ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indi News: ಅಕ್ಷರ ಜಾತ್ರೆಗೆ ಇಂಡಿ ಸನ್ನದ್ಧ: ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ

ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಆಯೋಜಿಸಲಾಗಿರುವ 'ಬಸವ-ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕ ಮೇಳ'ದ ಪೂರ್ವ ಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಅವರು ಮಾತನಾಡಿ, "ಇಂಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಈ ಜ್ಞಾನದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು

ಇಂಡಿ: ಪುಸ್ತಕಗಳು ಕೇವಲ ಕಾಗದದ ತುಣುಕುಗಳಲ್ಲ, ಅವು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಅಸ್ತ್ರಗಳು," ಎಂದು ನಿವೃತ್ತ ಶಿಕ್ಷಕ ಸುಧಾಕರಗೌಡ ಬಿರಾದಾರ ಅಭಿಪ್ರಾಯ ಪಟ್ಟರು.

ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಆಯೋಜಿಸಲಾಗಿರುವ 'ಬಸವ-ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕ ಮೇಳ'ದ ಪೂರ್ವ ಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಅವರು ಮಾತನಾಡಿ, "ಇಂಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಈ ಜ್ಞಾನದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ನಾವೆಲ್ಲರೂ ಒಗ್ಗಟ್ಟಿನಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ನಮ್ಮ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೆರೆಯೋಣ," ಎಂದು ಕರೆ ನೀಡಿದರು.

ಇದನ್ನೂ ಓದಿ: T20 World Cup: ಪಾಕಿಸ್ತಾನ ಕ್ರಿಕೆಟಿಗರಿಗೆ 16 ಲಕ್ಷ ರು ದಂಡ ವಿಧಿಸಿದ್ದು ನಿಜಾನಾ? ಸ್ಪಷ್ಟನೆ ನೀಡಿದ ಪಿಸಿಬಿ!

ಸಾಹಿತಿ ಕೃಷ್ಣಾಜಿ ಸಿಂದಗೀಕರ ಅವರು ಮಾತನಾಡಿ, "ಲೇಖಕರು ಮತ್ತು ಓದುಗರ ನಡುವೆ ಕೊಂಡಿಯಾಗಿ ಈ ಮೇಳ ಕೆಲಸ ಮಾಡಲಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲೇಖಕರೊಂದಿಗೆ ಸಂವಾದ ನಡೆಸಲು ಇದು ಸುವರ್ಣಾವಕಾಶ," ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಅನಿಲ್ ಹೊಸಮನಿ ಅವರು ಮಾತನಾಡಿ, "ಮೊಬೈಲ್ ಮನುಷ್ಯನನ್ನು ತಲೆತಗ್ಗಿಸಿ ಕೂರುವಂತೆ ಮಾಡುತ್ತದೆ, ಆದರೆ ಪುಸ್ತಕಗಳು ತಲೆ ಎತ್ತಿ ನಡೆ ಯುವಂತೆ ಮಾಡುತ್ತವೆ. ಈ ನಿಟ್ಟಿನಲ್ಲಿ ಪುಸ್ತಕದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ," ಎಂದರು.

ಕಾರ್ಯಕ್ರಮದ ವಿವರ ನೀಡುತ್ತಾ, ಪ್ರತಿ ದಿನ ಬೆಳಿಗ್ಗೆ ಅಂಬೇಡ್ಕರ್ ವೃತ್ತ, ಫುಲೆ ಮಾರ್ಗ ಹಾಗೂ ಬಸವೇಶ್ವರ ವೃತ್ತದಿಂದ ವಿಶೇಷ ಮೆರವಣಿಗೆಗಳು ಹಾಗೂ ಸಂಜೆ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ಯಲಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಂತಿ ಸೇವಕ ಸಂಘದ ಅಧ್ಯಕ್ಷ ಅಯೂಬ್ ನಾಟಿಕಾರ, ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಚಿದಾನಂದ ಕಾಂಬಳೆ, ಸಾಮಾಜಿಕ ಕಾರ್ಯಕರ್ತರಾದ ಚನ್ನು ಕಟ್ಟಿಮನಿ, ಪ್ರಕಾಶ್ ಹೊಸಮನಿ, ನಾಗೇಶ್ ಶಿವಶರಣ ಹಾಗೂ ಜೆಡಿಎಸ್ ಕಾರ್ಯಕರ್ತ ಜಗನ್ನಾಥ್ ಇಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.