ಇಂಡಿ: ಡಾ|| ರಾಜಶೇಖರ ಕೋಳೇಕರ್ ಮನೆತನ ಬಹಳ ಸಂಸ್ಕಾರವಂತ ಕುಟುಂಬ. ಈ ಹಿಂದೆ ಅವರ ತಂದೆಯಿಂದ ಹಿಡಿದು ನಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಅವರ ತಂದೆ ಬಡವರನ್ನು, ದೀನ ದುರ್ಬಲರ ಹಿತಚಿಂತನೆ ಮಾಡುವ ಸ್ವಭಾವ ತಂದೆಯಿಂದ ಬಂದ ಬಳುವಳಿ ಎಂದು ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ(Former MLA Dr Sarvabhauma Bagali) ಹೇಳಿದರು.
ನಗರದ ಶಂಕರ ಪಾರ್ವತಿ ಸಭಾ ಭವನದಲ್ಲಿ ಡಾ.ರಾಜಶೇಖರ ಕೋಳೇಕರ್‌ರವರ 40 ವರ್ಷ ಸುದೀರ್ಘ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಎಂದಾಕ್ಷಣ ಕೋಳೇಕರ್ ಕುಟುಂಬ ಎಲ್ಲರೂ ಸ್ಮರಿಸುತ್ತಾರೆ. ಇವರ ಸೇವಾ ಮನೋಭಾವ ಸಾರ್ವಜನಿಕ ಬದುಕಿನಲ್ಲಿ ಹೊಂದಿರುವ ಸಂಬಂಧ ಅಷ್ಟಿಷ್ಟಲ್ಲ. ಡಾ.ರಾಜಶೇಖರ ಕೋಳೇಕರ್ ಸದಾ ಹಸನ್ಮುಖಿ ಎಂದಿಗೂ ಸಿಟ್ಟಿನಿಂದ ಸಾರ್ವಜನಿಕರಿಗೆ ರೋಗಿಗಳಿಗೆ ಕಿಂಚಿತ್ ನೋವನ್ನುಂಟು ಮಾಡದೆ ಸಾರ್ವಜನಿಕರ ಸೇವೆ ದೇವರ ಸೇವೆ ಎಂದು ಕರ್ತವ್ಯದಿಂದ ಮೆರೆದಿದ್ದಾರೆ. ಇದಕ್ಕೆ ಅವರ ವಿಶ್ರಾಂತಿ ಕಾರ್ಯಕ್ರಮದ ಜನಸ್ತೋಮ ಸಾಕ್ಷಿ, ಅಪಾರ ಜನರೊಂದಿಗೆ ಪ್ರೀತಿ ಹೊಂದಿರುವ ಇವರು ನಿವೃತ್ತಿ ನಂತರ ಕೂಡಾ ತಮ್ಮ ಕಾಯಕ ಮುಂದುವರೆಸಲಿ. ಸರಕಾರಿ ಸೇವೆಯಲ್ಲಿ ನಿವೃತ್ತಿ ಸಹಜ ಬೇಸರ ಬೇಡ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: Indi News: ಮಲ್ಲಿಕಾರ್ಜುನ ಯಂಡಿಗೇರಿ ರಾಜಕೀಯ ಅನುಭವಿ: ಮರೇಪ್ಪ ಗಿರಣಿವಡ್ಡರ್
