Pro Kabaddi: ಅ.26ರಂದು ಬುಲ್ಸ್ vs ಟೈಟಾನ್ಸ್ ಮಿನಿ ಕ್ವಾಲಿಫೈಯರ್
Pro Kabaddi League 2025: ಗುರುವಾರ ನಡೆದಿದ್ದ ಪಂದ್ಯದಲ್ಲಿಅತ್ಯಮೋಘ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 54-26 ಅಂಕಗಳಿಂದ ಗುಜರಾತ್ ಗೆ ಸೋಲುಣಿಸಿತ್ತು. ಸೋಲು ಕಂಡ ಗುಜರಾತ್ ಜೈಂಟ್ಸ್, 12 ತಂಡಗಳ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಸೀಮಿತಗೊಂಡಿತು.
-
Abhilash BC
Oct 24, 2025 10:47 AM
ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯಲ್ಲಿ(Pro Kabaddi) ಅಮೋಘ ಪ್ರದರ್ಶನ ತೋರುತ್ತಿರುವ ಬೆಂಗಳೂರು ಬುಲ್ಸ್(Bengaluru Bulls) ತಂಡ ಲೀಗ್ ಹಂತದಲ್ಲಿಆಡಿದ 18 ಪಂದ್ಯಗಳಲ್ಲಿ11 ಗೆಲುವು ಮತ್ತು 7 ಸೋಲುಗಳೊಂದಿಗೆ 22 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.
ಅಕ್ಟೋಬರ್ 26ರಂದು ಮಿನಿ ಕ್ವಾಲಿಫೈಯರ್ ನಡೆಯಲಿದ್ದು, ಅಂಕಪಟ್ಟಿಯ 3ನೇ ಸ್ಥಾನಿ ಬೆಂಗಳೂರು ಹಾಗೂ 4ನೇ ಸ್ಥಾನಿ ತೆಲುಗು ಟೈಟಾನ್ಸ್ ಸೆಣಸಾಡಲಿವೆ. ಅದರಲ್ಲಿ ಗೆದ್ದ ತಂಡ ಎಲಿಮಿನೇಟರ್ -3 ಪ್ರವೇಶಿಸಲಿದ್ದು, ಅದರಲ್ಲೂ ಗೆದ್ದರೆ ಕ್ವಾಲಿಫೈಯರ್ -2ಗೇರಲಿದೆ.
ಕ್ವಾಲಿಫೈಯರ್ -2ರಲ್ಲಿಯೂ ಗೆದ್ದರೆ ಫೈನಲ್ ತಲುಪಲಿದೆ. ಇನ್ನು, ಮಿನಿ ಕ್ವಾಲಿಫೈಯರ್ ನಲ್ಲಿ ಸೋಲುವ ತಂಡ ಎಲಿಮಿನೇಟರ್-2 ಆಡಬೇಕಾಗುತ್ತದೆ. ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳಾದ ಪುಣೇರಿ ಪಲ್ಟನ್-ದಬಾಂಗ್ ಡೆಲ್ಲಿ ಅ.27ರಂದು ಕ್ವಾಲಿಫೈಯರ್-1ರಲ್ಲಿ ಆಡಲಿದೆ.
ಇದನ್ನೂ ಓದಿ Pro Kabaddi: ಟೈ ಬ್ರೇಕರ್‌ನಲ್ಲಿ ಪಲ್ಟಿ ಹೊಡೆದ ಬುಲ್ಸ್; ಪುಣೆಗೆ ರೋಚಕ ಗೆಲುವು
ಗುರುವಾರ ನಡೆದಿದ್ದ ಪಂದ್ಯದಲ್ಲಿಅತ್ಯಮೋಘ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 54-26 ಅಂಕಗಳಿಂದ ಗುಜರಾತ್ ಗೆ ಸೋಲುಣಿಸಿತ್ತು. ಸೋಲು ಕಂಡ ಗುಜರಾತ್ ಜೈಂಟ್ಸ್, 12 ತಂಡಗಳ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಸೀಮಿತಗೊಂಡಿತು.
ಬುಲ್ಸ್ ತಂಡದ ಪರ ಅಲಿರೇಜಾ (10 ಅಂಕ) ಮತ್ತು ಆಕಾಶ್ ಶಿಂದೆ (11 ಅಂಕ) ಸೂಪರ್ 10 ಸಾಹಸ ಮಾಡಿದರು. ಇವರಲ್ಲದೆ, ಡಿಫೆಂಡರ್ ಸಂಜಯ್, ಆಶೀಶ್ ಮತ್ತು ದೀಪಕ್ ಶಂಕರ್ ತಂಡದ ಗೆಲುವಿಗೆ ಕೊಡುಗೆ ನೀಡಿದರು.