ಇಂಡಿ: ತಾಲೂಕಿನಲ್ಲಿ ಮಾ.18ರಿಂದ ಏಪ್ರಿಲ್ 2ರ ವರೆಗೆ ನಡೆಯುವ 2025 -26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಯಿದಾ ಮುಜಾವರ ಹೇಳಿದರು.
ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದ ಅವರು ಇಂಡಿ ತಾಲೂಕಿನಲ್ಲಿ ಕನ್ನಡ ಇಂಗ್ಲೀಷ್ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳಿದ್ದಾರೆ. ಒಟ್ಟು 47.6 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅದರಲ್ಲಿ 2481 ವಿದ್ಯಾರ್ಥಿಗಳು ಮತ್ತು 2225 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಿದ್ದು ಅದರಲ್ಲಿ ಇಂಡಿ ನಗರದಲ್ಲಿ ಒಂಬತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿ 10 ಕೇಂದ್ರಗಳಿವೆ ಎಂದರು.
ಇದನ್ನೂ ಓದಿ: Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ
ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಾಗೃತದಳಗಳನ್ನು ರಚಿಸಲಾಗಿದೆ. ಅದರಲ್ಲಿ ಮೂರು ಜಾಗೃತದಳ, ತಹಸೀಲ್ದಾರ ನೇತೃತ್ವದಲ್ಲಿ, ಇಓ ನೇತ್ರತ್ವದಲ್ಲಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಗಳ ನೇತೃತ್ವದಲ್ಲಿ ಮೂರು ಜಾಗೃತದಳ ಇವೆ. ಅದಲ್ಲದೆ ಪ್ರತಿ ಕೇಂದ್ರಕ್ಕೆ ಒಬ್ಬರು ಸ್ಥಾನಿಕ ಜಾಗೃತದಳವಿದ್ದು ಅವರು ಪ್ರತಿದಿನ ಬೇರೆ ಬೇರೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವರು. ಅದಲ್ಲದೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಕ್ಯಾಮೇರಾ ವ್ಯವಸ್ಥೆ ಇದೆ. ಮತ್ತು ಕೇಂದ್ರದಲ್ಲಿ ಐದು ಗಂಟೆ ಬ್ಯಾಟರಿ ವ್ಯವಸ್ಥೆ ಇದ್ದು ಸಿ.ಸಿ. ಕ್ಯಾಮೇರಾ ಪರೀಕ್ಷಾ ವೇಳೆ ಚಾಲನೆಯಲ್ಲಿರು ತ್ತವೆ.
ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು ಪೋಲಿಸ ಸಿಬ್ಬಂದಿ ಇರುವರು. ಅದಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಹೋಗಿವಾಗ ಮೋಬೈಲ್ ರೂಮ್ ವ್ಯವಸ್ಥೆ ಮಾಡಿದ್ದು ಅಲ್ಲಿ ಇಟ್ಟು ಹೋಗಬೇಕು. ಪ್ರತಿ ಮಗುವಿಗೆ ಚೆಕ್ಕು ಮಾಡಿ ಒಳಗೆ ಬಿಡಲಾಗು ತ್ತದೆ.
ವಿದ್ಯಾರ್ಥಿಗಳು 9.45ಕ್ಕೆ ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲಿ ಇರಬೇಕು. 10 ಗಂಟೆಗೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ.15 ನಿಮಿಷ ಪ್ರಶ್ನೆ ಓದಲು ಅವಕಾಶವಿದೆ. 10.30 ರಿಂದ 1.30ರ ವರೆಗೆ ಉತ್ತರ ಬರೆಯಲು ಅವಕಾಶವಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಕೈ ಮಾಡಿದಲ್ಲಿ ಪರೀಕ್ಷೆಗೆ ಅನುಕೂಲ ಮಾಡಿಕೊಡಲು ವಿನಂತಿಸಿಕೊಳ್ಳಲಾಗಿದೆ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಓ ಹೂಗಾರ ಮಾತನಾಡಿದರು.