ಜನಸೇವೆಯಲ್ಲಿ ನಾನು ದೇವರನ್ನು ಕಂಡಿರುವೆ ಭಗವಂತ ಇನ್ನೊಂದು ಜನ್ಮವೇನಾದರೂ ಕೊಟ್ಟರೆ ಬಡವರ ದೀನದುರ್ಬಲರ ಸೇವೆಯಲ್ಲಿಯೇ ಮುಕ್ತಿ ಪಡೆಯುವೆ. ನನಗೆ ಪರೋಕ್ಷವಾಗಿ, ಅಪರೋಕ್ಷ ವಾಗಿ ಸಹಕಾರ ಮಾಡಿದ ಇಡೀ ಇಂಡಿನಗರದ ಜನರಿಗೆ ಹಾಗೂ ಸೇವಾ ಅವಧಿಯಲ್ಲಿ ಅನೇಕ ಜನಪ್ರತಿನಿಧಿಯಾದಿಯಾಗ, ಅಧಿಕಾರಿ ವರ್ಗ, ಸಿಬ್ಬಂದಿ ಅಂತರಾತ್ಮದಿಂದ ಅಭಿನಂದನೆ ಸಲ್ಲಿಸುವು ದಾಗಿ ನಿವೃತ್ತಿ ಹೊಂದಿದ ಡಾ.ರಾಜಶೇಖರ ಕೋಳೇಕರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ತಾಪಂ ಇಒ ಮಹಾದೇವಪ್ಪ ಏವೂರ ಮಾತನಾಡಿ, ಕೋವಿಡ್ ಸಮಯದಲ್ಲಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿ ತಮ್ಮ ತಂಡದ ಜೊತೆಗೆ ಕೋವಿಡ್ ಚಿಕಿತ್ಸೆ ನೀಡಿ ನೂರಾರು ಜನರ ಆರೋಗ್ಯ ಕಾಪಾಡಿರುವದು ಡಾ|| ರಾಜೇಶ ಕೋಳೆಕರ ಇವರ ಕಾರ್ಯ ಪ್ರಶಂಸನೀಯ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸಂಪತಕುಮಾರ ಗುಣಾರಿ, ಡಾ|| ಸಂತೋಷ ಪವಾರ, ಲಲಿತಾ ಅಂಗಡಿಡಾ, ಅನಿಲ ವಾಲಿ, ಡಾ|| ಪ್ರೀತಿ ಕೋಳೇಕರ್,ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಅರಣ್ಯ ಇಲಾಖೆಯ ಧನರಾಜ ಮುಜಗೊಂಡ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಖ್ಯಾತ ವೈದ್ಯ ಡಾ.ಎಂ.ಜಿ.ಪಾಟೀಲ, ಉದ್ದಿಮೆದಾರ ಜಗದೀಶ ಕ್ಷತ್ರಿ, ಕೃಷ್ಣ ಕುಮಾರ ಜಾಧವ, ಡಾ|| ಮಲ್ಲನಗೌಡ ಬಿರಾದಾರ ಸಂತೋಷ ಶೆಟ್ಟಿ ಹಿರಿಯ ವೈದ್ಯ ಡಾ|| ಎಂ.ಜೆ.ಪಾಟೀಲ, ಸಿ.ಪಿ.ಐ ಪ್ರದೀಪ ಬಿಸೆ, ಡಾ|| ವಿಜಯಕುಮಾರ ಕಟಕದೊಂಡ, ಡಾ.ಎಸ್.ಐ ಮೇತ್ರಿ, ವಿಜಯಕುಮಾರ ಪಾಟೀಲ, ಸಿ.ಎಂ.ತಾಳಿಕೋಟಿ, ಆಸ್ಪತ್ರೆ ವೈದ್ಯಾದಿಕಾರಿ ಆರ್.ಎಸ್.ಇಂಗಳೆ ನಜಿಮಾ ಕಾಖಂಡಕಿ, ಗುರುಬಾಯಿ ಹಿರೇಪಟ್ಟ ವೇದಿಕೆಯಲ್ಲಿದ್ದರು.
ವೈದ್ಯರಾದ ಪ್ರದೀಪ ಗಜಾಕೋಶ, ಮನೋಜ ಗಿಡಗಂಟಿ, ವಿಪುಲ ಕೋಳೆಕರ, ಅಮೀತ ಕೋಳೆಕರ, ರವಿ ಅಂಬೇವಾಡಿ, ವಿಕಾಸ ಸಿಂದಗಿ, ಶ್ರೀಮತಿ ವಿಜಯಾದೇವಿ ಹಾದಿಮನಿ ಮತ್ತಿತರಿದ್ದರು.