ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊಸಪೇಟೆಯಲ್ಲಿ ಗಣೇಶ ಮೂರ್ತಿ ಸಾಗಿಸುವ ವೇಳೆ ಅವಘಡ; ವಿದ್ಯುತ್​ ಸ್ಪರ್ಶಿಸಿ ಇಬ್ಬರಿಗೆ ಗಂಭೀರ ಗಾಯ!

Ganesh Chaturthi 2026: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಅನಂತಶಯನಗುಡಿಯ ಹೊರವಲಯದಲ್ಲಿ ಘಟನೆ ನಡೆದಿದೆ. ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗಣೇಶ ಮೂರ್ತಿ ಸಾಗಿಸುವ ವೇಳೆ ವಿದ್ಯುತ್​ ಸ್ಪರ್ಶಿಸಿ ಇಬ್ಬರಿಗೆ ಗಾಯ!

-

Prabhakara R
Prabhakara R Sep 14, 2026 7:44 PM

ವಿಜಯನಗರ: ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾಗಲೇ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನಗುಡಿಯ ಹೊರವಲಯದಲ್ಲಿ ಅವಘಡವೊಂದು ನಡೆದಿದೆ. ಗಣೇಶ ಮೂರ್ತಿಯನ್ನು ಸಾಗಿಸುವ ವೇಳೆ ವಿದ್ಯುತ್​ ಸ್ಪರ್ಶವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಣಪತಿ ಮೂರ್ತಿ ಕೊಂಡೊಯ್ಯುವ ವೇಳೆ ವಿದ್ಯುತ್ ಲೈನ್​ಗೆ ಗಣೇಶನ ಮೂರ್ತಿಗೆ ಕಟ್ಟಿದ್ದ ಬಿದಿರಿನ ಕೋಲು ಟಚ್ ಆಗಿದೆ. ಈ ವೇಳೆ ವಾಹನದಲ್ಲಿದ್ದ ಹುಲುಗಪ್ಪ, ದೀಪಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು, ವಿದ್ಯುತ್ ಸ್ಪರ್ಶಕ್ಕೆ ಟ್ರ್ಯಾಕ್ಟರ್​ ಮತ್ತು ಬೃಹತ್​ ಗಣಪನ ಮೂರ್ತಿ ಕಾಲುವೆಗೆ ಬಿದ್ದಿದೆ.

ಗಾಯಗೊಂಡವರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ನಡೆದ ಸ್ಥಳಕ್ಕೆ ವಿಜಯನಗರ ಎಸ್​ಪಿ ಜಾಹ್ನವಿ ಎಸ್, ಹೊಸಪೇಟೆ ಡಿವೈಎಸ್​ಪಿ ಮುರಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.