ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ

ಜ್ಞಾನ, ಭಕ್ತಿಗಳಿಂದ ಮೋಕ್ಷ ಸಾಧನಿಗೆ ಮನುಷ್ಯನು ಹಂತ ಹಂತವಾಗಿ ಸಾಧನೆಯನ್ನು ಮಾಡಬೇಕು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು. ಸರ್ಕಾರವು ಮಧ್ವ ಜಯಂತಿಯನ್ನು ಆಚರಿಸಲು ಆದೇಶ ನೀಡಿರುವುದರಿಂದ ನಮ್ಮ ಬ್ರಾಹ್ಮಣ ಸಮಾಜವು ಅದನ್ನು ಸ್ವಾಗತಿಸುತ್ತದೆ. ಸರ್ಕಾರಕ್ಕೆ ಧನ್ಯವಾದ ಗಳನ್ನು ಸಲ್ಲಿಸುತ್ತದೆ

Hospet News: ಶ್ರೀಮಧ್ವಾಚಾರ್ಯ ಜಯಂತಿ ಆಚರಣೆ

-

Profile
Ashok Nayak Oct 22, 2026 9:47 AM

ಹೊಸಪೇಟೆ: ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಸರಕಾರದಿಂದ ಘೋಷಣೆ ಗೊಂಡ ಶ್ರೀಮಧ್ವಾಚಾರ್ಯ ಜಯಂತಿಯನ್ನು ಆಚರಿಸಲಾಯಿತು. ಬ್ರಾಹ್ಮಣ ಸಮುದಾಯದ ಮುಖಂಡರು ಶ್ರೀಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬ್ರಾಹ್ಮಣ ಸಮುದಾಯದ ಅಧ್ಯಕ್ಷ ದಿವಾಕರ ಮಾತನಾಡಿ, ರಾಜ್ಯಾದ್ಯಂತ ಶ್ರೀಮಧ್ವಾಚಾರ್ಯ ಜಯಂತಿಯನ್ನು ಶ್ರದ್ಧೆ ಭಕ್ತಯಿಂದ ಆಚರಿಸಲಾಗುತ್ತಿದೆ. ಮಧ್ವಾಚಾರ್ಯರು ಸಹ ಆಚಾರ್ಯ ತ್ರಯರಲ್ಲಿ ಒಬ್ಬರಾದವರು. ಮನುಷ್ಯನು ಇಹಲೋಕದಲ್ಲಿ ಎಲ್ಲಾ ಸುಖ ಸೌಭಾಗ್ಯಗಳನ್ನು ಅನುಭವಿಸಿದ ಮೇಲೆ ವಿರಕ್ತನಾಗಿ ಭಕ್ತಿಯಿಂದ ಪರಮಾತ್ಮನನ್ನು ಆರಾಧಿಸಿ ಅವನನ್ನು ಸೇರುವ ಮಾರ್ಗವನ್ನು ತಿಳಿಸಿಕೊಟ್ಟವರು.

ಇದನ್ನೂ ಓದಿ: Hospet News: ಭೂಮಿಯ ಮೇಲೆ ಬದುಕುವ ಹಕ್ಕು ಪ್ರತಿಯೊಂದು ಜೀವಿಗೂ ಸಮಾನವಾಗಿದೆ

ಜ್ಞಾನ, ಭಕ್ತಿಗಳಿಂದ ಮೋಕ್ಷ ಸಾಧನಿಗೆ ಮನುಷ್ಯನು ಹಂತ ಹಂತವಾಗಿ ಸಾಧನೆಯನ್ನು ಮಾಡಬೇಕು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು. ಸರ್ಕಾರವು ಮಧ್ವ ಜಯಂತಿಯನ್ನು ಆಚರಿಸಲು ಆದೇಶ ನೀಡಿರುವುದರಿಂದ ನಮ್ಮ ಬ್ರಾಹ್ಮಣ ಸಮಾಜವು ಅದನ್ನು ಸ್ವಾಗತಿಸುತ್ತದೆ. ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದರು‌‌.

ವಿಷ್ಣು ಸಹಸ್ರನಾಮ ಮಂಡಳಿ ಕಾರ್ಯಧ್ಯಕ್ಷ ಶ್ರೀನಿವಾಸ್ ತಂತ್ರಿ ಮಾತನಾಡಿ, ಮಧ್ವಾಚಾರ್ಯರು ಪಂಚಭೇಧಾತ್ಮಕ ಪ್ರಪಂಚವನ್ನು ತತ್ವ ಸಿದ್ಧಾಂತಗಳ ಮೂಲಕ ಜಗತ್ತಿಗೆ ತೋರಿಸಿ. ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯವನ್ನು ಸಾಮಾನ್ಯ ಜನರಿಗೂ ತಿಳಿಯುವಂತೆ ಅನುಗ್ರಹಿಸಿದ ಮಹಾನು ಭಾವರು. ಉಡುಪಿ ಬಳಿಯ ಪಾಜಕ ಕ್ಷೇತ್ರದಲ್ಲಿ ಜನಿಸಿದ ಇವರು ನಮ್ಮ ಕನ್ನಡಿಗರಾಗಿರುವುದು ನಮಗೆ ಹೆಮ್ಮೆಯ ವಿಷಯ ಎಂದರು‌.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್, ತಹಶೀಲ್ದಾರ ಮೇಘಾ, ಸರ್ಕಾರಿ ಸಿಬ್ಬಂದಿ ವರ್ಗದವರು, ಬ್ರಾಹ್ಮಣ ಸಮುದಾಯದ ಪ್ರಮುಖರಾದ ರಮೇಶ್ ಪುರೋಹಿತ್, ವೆಂಕಟೇಶ್ ಮೂರ್ತಿ, ನರಸಿಂಹಮೂರ್ತಿ, ಕಲ್ಲಂ ಭಟ್, ಸೀನಂ ಭಟ್, ಕಿರಣ್, ಚಂದ್ರಕಾಂತ್ ಕಾಮತ್, ಶ್ರೀನಿವಾಸ ರಾಯಸಂ, ವಿನಯ್ ಇತರರಿದ್ದರು.