ಇಂಡಿ: ಹಿಂದೆ ಒಂದು ಕಾಲವಿತ್ತು, ಹೆಣ್ಣು ಹುಟ್ಟಿದರೆ ಹುಣ್ಣು ಅನ್ನುತ್ತಿದ್ದರು, ಇಂದು ಮಹಿಳೆ ಎಲ್ಲ ರಂಗಗಳಲ್ಲೂ ಪ್ರಗತಿ ಸಾದಿಸಿದ್ದು ಇಂದು ಹೆಣ್ಣು ಹುಟ್ಟಿದರೆ ಹೊನ್ನ ಬಂದತೆ ಆಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು(MLA Yashwant Rayagouda Patil) ಹೇಳಿದರು.
ನಗರ ಸ್ಪಂದನಾ ಆಸ್ಪತ್ರೆಯಲ್ಲಿ ಹೆಣ್ಣು ಮಗು ಸಹಜವಾಗಿಯಾಗಲಿ. ಸಿಜರಿನ್ ಮುಖಾಂತರ ವಾಗಲಿ ಹುಟ್ಟಿದರೆ ಹೆರಿಗೆ ಖರ್ಚು ಉಚಿತ ಎಂದು ಮಹಿಳಾ ದಿನಾಚರಣೆಯ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಭ್ರೂಣ ಹತ್ಯೆ ಬೇಡ, ಅದಕ್ಕಾಗಿ ಅವಕಾಶ ನೀಡಬಾರದು, ಬಸವಣ್ಣನವರ ಕಾಲದಿಂದಲೂ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ನೀಡಿದ್ದು ಇಂದಿನ ವರೆಗೂ ಅದು ಮುಂದು ವರೆದಿದೆ. ಹೆಣ್ಣು ತನ್ನ ತಂದೆಯ ಮನೆ ಬೆಳಗಿ ಗಂಡನ ಮನೆಯೂ ಬೆಳಗುತ್ತಿದ್ದಾಳೆ. ಹೀಗಾಗಿ ಹೆಣ್ಣು ಹೊನ್ನಾಗಿ ಪರಿವರ್ತನೆಯಾಗಿದ್ದಾರೆ ಎಂದರು.
ಇದನ್ನೂ ಓದಿ: Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ
ಬುರಾಣಪುರ ಆರೂಢಮಠದ ಯೋಗೇಶ್ವರಿ ಮಾತಾಜಿ ಮಾತನಾಡಿ, ಹೆನ್ನು ಹುಟ್ಟಿದರೆ ಹೆರಿಗೆ ಉಚಿತ ಎಂಬ ವಿಷಯ ಪ್ರತಿ ಮನೆ ತಲುಪಬೇಕು. ಎಲ್ಲ ಕಡೆಗೂ ಪ್ರಚಾರವಾಗಬೇಕು. ಈ ವಿಷಯ ಮಹಿಳೆ ಆಸಕ್ತಿ ವಹಿಸಿ ಎಲ್ಲರಿಗೂ ತಿಳಿಹೇಳಬೇಕು ಎಂದರು.
ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಭೀಮಾಶಂಕರ ಮುರಗುಂಡಿ, ಅಜೀತ ಧನಶೆಟ್ಟಿ, ಲಕ್ಷ್ಮೀಕಾಂತ ಮೇತ್ರಿ, ಡಾ|| ಪ್ರೀತಿ ಕೋಳೆಕರ, ಶರಣಬಸು ಕಾಂಬಳೆ ಗುರುಗಳು, ಪ್ರೀತಿ ಮುಜಗೊಂಡ ಮಾತನಾಡಿದರು.
ಇದೇ ವೇಳೆ, ಇಂಡಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಅಜೀತ ಧನಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ, ರಾಜೇಶ್ವರಿ ಕ್ಷತ್ರಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಸಂಗಮೇಶ ಕಕ್ಕಳಮೇಲಿ, ಭೀಮಣ್ಣ ಕವಲಗಿ, ಡಾ|| ಐಶ್ವರ್ಯ ಹೊನವಾಡ, ಡಾ|| ಮಯೂರಿ ಧನ ಶೆಟ್ಟಿ, ಯಾಶೀನ ಅರಬ, ಡಾ|| ರಮೇಶ ಪೂಜಾರಿ, ದತ್ತಾತ್ರೇಯ ಪಾಟೀಲ ಮತ್ತಿತರಿದ್ದರು.