ವಿಜಯಪುರ: ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಡಾ.ಎಂ.ಬಿ.ಪಾಟೀಲ್ ಅವರು ಜಿಲ್ಲೆಯ ಬಬಲೇಶ್ವರ ತಾಲ್ಲೂಕಿ ನಲ್ಲಿರುವ ಐತಿಹಾಸಿಕ, ಸಮುದಾಯ ಮೂಲಸೌಕರ್ಯಗಳಿಂದ ಸೌಂದರ್ಯಿಕರಣ ಗೊಂಡ ಮಮದಾಪುರ ಸರೋವರವನ್ನು ಲೋಕಾರ್ಪಣೆ ಮಾಡಿದರು.
ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರದ (GoK) ವಾಣಿಜ್ಯ, ಕೈಗಾರಿಕಾ ಮತ್ತು ಮೂಲಸೌಕರ್ಯ ಸಚಿವ ಡಾ. ಎಂ. ಬಿ. ಪಾಟೀಲ್, "ಸ್ಥಳೀಯ ಜಲಮೂಲಗಳ ರಕ್ಷಣೆ ಮತ್ತು ಸಮುದಾಯ ನೇತೃತ್ವದ ಉಸ್ತುವಾರಿಯ ಮೂಲಕ ನೀರಿನ ಮಟ್ಟವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಬದ್ಧವಾಗಿದೆ. ನೀರಿನ ಸಂರಕ್ಷಣೆ ಮತ್ತು ಸಾರ್ವಜನಿಕ ಬಳಕೆ ಬೆಂಬಲಿಸುವ ಮೂಲಸೌಕರ್ಯವು, ಸ್ಥಳೀಯ ಪರಿಸರವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಹಾಗೇ ಸರೋವರ ಮತ್ತು ಹಂಚಿಕೆಯ ಸಮುದಾಯ ಆಸ್ತಿಗಳ ದೀರ್ಘಕಾಲೀನ ರಕ್ಷಣೆಗೆ ಕೊಡುಗೆ ನೀಡುತ್ತದೆ.
ಮಮದಾಪುರ ಸರೋವರದಂತಹ ಐತಿಹಾಸಿಕ ಜಲಮೂಲಗಳ ಸುತ್ತ ನಡೆಸಲಾದ ಕೆಲಸವು ಸಮತೋಲಿತ ಮತ್ತು ಪ್ರಾಯೋಗಿಕ ವಿಧಾನವನ್ನು ಪ್ರತಿಬಿಂಬಿಸುತ್ತವೆ. ಈ ರೀತಿಯ ಉಪಕ್ರಮಗಳು ಪರಿಣಾಮಕಾರಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಹಿಂದೂಸ್ತಾನ್ ಕೋಕಾ-ಕೋಲಾ ಪಾನೀಯ ಸಂಸ್ಥೆಯಂತಹ ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಗಳು ಸ್ಥಳೀಯವಾಗಿ ಒಡೆತನ ಹೊಂದಿರುವ, ಜವಾಬ್ದಾರಿಯುತವಾಗಿ ಬಳಸಬಹುದಾದ ಮತ್ತು ದೀರ್ಘ ಕಾಲ ನಿರ್ವಹಿಸಬಹುದಾದ ಮೂಲಸೌಕರ್ಯವನ್ನು ರಚಿಸಲು ಸಮುದಾಯ ಗಳೊಂದಿಗೆ ಕೆಲಸ ಮಾಡುತ್ತವೆ."
ಇದನ್ನೂ ಓದಿ; M. B. Patil: ನಾಡಿನ ಶರಣರ ವಚನಗಳನ್ನು ಜಗತ್ತಿಗೆ ತಲುಪಿಸುವ ಕೆಲಸ ನಿರಂತರವಾಗಬೇಕು: ಸಚಿವ ಎಂ.ಬಿ. ಪಾಟೀಲ
ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜ್ಸ್‌ನ (HCCB) ಮುಖ್ಯ ಸಾರ್ವಜನಿಕ ವ್ಯವಹಾರಗಳು, ಸಂವಹನ ಮತ್ತು ಸುಸ್ಥಿರತೆ ಅಧಿಕಾರಿಯಾದ ಹಿಮಾಂಶು ಪ್ರಿಯದರ್ಶಿ ಮಾತನಾಡುತ್ತಾ, "ನಮ್ಮ ಸಂಸ್ಥೆ(HCCB), ದೇಶದ ಬೆಳವಣಿಗೆ ಗ್ರಾಮೀಣ ಪ್ರದೇಶಗಳಿಂದ ಪ್ರಾರಂಭವಾಗುತ್ತದೆ ಎಂದು ದೃಢವಾಗಿ ನಂಬುತ್ತೇವೆ. ಪ್ರಾಜೆಕ್ಟ್ ಶೈನ್ ಮೂಲಕ, ನಾವು ಸರ್ಕಾರೇತರ ಸಂಸ್ಥೆಗಳು (NGOs ) ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿ ಪ್ರಾಯೋಗಿಕ, ಸಮುದಾಯ-ಕೇಂದ್ರಿತ ಪರಿಹಾರಗಳನ್ನು ನೀಡುವ ಮೂಲಕ ನಾವು ಮನೆ ಎಂದೇ ಪರಿಗಣಿಸುವ ಸಮುದಾಯಗಳ ವಿಶಿಷ್ಟ ಅಗತ್ಯಗಳನ್ನು ಪರಿಹರಿಸುತ್ತೇವೆ. ಮಮದಾಪುರ ಸರೋವರದಲ್ಲಿನ ಈ ಉಪಕ್ರಮವು ಸಮುದಾಯ ಮಾಲೀಕತ್ವ ಮತ್ತು ಜವಾಬ್ದಾರಿಯುತ ಬಳಕೆಯನ್ನು ಪ್ರೋತ್ಸಾಹಿಸುತ್ತಾ ದೀರ್ಘಕಾಲೀನ ಸರೋವರ ರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಬೆಂಬಲಿತ ನೀರಿನ ಸಂರಕ್ಷಣಾ ಕ್ರಮಗಳ ಮೇಲೆ ಕೇಂದ್ರೀಕರಿಸುತ್ತದೆ."
ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜ್ಸ್ (HCCB), ತನ್ನ ಪ್ರಮುಖ ಸಮುದಾಯ ಪಾಲುದಾರಿಕೆ ಕಾರ್ಯಕ್ರಮವಾದ ಪ್ರಾಜೆಕ್ಟ್ ಶೈನ್ ಅಡಿಯಲ್ಲಿ, ಅನುಷ್ಠಾನ ಪಾಲುದಾರ ಎಸ್ ಎಂ ಸೆಹಗಲ್ ಫೌಂಡೇಶನ್ ಸಹಯೋಗದೊಂದಿಗೆ ಈ ಉಪಕ್ರಮವನ್ನು ಕೈಗೊಂಡಿತು. ಈ ಸಮಾರಂಭದಲ್ಲಿ ಸ್ಥಳೀಯ ಸರ್ಕಾರಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸಮುದಾಯ ಮುಖಂಡರು, ಟ್ಯಾಂಕ್ ಯ್ಯೂಸರ್ ಗುಂಪಿನ (TUG) ಸದಸ್ಯರು ಮತ್ತು HCCB ಯ ಹಿರಿಯ ಪ್ರತಿನಿಧಿಗಳು ಭಾಗವಹಿಸಿದ್ದರು.
16ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆಯಲ್ಲಿ ನಿರ್ಮಿಸಲಾದ ಮಮದಾಪುರ ಸರೋವರವು ಕರ್ನಾಟಕದ ಅತಿದೊಡ್ಡ ಮತ್ತು ಹಳೆಯ ಜೀವಂತ ಪರಂಪರೆಯ ಜಲಮೂಲ ಗಳಲ್ಲಿ ಒಂದಾಗಿದೆ. ಶತಮಾನಗಳಿಂದ, ಈ ಸರೋವರವು ಈ ಪ್ರದೇಶದಲ್ಲಿ ಸ್ಥಳೀಯ ಸಮುದಾಯ ಗಳು ಮತ್ತು ಕೃಷಿಯನ್ನು ಬೆಂಬಲಿಸುವ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಉಪಕ್ರಮವು ಸರೋವರದ ಐತಿಹಾಸಿಕ ಮತ್ತು ಪರಿಸರ ಮಹತ್ವವನ್ನು ಸಂರಕ್ಷಿಸುವುದರ ಜೊತೆಗೆ ಅದನ್ನು ಸಮುದಾಯದ ಆಸ್ತಿಯಾಗಿ ಬಲಪಡಿಸಲು ಪ್ರಯತ್ನಿಸುತ್ತದೆ.
ಸರೋವರದ ಸೌಂದರ್ಯಿಕರಣ ಉಪಕ್ರಮದ ಭಾಗವಾಗಿ, ಜಲಮೂಲದ ಸುತ್ತಲೂ ಸಾರ್ವಜನಿಕ ಮೂಲಸೌಕರ್ಯ, ಸುರಕ್ಷತೆ ಮತ್ತು ಪ್ರವೇಶವನ್ನು ಹೆಚ್ಚಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವುಗಳಲ್ಲಿ ಸಾರ್ವಜನಿಕ ಉದ್ಯಾನವನದ ಅಭಿವೃದ್ಧಿ, ಮೀಸಲಾದ ನಡಿಗೆ ಮಾರ್ಗಗಳ ರಚನೆ, ಎತ್ತರದ ಸೌರ ದೀಪಗಳ ಸ್ಥಾಪನೆ, ನಿಗದಿತ ಪ್ರವೇಶ ಮಾರ್ಗಗಳು ಮತ್ತು ಸಮುದಾಯ ಆಸನ ಪ್ರದೇಶಗಳು ಸೇರಿವೆ.
ಇಲ್ಲಿನ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಬೆಂಬಲಿ ಸಲು ಹನಿ ನೀರಾವರಿಯಿಂದ ಬೆಂಬಲಿತವಾದ ಸ್ಥಳೀಯ ಸಸಿಗಳನ್ನು ಸಹ ನೆಡಲಾಗಿದೆ. ಇದರ ಜೊತೆಗೆ, ಸರೋವರ ಮತ್ತು ಸಂಬಂಧಿತ ಮೂಲಸೌಕರ್ಯದ ನಿರ್ವಹಣೆ ಮತ್ತು ದೀರ್ಘಕಾಲೀನ ಸುಸ್ಥಿರತೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಟ್ಯಾಂಕ್ ಯ್ಯೂಸರ್ ಗುಂಪಿನ ಸದಸ್ಯರೊಂದಿಗೆ ಜಾಗೃತಿ ಮತ್ತು ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಎರಡು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ನಿರ್ವಹಿಸುವ ಮೂಲಕ ಕೋಕೋ ಕೋಲಾ ಕರ್ನಾಟಕದಲ್ಲಿ ಗಮನಾರ್ಹ ಹೆಜ್ಜೆಗುರುತನ್ನು ಹೊಂದಿದೆ. ತನ್ನ ಪ್ರಮುಖ ಸಮುದಾಯ ಪಾಲುದಾರಿಕೆ ಕಾರ್ಯಕ್ರಮವಾದ ಪ್ರಾಜೆಕ್ಟ್ ಶೈನ್ ಮೂಲಕ, HCCB ನೀರಿನ ಸರಂಕ್ಷಣೆ, ಸಮುದಾಯ ಮೂಲಸೌಕರ್ಯ, ಪರಿಸರ ಸುಸ್ಥಿರತೆ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಜೀವನೋಪಾಯ ವರ್ಧನೆಗೆ ಸಂಬಂಧಿಸಿದ ಉಪಕ್ರಮಗಳ ಕುರಿತು ಕರ್ನಾಟಕದಾದ್ಯಂತ ಸರ್ಕಾರಿ ಸಂಸ್ಥೆಗಳು ಮತ್ತು ಅನುಷ್ಠಾನ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರದೇಶ-ನಿರ್ದಿಷ್ಟ ಯೋಜನೆಗಳು ರಾಜ್ಯಾದ್ಯಂತ ಸಮುದಾಯಗಳ ಯೋಗಕ್ಷೇಮವನ್ನು ಬೆಂಬಲಿಸುತ್ತಾ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಬೆಳೆಸುವ ಕೋಕೋ ಕೋಲಾದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.