ಇಂಡಿ: ಮಾಜಿ ಮುಖ್ಯಮಂತ್ರಿ ಕೇಂದ್ರ ಮಂತ್ರಿ ಕುಮಾರಸ್ವಾಮಿ(H D Kumaraswamy)ಯವರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡರು(H D Devegowda) ಮಲ್ಲಿಕಾರ್ಜುನ ಯಂಡಿಗೇರಿ ಇವರಿಗೆ ವಿಜಯಪೂರ ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ಆದೇಶ ಮಾಡಿರುವುದು ಸ್ವಾಗತಾರ್ಹ ಎಂದು ಜೆ.ಡಿ.ಎಸ್ ಎಸ್ಸಿ.ಎಸ್ಟಿ ಘಟಕದ ರಾಜ್ಯ ಉಪಾಧ್ಯಕ್ಷ ಮರೇಪ್ಪ ಗಿರಣಿವಡ್ಡರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಯಂಡಿಗೇರಿಯವರು ಜನತಾದಳದ ಮೂಲ ಕಾರ್ಯಕರ್ತರು , ಸಂಘಟನಾ ಚತುರರು ಹೌದು ಹೋರಾಟದ ಹಿನ್ನಲೆಯಿಂದ ಬಂದವರು.
ಇದನ್ನೂ ಓದಿ: Indi News: ಉರುಸುಗಳು ಭಾವೈಕ್ಯತೆಯ ಸಂಕೇತ
ಮಲ್ಲಿಕಾರ್ಜುನ ಯಂಡಿಗೇರಿ ರಾಜಕೀಯ ಅಪಾರ ಅನುಭವ ಹೊಂದಿದ ದೊಡ್ಡ ಶಕ್ತಿ. ಇವರು ಗೋಕಾಕ ಚಳುವಳಿಯಲ್ಲಿ ಭಾಗವಹಿಸಿದ ಇತಿಹಾಸವಿದೆ. 3 ಬಾರಿ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿ ಸಾಹಿತ್ಯ ಸಂಸ್ಕೃತಿಯನ್ನು ನಾಡಿನಾದ್ಯೆಂತ ಪಸರಿಸಿದ್ದಾರೆ. ವಿಜಯಪೂರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಮಲ್ಲಿಕಾರ್ಜುನ ಯಂಡಿಗೇರಿಯವರಿಗೆ ತಮ್ಮದೇಯಾದ ಅಭಿಮಾನಿ ಬಳಗ ಹಾಗೂ ಸ್ನೇಹಿತರು, ಕಾರ್ಯಕರ್ತರು ಇರುವದರಿಂದ್ದ ಜೆ.ಡಿ.ಎಸ್ ವರಿಷ್ಠರು ಇವರ ಕಾರ್ಯಕ್ಷೇಮತೆ ಸಂಘನಾ ಶಕ್ತಿ , ಪಕ್ಷದ ಸಿದ್ದಾಂತ ಮೆಚ್ಚಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿರುವದರಿಂದ್ದ ವರಿಷ್ಠರಿಗೆ ಅಭಿನಂದನೆ ಸಲ್ಲಿಸುವುದಾಗಿ ಜೆಡಿಎಸ್ ಎಸ್ಸಿ.ಎಸ್ಟಿ ಘಟಕದ ರಾಜ್ಯ ಉಪಾಧ್ಯಕ್ಷ ಮರೇಪ್ಪ ಗಿರಣಿವಡ್ಡರ್ ಪ್ರಕಟಣೆಗೆ ತಿಳಿಸಿದ್ದಾರೆ.