Bhovi Mahasabha: ಸಿದ್ಧರಾಮೇಶ್ವರ ಭವನಕ್ಕೆ ಆಗ್ರಹಿಸಿ ಭೋವಿ ಮಹಾಸಭಾ ಮನವಿ
ಭೋವಿ ಸಮಾಜವು ಪ್ರಾಚೀನ ಕಾಲದಿಂದಲೂ ಬಂಡೆ ಯ ಕೆಲಸವನ್ನು ಮಾಡಿಕೊಂಡು ಅಸಂಘಟಿತ ರಾಗು ಉಳಿದ ಕಾರಣ ಶೈಕ್ಷಣಿಕವಾಗಿ, ಸಾಮಾಜಿಕ ವಾಗಿ, ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ.


ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರವೂ ಸೇರಿದಂತೆ ಚಿಂತಾಮಣಿ, ಶಿಡ್ಲಘಟ್ಟ, ಗುಡಿಬಂಡೆ,ಚೇಳೂರು, ಬಾಗೇಪಲ್ಲಿ ತಾಲೂಕುಗಳಲ್ಲಿ ಭೋವಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಇಲ್ಲೆಲ್ಲಾ ಶಿವಯೋಗಿ ಸಿದ್ಧರಾಮೇಶ್ವರ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಒತ್ತಾ ಯಿಸಿ ಕರ್ನಾಟಕ ರಾಜ್ಯ ಭೋವಿ ಮಹಾಸಭಾ ರಾಜ್ಯಾಧ್ಯಕ್ಷ ಆರ್.ಮುನಿರಾಜು, ಉಪಾಧ್ಯಕ್ಷ ಎಂ.ಗುರಪ್ಪ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಿದ್ಧರಾಮೇಶ್ವರ ಜಯಂತಿ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿದ ಮುಖಂಡರು ನಂತರ ಮಾಧ್ಯಮದೊಂದಿಗೆ ಮಾತಾಡಿದರು.
ಸಂಘದ ಉಪಾಧ್ಯಕ್ಷ ಗುರಪ್ಪ ಮಾತನಾಡಿ ಭೋವಿ ಸಮಾಜವು ಪ್ರಾಚೀನ ಕಾಲದಿಂದಲೂ ಬಂಡೆ ಯ ಕೆಲಸವನ್ನು ಮಾಡಿಕೊಂಡು ಅಸಂಘಟಿತರಾಗು ಉಳಿದ ಕಾರಣ ಶೈಕ್ಷಣಿಕವಾಗಿ, ಸಾಮಾಜಿಕ ವಾಗಿ, ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ.ಈಗಲೂ ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ, ಮೂಡನಂಬಿಕೆ,ಬಡತನ ಹೆಚ್ಚಿದ್ದು ಅನೇಕ ಕಾಲೋನಿಗಳಲ್ಲಿ ಊರಾಚೆ ಗುಡಿಸಲುಗಳಲ್ಲಿ ವಾಸ ವಾಗಿದ್ದಾರೆ. ಅನೇಕರು ರಸ್ತೆ ನಿರ್ಮಾಣ ಕಾಯಕದಲ್ಲಿ ತೊಡಗಿರುವ ಕಾರಣ ಅಲ್ಲಿಯೇ ರಸ್ತೆ ಬದಿ ಮಲಗುತ್ತಾರೆ.ಹೀಗಾಗಿ ನಮ್ಮ ಸಮುದಾಯದ ಪುರೋಭಿವೃದ್ಧಿಗೆ ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಂಡು ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ನೀಡಿದರು.
ಹಕ್ಕೊತ್ತಾಯಗಳು:
೧.ಭೋವಿ ಸಮುದಾಯ ಉಳುಮೆ ಮಾಡುತ್ತಿರುವ ಭೂಮಿಗೆ ಸಕ್ರಮಗೊಳಿಸಿ ಸಾಗುವಳಿ ಚೀಟಿ, ಹಕ್ಕುಪತ್ರಗಳನ್ನು ನೀಡಬೇಕು.
೨.ಭೋವಿ ಸಮುದಾಯ ಬಂಡೆ ಕೆಲಸ ಮಾಡಲು ಜಿಲ್ಲಾಡಳಿತ ಕಾನೂನು ಬದ್ಧ ಅನುಮತಿ ನೀಡಬೇಕು.
೩.ಭೋವಿ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಪೂರಕ ವಾಗುವಂತೆ ವಿದ್ಯಾರ್ಥಿ ವೇತನದೊಟ್ಟಿಗೆ ಪ್ರೋತ್ಸಾಹ ಧನ ನೀಡಬೇಕು.
೪.ಭೋವಿ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು.ಇದನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
೫.ಭೋವಿ ಸಮುದಾಯದವರು ತಮ್ಮ ಮೇಲೆ ಮೇಲ್ವರ್ಗದವರು ನಡೆಸುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ದೂರು ನೀಡಿದರೆ, ಕ್ರಮವಹಿಸಬೇಕಾದ ಪೊಲೀಸರು ಕೌಂಟರ್ ಕೇಸ್ ಹಾಕುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು.
೬.ಭೋವಿ ಸಮುದಾಯ ವಾಸಿಸುತ್ತಿರುವ ಕಾಲೋನಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
೭.ಅಕ್ರಮವಾಗಿ ನಡೆಸುತ್ತಿರುವ ಜಲ್ಲೊ ಕ್ರಶರ್‌ಗಳನ್ನು ನಿಲ್ಲಿಸಬೇಕು.ಜಿಲ್ಲಾ ಭೋವಿ ಅಭಿವೃದ್ಧಿ ನಿಗಮ ಕಚೇರಿಯನ್ನು ಪ್ರತ್ಯೇಕಗೊಳಿಸಬೇಕು. ಭೋವಿ ಅಭಿವೃದ್ಧಿ ನಿಗಮದಲ್ಲಿ ಹೆಚ್ಚಿರುವ ದಲ್ಲಾಳಿ ಗಳನ್ನು ನಿಯಂತ್ರಿಸಿ ಸರಕಾರಿ ಸೌಕರ್ಯ ಸೌಲಭ್ಯ ಎಲ್ಲರಿಗೂ ದಕ್ಕುವಂತೆ ನೋಡಿಕೊಳ್ಳ ಬೇಕು. ಸದಾಶಿವ ಆಯೋಗದ ವರದಿ ತಿರಸ್ಕರಿಸಿ ಜಸ್ಟೀಸ್ ನಾಗಮೋಹನ್‌ದಾಸ್ ವರದಿಯನ್ನು ಅನುಷ್ಟಾನ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದರು.