ಹೊಸಪೇಟೆ: ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾ (ರಿ), ವಿಜಯನಗರ ಜಿಲ್ಲಾ ಜಿಲ್ಲಾ ಧ್ಯಕ್ಷರನ್ನಾಗಿ ಪಿ. ಬಾಬು ಅವರನ್ನು ನೇಮಕ ಮಾಡಲಾಗಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾ (ರಿ) ರಾಜ್ಯ ಸಂಸ್ಥಾಪಕ ಅಧ್ಯಕ್ಷ ಆರ್. ಮುನಿರಾಜು ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Bhovi Mahasabha: ಸಿದ್ಧರಾಮೇಶ್ವರ ಭವನಕ್ಕೆ ಆಗ್ರಹಿಸಿ ಭೋವಿ ಮಹಾಸಭಾ ಮನವಿ
ಕರ್ನಾಟಕ ಭೋವಿ (ವಡ್ಡರ) ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯದಂತೆ, ವಿಜಯನಗರ ಜಿಲ್ಲೆಯಲ್ಲಿ ಮಹಾಸಭಾದ ಸಂಘಟನೆಯನ್ನು ಬಲಪಡಿಸುವುದು. ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವುದು. ರಾಜ್ಯ ಸಮಿತಿಯ ನಿರ್ದೇಶನಗಳನ್ನು ಪಾಲಿಸಿ, ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ತಾಲೂಕು/ಹೋಬಳಿ ಸಮಿತಿಗಳನ್ನು ರಚಿಸಲು ಮತ್ತು ಪದಾಧಿಕಾರಿಗಳನ್ನು ನೇಮಿಸಲು ಅಧಿಕಾರ ನೀಡಲಾಗಿದೆ. ತತ್‌ಕ್ಷಣದಿಂದ ವಿಜಯನಗರ ಜಿಲ್ಲಾ ಭೋವಿ (ವಡ್ಡರ) ಮಹಾಸಭಾದ ಜಿಲ್ಲಾಧ್ಯಕ್ಷರನ್ನಾಗಿ ಹೊಸಪೇಟೆ ನಗರದ ಪಿ.ಬಾಬು ಅವರನ್ನು ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶಿಸಲಾಗಿದ್ದು ಜಿಲ್ಲೆಯಲ್ಲಿ ಮಹಾಸಭಾವು ಇನ್ನಷ್ಟು ಸದೃಢವಾಗಿ ಬೆಳೆಯಲಿ ಹಾಗೂ ಸೇವೆಯು ಸಮುದಾಯಕ್ಕೆ ಮಾದರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.