ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Reservation: ಎಸ್.ಟಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಜಾರಿಗೆ ಆಗ್ರಹಿಸಿ ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ

ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಜಗದ್ಗುರು ಡಾ.ಪ್ರಸನ್ನಾನಂದ ಮಹಾಸ್ವಾಮಿಗಳ ಆದೇಶದ ಮೇರೆಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಮೀಸಲಾತಿ ರದ್ದು ಗೊಳಿಸಿರುವ ರಾಜ್ಯ ಉಚ್ಛ ನ್ಯಾಯಾಲಯದ ಅದೇಶದ ವಿರುದ್ದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಅನುಭವಿ ಹಿರಿಯ ವಕೀಲರನ್ನು ನೇಮಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು

ಹೊಸಪೇಟೆ: ರಾಜ್ಯ ಸರ್ಕಾರ ರಾಜ್ಯದ ಎಸ್.ಟಿ ಸಮುದಾಯ(ST Community)ಕ್ಕೆ ನೀಡಿದ್ದ ಶೇ.7 ರಷ್ಟು ಮೀಸಲಾತಿ(Reservation) ಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಒತ್ತಾಯಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಾಲ್ಮೀಕಿ ನಾಯಕ ಸಮಾಜ ದವರು ಎಸ್. ಟಿ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಅವರಿಗೆ ಮನವಿಪತ್ರ ಸಲ್ಲಿಸಿದರು.

ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಜಗದ್ಗುರು ಡಾ.ಪ್ರಸನ್ನಾನಂದ ಮಹಾಸ್ವಾಮಿಗಳ ಆದೇಶದ ಮೇರೆಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಮೀಸಲಾತಿ ರದ್ದುಗೊಳಿಸಿರುವ ರಾಜ್ಯ ಉಚ್ಛ ನ್ಯಾಯಾಲಯ(High Court)ದ ಅದೇಶದ ವಿರುದ್ದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಅನುಭವಿ ಹಿರಿಯ ವಕೀಲರನ್ನು ನೇಮಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ

ಅಲ್ಲದೆ ರಾಜ್ಯದಲ್ಲಿ ಸುಸಜ್ಜಿತ ಬುಡಕಟ್ಟು ವಿಶ್ವವಿದ್ಯಾಲಯ ವನ್ನು ಸ್ಥಾಪಿಸುವಂತೆ, ಎಸ್. ಟಿ ಜಾತಿ ಪ್ರಮಾಣ ಪತ್ರ ದುರ್ಬಳಕೆ ಆಗದಂತೆ ಕ್ರಮ ಜರುಗಿಸುವಂತೆ, ಅರ್ಹ ಫಲಾನುಭವಿಗಳಿಗೆ ಮಾತ್ರ ಎಸ್.ಟಿ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ವಿತರಿಸಲು ಜಿಲ್ಲಾಧಿಕಾರಿ ಗಳು ಹಾಗೂ ತಹಶಿಲ್ದಾರರುಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನೆ ಸಾಂಕೇತಿಕವಾಗಿದ್ದು. ಎಸ್.ಟಿ‌ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ ದೊರೆಯ ದಿದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ದರು.

ಮನವಿಪತ್ರ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಕಛೇರಿಗೆ ರವಾನಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಂಡಿ ರಾಘವೇಂದ್ರ, ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ, ಮುಖಂಡರಾದ ಗೋಸಲ ಭರಮಪ್ಪ, ಡಾ.ಕೆ.ಪನ್ನಂಗಧರ್, ಕಟಿಗಿ ಜಂಬಯ್ಯ ನಾಯಕ, ಕಿಚಿಡಿ ವಸಂತ, ಎಂ.ಜಂಬಯ್ಯ ನಾಯಕ ಮಾತನಾಡಿದರು.

ಪ್ರತಿಭಟನೆಯಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ, ಉಪಾಧ್ಯಕ್ಷ ಕಿನ್ನಾಳ ಹನುಮಂತ, ಸಹ ಕಾರ್ಯದರ್ಶಿ ಸಿಂದಿಗೇರಿ ದೇವೇಂದ್ರಪ್ಪ, ಖಜಾಂಚಿ ತಳವಾರ ದುಶ್ಯಂತ ಕುಮಾರ್, ನಿರ್ದೇಶಕರಾದ ಎಸ್.ಎಸ್.ಚಂದ್ರಶೇಖರ್, ಗುಡುಗುಂಟಿ ಮಲ್ಲಿಕಾರ್ಜುನ, ತಾರಿಹಳ್ಳಿ ವೆಂಕಟೇಶ್, ಜಂಬಾನಳ್ಳಿ ವಸಂತ, ನಾಣಿಕೇರಿ ಯಂಕಪ್ಪ, ಸಣ್ಣಕ್ಕಿ ಹುಲುಗಪ್ಪ, ಹೊಸಕೇರಿ ಸಣ್ಣ ವೆಂಕಟೇಶ, ಮಾಳಗಿ ವಸಂತ, ದಂಗಡಿ ನಾಗರಾಜ, ಬಿ.ವೀರಭದ್ರ, ಜಾಗೃತ ನಾಯಕ ಬಳಗದ ಅಧ್ಯಕ್ಷ ಬ್ಯಾಲಾಳ್ ಜನಾರ್ದನ, ಪ್ರಧಾನ ಕಾರ್ಯದರ್ಶಿ ತಳವಾರ ಪಕ್ಕೀರಪ್ಪ, ಗೌರವಾಧ್ಯಕ್ಷ ದುರುಗಪ್ಪ ಪೂಜಾರಿ, ನಗರಸಭೆ ಸದಸ್ಯ ಕಾಮಟಗಿ ಮುಖಂಡರಾದ ಕಿಚಿಡಿ ಶ್ರೀನಿವಾಸ, ಕಿಶೋರ್ ಕುಮಾರ್, ಗುಜ್ಜಲ ಗಣೇಶ್, ಗುಂಡಿ ಪ್ರಶಾಂತ, ಬ್ಯಾಂಕ್ ಚಂದ್ರಪ್ಪ, ತಾರಿಹಳ್ಳಿ ಆನಂದ ಕಣ್ಣಿ ಶ್ರೀಕಂಠ, ಪಿ.ವಿ.ವೆಂಕಟೇಶ, ಪಿ.ವೆಂಕೋಬ ನಾಯಕ, ತಾರಿಹಳ್ಳಿ ಶ್ರೀನಿವಾಸ, ಗುಜ್ಜಲ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಜಂಬಾನಳ್ಳಿ ಸಂದೀಪ, ಗುಜ್ಜಲ ನಿಂಗಪ್ಪ, ಕಿಚಿಡಿ ಸುನೀಲ್ ಕುಮಾರ್, ಮರಡಿ ಗಂಗಪ್ಪ, ಮರಡಿ ರಾಮಣ್ಣ, ಬಿ.ಟಿ.ಮಂಜುನಾಥ, ಕೆ.ರಾಮಪ್ಪ, ಕಟಿಗಿ ವಿಜಯ್ ಕುಮಾರ್, ಕಟಿಗಿ ಜಂಬಯ್ಯ, ಕಟಿಗಿ ರಾಮಕೃಷ್ಣ, ಸೊಸೈಟಿ ರಾಮಣ್ಣ, ಡಿ.ವಿರೂಪಾಕ್ಷ, ನೀರಲಿಗಿ ಹುಲುಗಪ್ಪ ಸೇರಿದಂತೆ ಸಮಾಜದ ಬಂಧುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.