ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hospet News: ಆರೋಗ್ಯ ಸಂಪತ್ತನ್ನು ಹೊಂದುವುದಕ್ಕೆ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತದೆ

10ನೇ ಆಯುರ್ವೇದ ದಿನಾಚರಣೆ (ಧನ್ವಂತರಿ ಜಯಂತಿಯ) ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಸಲಹೆ, ಚಿಕಿತ್ಸೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಹಾಗೂ ಔಷಧಿ ವಿತರಣೆ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಶಿಬಿರದಲ್ಲಿ ರಕ್ತ ಪರೀಕ್ಷೆ, ರಕ್ತದಾನ, ಇಸಿಜಿ ಇತ್ಯಾದಿ ಸೌಲಭ್ಯಗಳ ಸದುಪಯೋಗ ವನ್ನು ಪಡೆದುಕೊಳ್ಳಬೇಕು

ಜೀವನದಲ್ಲಿ ಆರೋಗ್ಯವೇ ಮಹಾಭಾಗ್ಯ: ಡಾ.ಮುನಿವಾಸದೇವ ರೆಡ್ಡಿ

ಹೊಸಪೇಟೆ: ಜೀವನದಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದ್ದು ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚನ ಗಮನ ನೀಡಬೇಕು ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಪಿ. ಮುನಿವಾಸದೇವರೆಡ್ಡಿ ತಿಳಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಇನ್ನರ್‌ವೀಲ್ ಕ್ಲಬ್, ಎ.ಎಫ್.ಐ. ವಿಜಯನಗರ ಸಹಯೋಗದಲ್ಲಿ

10ನೇ ಆಯುರ್ವೇದ ದಿನಾಚರಣೆ (ಧನ್ವಂತರಿ ಜಯಂತಿಯ) ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಸಲಹೆ, ಚಿಕಿತ್ಸೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಹಾಗೂ ಔಷಧಿ ವಿತರಣೆ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಶಿಬಿರದಲ್ಲಿ ರಕ್ತ ಪರೀಕ್ಷೆ, ರಕ್ತದಾನ, ಇಸಿಜಿ ಇತ್ಯಾದಿ ಸೌಲಭ್ಯ ಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Hospete News: ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಪ್ರಗತಿ ಪರಿಶೀಲನ ಸಭೆ

ಏ ಎಫ್ ಐ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೇದಾರೇಶ್ವರ ದಂಡಿನ್ ಮಾತನಾಡಿ, ಧನ್ವಂತರಿ ಜಯಂತಿಯ ಹಿನ್ನೆಲೆ ವಿವರಿಸಿ, ಭಗವಾನ್ ಧನ್ವಂತರಿ ಸಾಗರ ಮಂತನದ ಸಮಯದಲ್ಲಿ ಅಮೃತ ಕಳಶದೊಂದಿಗೆ ಪ್ರತ್ಯಕ್ಷವಾದ ದಿನದಂದು ಧನ್ವಂತರಿ ಜಯಂತಿ ಆಚರಿಸಲಾಗುತ್ತದೆ. ಅಂದೇ ಧನ್ ತೆರಾಸ್ ಆಚರಿಸಲಾಗುತ್ತದೆ ಎಂದರು.

ಧನದ ಸಂಪತ್ ಗಿಂತ ಆರೋಗ್ಯದ ಸಂಪತ್ ಬಹಳ ಪ್ರಮುಖವಾಗಿದೆ. ಆರೋಗ್ಯ ಸಂಪತ್ತನ್ನು ಹೊಂದುವುದಕ್ಕೆ ಆಯುರ್ವೇದ ಪ್ರಮುಖ ಪಾತ್ರವಹಿಸುತ್ತದೆ. ಎಲ್ಲರೂ ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಲು ಆಯುರ್ವೇದದಲ್ಲಿ ತಿಳಿಸಿದ ಅಂಶಗಳನ್ನು ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

ಏ ಎಫ್ ಐ ಹೊಸಪೇಟೆ ತಾಲೂಕ ಘಟಕದ ಅಧ್ಯಕ್ಷ ಡಾ. ಬಿ. ವಿ. ಭಟ್ ಮಾತನಾಡಿ, ಆಯುರ್ವೇದ ಧ್ಯೇಯವೇ ಸರ್ವೇ ಸಂತು ನಿರಾಮಯಃ, ಅಂದರೆ ಎಲ್ಲರೂ ನಿರೋಗಿಗಳಾಗಿ ಇರುವುದು. ನಮ್ಮ ಆರೋಗ್ಯ ನಮ್ಮ ಮನೆಯಲ್ಲಿ, ನಮ್ಮ ಜೀವನ ಶೈಲಿಯಲ್ಲಿ ಹಾಗೂ ನಮ್ಮ ಆಹಾರದಲ್ಲಿದೆ. ಅದನ್ನು ನಾವು ಹಾಳು ಮಾಡಿಕೊಂಡು ಆರೋಗ್ಯಕ್ಕಾಗಿ ಹೊರಗೆ ಹುಡುಕುವಂತೆ ಆಗಿದೆ. ಎಲ್ಲರೂ ಆಯು ರ್ವೇದದ ಸೂತ್ರಗಳನ್ನು ಅಳವಡಿಸಿಕೊಂಡು ಆರೋಗ್ಯವಾಗಿರಬೇಕು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿಗಳ ಸಂಘದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ. ಹೆಚ್. ಗುರು ಬಸವರಾಜ ಮಾತನಾಡಿ, 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಘೋಷವಾಕ್ಯವಾದ ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದದ ಬಗ್ಗೆ ತಿಳಿಸಿ ದರು. ಹೇಗೆ ಆಯುರ್ವೇದವು ಜನರಿಗೆ ಮತ್ತು ಜಗತ್ತಿಗೆ ಅವಶ್ಯಕವಾಗಿದೆ ಮತ್ತು ಪ್ರಕೃತಿಗೆ ಹತ್ತಿರ ವಾದ, ನಮ್ಮದೇ ಆದ ವೈದ್ಯಕೀಯ ಶಾಸ್ತ್ರದ ವೈಜ್ಞಾನಿಕ ಹಿನ್ನೆಲೆ ವಿವರಿಸಿದರು.

ಆಯುರ್ವೇದದ ಮುಖ್ಯ ತತ್ವವಾದ ಸ್ವಾಸ್ಥಸ್ಯ ಸ್ವಾಸ್ಥ್ಯ ರಕ್ಷಣಂ ಆತುರಸ್ಯ ವಿಕಾರ ಪ್ರಶಮ ನಂವನ್ನು ವಿವರಿಸಿ ಆಯುರ್ವೇದ ಶಾಸ್ತ್ರದಲ್ಲಿ ರೋಗಿಗಳ ಚಿಕಿತ್ಸೆಯ ಜೊತೆಗೆ ಸ್ವಸ್ಥರಲ್ಲಿ ಆರೋಗ್ಯ ಸಂರಕ್ಷಣೆಗೆ ನೀಡಿರುವ ಮಹತ್ವವನ್ನು ತಿಳಿಸಿದರು.

ಆಧುನಿಕ ಜೀವನ ಶೈಲಿಯ ವಿಕಾರಗಳಾದ ಮಧು ಮೇಹ, ರಕ್ತದೊತ್ತಡ, ಬೊಜ್ಜು ಇತ್ಯಾದಿ ತೊಂದರೆಗಳಿಗೆ ನಿತ್ಯ ಊಟದಲ್ಲಿ ಸಕ್ಕರೆಯನ್ನು ಹೆಚ್ಚು ಮಾಡುವ ಸಂಸ್ಕರಿಸಿದ, ಧಾನ್ಯಗಳ ಸೇವನೆಯನ್ನು ಕಡಿಮೆ ಮಾಡಿ, ಸೂಕ್ತ ದೈಹಿಕ ಚಟುವಟಿಕೆಗಳಿಂದ ಸುಲಭವಾಗಿ ರೋಗಗಳ ನಿಯಂತ್ರಣ ಮಾಡುವುದರ ಬಗ್ಗೆ ಮಾಹಿತಿ ನೀಡಿದರು.

ಶಿಬಿರಕ್ಕೆ ಇನ್ನರ್ವಿಲ್ ಅಧ್ಯಕ್ಷೆ ನೈಮಿಷ ಉದ್ಘಾಟಿಸಿದರು. ಡಾ. ಪ್ರಸಾದ್ ಬಾಬು ನಿರೂಪಿಸಿದರು. ಡಾ. ಗುರುಬಸವರಾಜ ವಂದಿಸಿದರು.

ಶಿಬಿರದಲ್ಲಿ ಡಾ. ಶೈಲೇಂದ್ರ ಪ್ರತಾಪ್ ಸಿಂಗ್, ಡಾ. ರಾಧಾ ಗುರುಬಸವರಾಜ್, ಡಾ. ಚೇತನ್, ಡಾ. ಸಿಕಂದರ್ ಡಾ. ಹಾಲಮ್ಮ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಬಳಗಾನೂರು ಮಂಜುನಾಥ, ಡಾ. ಸರಸ್ವತಿ ಕೋಟೆ, ಡಾ. ಹೇಮಲತಾ, ಡಾ. ರೂಪ್ ಸಿಂಗ್ ರಾಥೋಡ್, ಡಾ. ಶಿವಶರಣಯ್ಯ, ಡಾ. ಆರತಿ ಹಿರೇಮಠ್, ಡಾ. ಅಶೋಕ್ ಡಾ. ಮಂಜುನಾಥ್ ಹನಸಿ, ಡಾ. ಯಶ್ವಂತ್, ಡಾ. ಧೀರಜ್, ಡಾ. ಸಾಕ್ಷಿ, ರೋಟರಿ ರಕ್ತ ಬಂಡಾರದ ಸಿಬ್ಬಂದಿಗಳು, ಆಯುಷ್ ಇಲಾಖೆಯ ಸಿಬ್ಬಂದಿಗಳು ಸೇವೆಯನ್ನು ಸಲ್ಲಿಸಿದರು.

ಸುಮಾರು 230ಕ್ಕೂ ಅಧಿಕ ಜನರು ಶಿಬಿರದ ಉಪಯೋಗವನ್ನು ಪಡೆದುಕೊಂಡರು.

ಶಿಬಿರದಲ್ಲಿ ಸುಮಾರು 38 ಜನರಿಗೆ ಇಸಿಜಿ ಮತ್ತು 130 ಜನರಿಗೆ ರಕ್ತ ಪರೀಕ್ಷೆ ಮಾಡಲಾಯಿತು. ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು.