ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indi News: ಮಕ್ಕಳ ಸರಳ ಕಲಿಕೆಗೆ ದ್ವಿ ಭಾಷಾ ಮಾಧ್ಯಮ ಅಗತ್ಯ

ಶನಿವಾರ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಜರುಗಿದ 1 ರಿಂದ 5ನೇ ವರ್ಗದ ಶಿಕ್ಷಕರ ದ್ವಿ ಭಾಷಾ ತರಬೇತಿಯ 2ನೇ ಹಂತದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂಡಿ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ದ್ವಿ ಭಾಷಾ ತರಬೇತಿಯ 2ನೇ ಹಂತದ ಕಾರ್ಯಾಗಾರ ಉದ್ಘಾಟಿಸಿ ನಡಗಡ್ಡಿ ಮಾತನಾಡಿದರು.

ಇಂಡಿ: ದ್ವಿ ಭಾಷಾ ಮಾಧ್ಯಮವು 2026-27ನೇ ಶೈಕ್ಷಣಿಕ ವರ್ಷದಿಂದ 1 ರಿಂದ 5ನೇ ವರ್ಗದ ವಿಷಯಗಳನ್ನು ಮಾತಭಾಷೆ ಮತ್ತು ಇಂಗ್ಲೀಷ್ ನಲ್ಲಿ ಬೋಧಿಸಲು ಬಳಸುವ ಶಿಕ್ಷಣ ಪದ್ದತಿ ಯಾಗಿದ್ದು ಇದು ಜಾಗತಿಕ ಸ್ಪರ್ಧೇಗೆ ಮಕ್ಕಳನ್ನು ಸಿದ್ದಗೊಳಿಸುತ್ತದೆ ಎಂದು ಕ್ಷೇತ್ರ ಸಮನ್ವಯಾ ಧಿಕಾರಿ ಎಸ್.ಆರ್.ನಡಗಡ್ಡಿ ಹೇಳಿದರು.

ಶನಿವಾರ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಜರುಗಿದ 1 ರಿಂದ 5ನೇ ವರ್ಗದ ಶಿಕ್ಷಕರ ದ್ವಿ ಭಾಷಾ ತರಬೇತಿಯ 2ನೇ ಹಂತದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Indi News: ಅಕ್ಷರ ಜಾತ್ರೆಗೆ ಇಂಡಿ ಸನ್ನದ್ಧ: ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ

ದ್ವಿ ಭಾಷಾ ಮಾಧ್ಯಮವು ವಿದ್ಯಾರ್ಥಿಗಳ ಬೌದ್ದಿಕ ಬೆಳವಣೆಗೆಗೆ ವಿಷಯದ ತಿಳುವಳಿಕೆಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅತ್ಯಗತ್ಯ ಇದು ಶಿಕ್ಷಕರ ವಿದ್ಯಾರ್ಥಿಗಳ ಸಂವಹನ ಕೌಶಲ್ಯ ಗಳನ್ನು ಸುಧಾರಿಸಿ ಕಲಿಕಾ ಪ್ರಕ್ರಿಯೆ ಸರಳಗೊಳಿಸುತ್ತದೆ ಎಂದರು.

ಅಶೋಕ ರಾಠೋಡ ಸಂಪನ್ಮೂಲ ವ್ಯಕ್ತಿ ಸಂತೋಷ ಬಂಡೆ ಮಾತನಾಡಿದರು.. ಅಂಜನೇಯ ಸ್ವಾಮಿ ಹೊಸಮನಿ, ರಂಗರಾವ ಹೊಸಮನಿ, ಸಂಜೀವ ಬೋರಗಿ, ಬಿ.ಡಿ.ಚಪ್ಪರಬಂದ, ಭಾಷಾ ಸಾಬ ಕಮತಗಿ, ಆರ್.ಎಲ್. ಹಜೇರಿ , ದಾದಾ ಶ್ಯಾಮನವರ, ಎಸ್.ಎ.ಮೊಮೀನ, ಆರ್.ಎಸ್. ಸುರಗಿಹಳ್ಳಿ, ಜಟ್ಟಪ್ಪ ಮಾದರ, ಶಿವಾನಂದ ಡನ್ನುಗಾರ,ಎಚ್.ಆರ್.ಪೂಜಾರಿ, ರಾಹುಲ ಭೀಮನಗರ, ಸಂಜೀವ ಗುಡಿಮನಿ, ಕವಿತಾ ಕೆಂಪರಾಜು ರಮೇಶ ಮತ್ತಿತರಿದ್ದರು.

400ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು.