ಕೊಲ್ಹಾರ: ಪಟ್ಟಣದ ವ್ಯಾಪ್ತಿಯ ಯುಕೆಪಿಯಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ನೀಡುತ್ತಿದ್ದ ಎರಡು ಮಂಗಗಳನ್ನು ಸ್ಥಳೀಯ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಬಾದಾಮಿಯ ಪರಿಣಿತ ಮಂಗಗಳ ಸೆರೆ ಹಿಡಿಯುವ ತಜ್ಞರಿಂದ ಕಾರ್ಯಾಚರಣೆ ನಡೆಸಿ ಮಂಗ ಗಳನ್ನು ಬಲೆಗೆ ಕೆಡವಲಾಯಿತು.
ಯುಕೆಪಿ ವ್ಯಾಪ್ತಿಯಲ್ಲಿ ಎರಡು ಕರಿ ಮಂಗಗಳು ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಕಚ್ಚುವುದು, ದಾಳಿ ಮಾಡುವುದು ಸಹಿತ ಯುಕೆಪಿಯಲ್ಲಿ ಭಯದ ವಾತಾವರಣ ಉಂಟುಮಾಡಿದ್ದವು,
ಇದನ್ನೂ ಓದಿ: Kolhar News: ಶ್ರೀ ಶರಣಬಸಪ್ಪ ಅಪ್ಪಾ ನಿಧನಕ್ಕೆ ಸಂತಾಪ
ಸಾರ್ವಜನಿಕರ ಮನವಿಯ ಮೇರೆಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಿರೇಶ ಹಟ್ಟಿ ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷ ಸಿ.ಎಸ್ ಗಿಡ್ಡಪ್ಪಗೋಳ ಬಾದಾಮಿಯ ಮಂಗಗಳ ಸೆರೆಹಿಡಿಯುವ ಪರಿಣಿತರನ್ನು ಕರೆಯಿಸಿ ಕಾರ್ಯಾಚರಣೆ ನಡೆಸಿದರು. ಶನಿವಾರ ಮುಂಜಾನೆಯಿಂದಲೇ ಸತತ ಕಾರ್ಯಾಚರಣೆ ನಡೆಸಿ ಮಂಗಗಳನ್ನು ಸೆರೆ ಹಿಡಿಯಲಾಯಿತು. ಮಂಗಗಳ ಸೆರೆಯಿಂದ ಸಾರ್ವ ಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ.