ಇಂಡಿ: ಕೇಂದ್ರದಲ್ಲಿ ಕೃಷಿ ಸಚಿವರಾಗಿ ಹಸಿರು ಕ್ರಾಂತಿ(Green Revolution)ಯನ್ನು ಯಶಸ್ವಿ ಗೊಳಿಸುವ ಮೂಲಕ ಆಹಾರ ಭದ್ರತೆಗೆ ಬುನಾದಿ ಹಾಕಿದವರು ಬಾಬು ಜಗಜೀವನರಾಮ ಎಂದು ಶ್ರೀ ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸತ್ಯಣ್ಣ ಹಡಪದ ಹೇಳಿದರು.
ನಗರದ ಬಾಬು ಜಗಜೀವನರಾಮ ಸಬಾಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರ ಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಬು ಜಗಜೀವನರಾಮರವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಮಾನಸದಲ್ಲಿ ಬಾಬೂಜಿ ಎಂದೇ ಜನಪ್ರಿಯರಾಗಿರುವ ಬಾಬು ಜಗಜೀವನರಾಮ ಅವರು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ . ದೇಶದ ಅತ್ಯುನತ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದರು. ದಲಿತ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.
ಇದನ್ನೂ ಓದಿ: Indi News: ಅಕ್ಷರ ಜಾತ್ರೆಗೆ ಇಂಡಿ ಸನ್ನದ್ಧ: ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ
ಇನ್ನೊರ್ವ ಮುಖಂಡ ಸುರೇಶ ನಡಗಡ್ಡಿ ಮಾತನಾಡಿ, ದೀರ್ಘ ಕಾಲ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಬಾಬುಜಿ ಶಿಸ್ತು ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾದವರು. ಅವರ ಸಮಾನತೆ ಯ ಚಿಂತನೆಗಳು ಇಂದಿಗೂ ಸ್ಪೂರ್ತಿದಾಯಕ ಎಂದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಶರಣಪ್ಪ ಚಾಳಿಕಾರ ಮಾತನಾಡಿದರು.
ವೇದಿಕೆಯ ಮೇಲೆ ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಯಿದಾ ಮುಜಾವರ, ತಾಪಂ ಯೋಜನಾಧಿಕಾರಿ ಪ್ರಕಾಶ ರಾಠೋಡ, ಶಿವು ಕಟ್ಟಿಮನಿ, ರವೀಂದ್ರ ನಾರಾಯಣಕರ, ಚಂದ್ರಶೇಖರ ಹೊಸಮನಿ , ಶಿವು ಬಗಲಿ, ಅಯೂಬ ನಾಟಿ ಕಾರ, ನಾಗೇಂದ್ರ ಮೇತ್ರಿ, ಮಲ್ಲು ಮಡ್ಡಿಮನಿ, ಪರಶುರಾಮ ಬಾವಿಕಟ್ಟಿ ಮತ್ತಿತರಿದ್ದರು.
ಇದೇ ವೇಳೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ 625 ಕ್ಕೆ 625 ಅಂಕ ಪಡೆದ ರಕ್ಷಿತಾ ಕೊಡಹೊನ್ನ, ಕಿರಣ ಪವಾರ ಮತ್ತು ತನು ಚವ್ಹಾಣ ಇವರನ್ನು ಸನ್ಮಾನಿಸ ಲಾಯಿತು.