ಇಂಡಿ: ತಾಲೂಕಿನ ಹಿರೇಬೇವನೂರದ ಇಂಡಿಯನ್ ಕೇನ್ ಪಾವರ ಲಿಮಿಟೆಡ್ ಸಕ್ಕರೆ ಕಾರ್ಖಾನೆ ಎದುರು ಕಬ್ಬಿಗೆ ಬೆಂಬಲ ಬೆಲೆ 3600 ರೂ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಒಂದು ವೇಳೆ ಕಬ್ಬಿಗೆ ಬೆಂಬಲ ಬೆಲೆ ರೂ 3600 ರೂ ನೀಡದಿದ್ದರೆ ಕಾರ್ಖಾನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿ ಒಳಗೆ ಕಬ್ಬು ಬರದಂತೆ ಪ್ರತಿಭಟಿಸಲಾಗುತ್ತದೆ. ಮತ್ತು ರೂ 3600 ನೀಡುವವರೆಗೆ ಪ್ರತಿಭಟನೆ ಮಾಡಲಾಗುವುದೆಂದರು. ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಯ ರೈತರು ಈಗಾಗಲೇ ರೂ 3600 ಕೊಡಲು ಒಪ್ಪಿದ್ದು ವಿಜಯಪುರ ಜಿಲ್ಲೆಯ ರೈತರಿಗೆ ಏಕೆ ತಾರತಮ್ಯ ಎಂದು ಪ್ರಶ್ನಿಸಿದರು.
ಕಾರ್ಖಾನೆಯ ಮ್ಯಾನೇಜಿಂಗ್ ಡೇರೆಕ್ಟರ್ ಸೂರ್ಯ ಪ್ರಕಾಶ ಘಟನಾ ಸ್ಥಳಕ್ಕೆ ಬಂದು ಮಾತನಾಡಿ, ತಮ್ಮ ಮನವಿಯನ್ನು ಮಾಲೀಕರ ಜೊತೆ ಚರ್ಚಿಸುವುದಾಗಿ ಕಾಲಾವಕಾಶ ಕೇಳಿದರು.
ಪ್ರತಿಭಟನೆಯಲ್ಲಿ ಸಿದ್ದರಾಮ ಹಂಜಗಿ, ಶಿವಾನಂದ ಬಿರಾದಾರ, ಗುರು ಅಲಗೊಂಡ, ಶಿವಶಂಕರ ಮೇತ್ರಿ, ಸೋಮು ಬಿರಾದಾರ, ರವಿ ಪವಾಡಿ, ಸೋಮು ಕುಂಬಾರ, ಬಾಬುಷಾ ಸೋಲಾಪುರ, ನಿಂಗಪ್ಪ ಯರಗಲ್ಲ, ಅಶೋಕ ಹಿಕ್ಕಣಗುತ್ತಿ ಮತ್ತಿತರಿದ್ದರು.