಗ್ರೋವರ್ ರಾತ್ರಿ ವೇಳೆ ಗಂಗಾ ನದಿಯ ಘಾಟ್‌ನಲ್ಲಿ ಸಾಮಾನ್ಯರಂತೆ ಮಲಗಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಶೇರ್ ಮಾಡಿದ್ದಾರೆ.
ನಟ ಸುನಿಲ್ ಗ್ರೋವರ್ -
ಸುನಿಲ್ ಗ್ರೋವರ್ (sunil grover) ತಮ್ಮ ನಟನೆ ಮತ್ತು ಹಾಸ್ಯಕ್ಕಾಗಿ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನವರು. ಪ್ರತಿಭೆಯ ಹೊರತಾಗಿ, ಸುನಿಲ್ ತಮ್ಮ ಸರಳತೆಗಾಗಿಯೂ ಎದ್ದು ಕಾಣುತ್ತಾರೆ. ಹಾಸ್ಯವನ್ನು ಇಷ್ಟ ಪಡುವವರಿಗೆ ಸುನಿಲ್ ಗ್ರೋವರ್ ಪ್ರತಿಭೆ ಬಗ್ಗೆ ಮೆಚ್ಚುಗೆ ಇದ್ದೇ ಇರುತ್ತೆ. ಆಮಿರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್ (Slaman Khan) ಸೇರಿದಂತೆ ಹಿಂದಿ ಚಿತ್ರರಂಗದ ಎಲ್ಲಾ ಸ್ಟಾರ್‌ಗಳಿಗೂ ಸುನಿಲ್ ಗ್ರೋವರ್ ತುಂಬಾನೇ ಇಷ್ಟ. ಮತ್ತೊಮ್ಮೆ ಅವರ ಸರಳತೆಯಿಂದ ಸುದ್ದಿಯಲ್ಲಿದ್ದಾರೆ.
ವಿಡಿಯೋ ವೈರಲ್
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಸ್ಯನಟ ಸ್ವತಃ ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಯನಟ ಮತ್ತು ಬಾಲಿವುಡ್ ನಟ ಸುನಿಲ್ ಗ್ರೋವರ್ ರಾತ್ರಿ ವೇಳೆ ಗಂಗಾ ನದಿಯ ಘಾಟ್‌ನಲ್ಲಿ ಸಾಮಾನ್ಯರಂತೆ ಮಲಗಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Cocktail 2 and Ma Inti Bangaram: ಸಮಂತಾ ಮೂವಿ ಗಳಿಸಿದ್ದೆಷ್ಟು? ‘ಕಾಕ್‌ಟೇಲ್ 2’ ಕಲೆಕ್ಷನ್ ಇದು
ಅಲ್ಲಿಂದ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಆಕ್ಟಿವ್ ಆಗಿದ್ದಾರೆ. ಸದ್ಯ ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡಿ, ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಸುನಿಲ್ ಗ್ರೋವರ್ ಈ ವೀಡಿಯೊವನ್ನು "ಭೂಮಿಯ ಮೇಲಿನ ನಕ್ಷತ್ರಗಳು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೊ ಸುನಿಲ್ ಗ್ರೋವರ್ ಅವರ ಮುಖದಲ್ಲಿ ಶಾಂತಿಯುತ ಭಾವವನ್ನು ತೋರಿಸುತ್ತದೆ. "ಜೈ ಮಹಾಕಾಲ್" ಎಂಬ ಧಾರ್ಮಿಕ ಹಾಡನ್ನು ನುಡಿಸಿದ್ದಾರೆ. ಆದಾಗ್ಯೂ, ಅವರು ಯಾವ ಘಾಟ್‌ನಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ನಟ ಸ್ಥಳವನ್ನು ಬಹಿರಂಗಪಡಿಸಿಲ್ಲ.
ನಟ ಮತ್ತು ಹಾಸ್ಯನಟನನ್ನು ಇಷ್ಟು ಸರಳ ರೀತಿಯಲ್ಲಿ ನೋಡುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ, ನಟ ರಸ್ತೆಬದಿಯ ಹ್ಯಾಂಡ್ ಪಂಪ್‌ನಲ್ಲಿ ಬಟ್ಟೆ ಒಗೆಯುತ್ತಿರುವುದು ಕಂಡುಬಂದಿತ್ತು. ಅಮಿತಾಬ್ ಬಚ್ಚನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್‌ರಂತಹ ತಾರೆಯರನ್ನು ಅನುಕರಿಸುವ ಮೂಲಕ ಹೃದಯಗಳನ್ನು ಗೆದ್ದ ಸುನಿಲ್ ಗ್ರೋವರ್ ಅವರ ಇತ್ತೀಚಿನ ವೀಡಿಯೊಗೆ ನೆಟಿಜನ್‌ಗಳಿಂದ ಹಲವಾರು ಪ್ರತಿಕ್ರಿಯೆಗಳು ಬರುತ್ತಿವೆ.
ಹಾಗಂತ ಸುನಿಲ್ ಗ್ರೋವರ್ ಇಂತಹ ವಿಡಿಯೋಗಳನ್ನು ಮಾಡುವುದು ಹೊಸದೇನು ಅಲ್ಲ. ಈ ಹಿಂದೆ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಈ ಹಿಂದೆ ಹ್ಯಾಂಡ್‌ಪಂಪ್ ಮಾಡಿ ಬಟ್ಟೆ ಒಗೆದಿದ್ದು, ಹಳ್ಳಿ ಮನೆಯ ಒಲೆಯ ಮುಂದೆ ಕೂತು ರೊಟ್ಟಿ ಮಾಡಿದ ವಿಡಿಯೋಗಳಿಗೂ ಮೆಚ್ಚುಗೆ ವ್ಯಕ್ತವಾಗಿದ್ದವು.
ಇದನ್ನೂ ಓದಿ: Cocktail 2 and Ma Inti Bangaram: ಸಮಂತಾ ಮೂವಿ ಗಳಿಸಿದ್ದೆಷ್ಟು? ‘ಕಾಕ್‌ಟೇಲ್ 2’ ಕಲೆಕ್ಷನ್ ಇದು
ಆದರೆ, ಕೆಲವರು ಮಾತ್ರ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು "ಇದು ಸುಮ್ಮನೆ ತೋರಿಕೆಗೆ ಮಾಡಿದ ವಿಡಿಯೋ" ಎಂದು ಕಾಮೆಂಟ್ ಮಾಡಿದ್ದಾರೆ.