ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KUWJ: ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಜಿಲ್ಲಾ ಅಧ್ಯಕ್ಷರಾಗಿ ಪಿ.ಸತ್ಯನಾರಾಯಣ ಆಯ್ಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( Karnataka Working Journalists Association)ದ 2025-28 ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಿ.ಸತ್ಯ ನಾರಾಯಣ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಕೆ.ಲಕ್ಷ್ಮಣ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಪಿ.ವೆಂಕೋಬ ನಾಯಕ, ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ಸುರೇಶ್ ಚವ್ಹಾಣ್, ಎಂ.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೊಸಪೇಟೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( Karnataka Working Journalists Association)ದ 2025-28 ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಿ.ಸತ್ಯ ನಾರಾಯಣ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಕೆ.ಲಕ್ಷ್ಮಣ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಪಿ.ವೆಂಕೋಬ ನಾಯಕ, ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ಸುರೇಶ್ ಚವ್ಹಾಣ್, ಎಂ.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

P. Satyanarayana

ಜಿಲ್ಲಾ ಉಪಾಧ್ಯಕ್ಷರ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಿ.ಕೆ.ನಾಗರಾಜ್, ಡಿ.ರುದ್ರಪ್ಪ, ಟಿ.ಬಿ.ರಾಜ ಇವರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ 15 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿರುತ್ತದೆ.

ಇದನ್ನೂ ಓದಿ: Hospet News: ಹೊಚ್ಚ ಹೊಸ ವಿನ್ಯಾಸಗಳೊಂದಿಗೆ ಹೊಸಪೇಟೆಗೆ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಆಭರಣ ಪ್ರದರ್ಶನ!

ಅವಿರೋಧ ಆಯ್ಕೆಯಾದವರಲ್ಲಿ ಸಿ.ಶಿವಾನಂದ, ಭೀಮರಾಜ.ಯು, ಆನಂತ ಪದ್ಮನಾಭ ರಾವ್, ಬಿ.ಕುಮಾರಸ್ವಾಮಿ, ಸಂಜಯ ಕುಮಾರ, ಎಂ.ಬಿ.ವೀರೇಶ್ವರ, ವೀರೇಶ್ ಅಂಗಡಿ, ಪಿ.ಶ್ರೀನಿವಾಸಲು, ಇಂದಿರಾ ಕಲಾಲ್, ವಿರೇಂದ್ರ ನಾಗಲದಿನ್ನಿ, ರಾಮ್ ಪ್ರಸಾದ್ ಗಾಂಧಿ, ಹೆಚ್.ವೆಂಕಟೇಶ್, ಕೆ.ಬಿ.ಖವಾಸ್, ಆನಂತ್ ಜೋಶಿ ಹಾಗೂ ಎಸ್.ಎಂ.ಬಸವರಾಜ ಇವರು ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿದ್ದಾರೆ.

ಸಂಘದ ಪದಾಧಿಕಾರಿಗಳ ಚುನಾವಣಾಧಿಕಾರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಹಿರಿಯ ಸಹಾಯಕ ನಿದೇರ್ಶಕರಾದ ಧನಂಜಯಪ್ಪ.ಬಿ. ಇವರು ಚುನಾವಣಾ ಪ್ರಕ್ರಿಯೆ ನಡೆಸಿ ಚುನಾವಣಾ ಫಲಿತಾಂಶ ಘೋಷಿಸಿದ್ದಾರೆ.