Tourism Minister H K Patil: ಯಲಗೂರು ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ, ನಾನಾ ಕಾಮಗಾರಿ ಕೈಗೊಳ್ಳಲು ಡಿಪಿಎಆರ್ʼಗೆ ಸಚಿವ ಎಚ್.ಕೆ.ಪಾಟೀಲ ಸೂಚನೆ
ಆಡಳಿತ ಮನೆ ಬಾಗಲಿಗೆ ಬರಬೇಕು ಅನ್ನುವ ಉದ್ದೇಶದಿಂದ ಹೊಸ ತಾಲ್ಲೂಕುಗಳಲ್ಲಿ ನಾನಾ ಕಚೇರಿಗಳು ಆರಂಭಗೊಂಡಿವೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಗೂ ಆದ್ಯತೆ ಸಿಗಲಿದೆ ಎಂದರು. ಇದನ್ನೂ ಓದಿ: ವಿಜಯಪುರದಲ್ಲಿ ಗುಂಡಿಗಳದ್ದೇ ದರ್ಬಾರ್ಆಡಳಿತ ಮನೆ ಬಾಗಲಿಗೆ ಬರಬೇಕು ಅನ್ನುವ ಉದ್ದೇಶದಿಂದ ಹೊಸ ತಾಲ್ಲೂಕುಗಳಲ್ಲಿ ನಾನಾ ಕಚೇರಿಗಳು ಆರಂಭಗೊಂಡಿವೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಗೂ ಆದ್ಯತೆ ಸಿಗಲಿದೆ ಎಂದರು.

-

ಆಲಮಟ್ಟಿ: ಪ್ರಸಿದ್ಧ ಯಲಗೂರು ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಗತ್ಯ ನಾನಾ ಕಾಮಗಾರಿ ಕೈಗೊಳ್ಳಲು ಡಿಪಿಎಆರ್(DPAR) ಸಿದ್ಧಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ(Tourism Minister H K Patil) ಹೇಳಿದರು.
ಸಮೀಪದ ಯಲಗೂರ ದೇವಸ್ಥಾನದಲ್ಲಿ ಸೋಮವಾರ ಯಲಗೂರೇಶ್ವರನ ದರ್ಶನ ಪಡೆದು, ಪವಮಾನ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಡಳಿತ ಮನೆ ಬಾಗಲಿಗೆ ಬರಬೇಕು ಅನ್ನುವ ಉದ್ದೇಶದಿಂದ ಹೊಸ ತಾಲ್ಲೂಕುಗಳಲ್ಲಿ ನಾನಾ ಕಚೇರಿಗಳು ಆರಂಭಗೊಂಡಿವೆ. ಶೀಘ್ರವೇ ನ್ಯಾಯಾಲಯ ಸ್ಥಾಪನೆಗೂ ಆದ್ಯತೆ ಸಿಗಲಿದೆ ಎಂದರು.
ಇದನ್ನೂ ಓದಿ: ವಿಜಯಪುರದಲ್ಲಿ ಗುಂಡಿಗಳದ್ದೇ ದರ್ಬಾರ್
ದೇವಸ್ಥಾನದ ಜೀರ್ಣೋದ್ದಾರ, ದೋಬಿಘಾಟ್ ನಿರ್ಮಾಣ, ಗ್ರಾಮದ ಮುಖ್ಯ ರಸ್ತೆಯ ಅಗಲೀಕರಣ, ಪಾರ್ಕಿಂಗ್ ವ್ಯವಸ್ಥೆ, ಯಾತ್ರಿ ನಿವಾಸಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಚಿವ ಪಾಟೀಲರಿಗೆ ಮನವಿ ಸಲ್ಲಿಸಿದರು.
ಸಚಿವ ಪಾಟೀಲ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್. ನಾಡಗೌಡ ಅವರನ್ನು ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ಯಾಮ ಪಾತರದ, ಬದರಿನಾರಾಯಣ ಚಿಮ್ಮಲಗಿ, ನಾರಾಯಣ ಒಡೆಯರ, ಯಲಗೂರದಪ್ಪ ಪೂಜಾರಿ, ಭೀಮಣ್ಣ ಅವಟಗೇರ, ಗುಂಡಪ್ಪ ಪೂಜಾರಿ, ಶ್ರೀಶೈಲ ಡೆಂಗಿ, ಮಹಾಂ ತೇಶ ಡೆಂಗಿ, ಸಂತೋಷ ಪೂಜಾರಿ, ಆನಂದ ಪೂಜಾರಿ, ಗೋವಿಂದಪ್ಪ ಪೂಜಾರಿ ಮತ್ತಿತರರು ಇದ್ದರು.
ಬದರಿನಾರಾಯಣ ಚಿಮ್ಮಲಗಿ, ವಿಠ್ಠಲಾಚಾರ್ಯ ಗದ್ದನಕೇರಿ, ಗೋಪಾಲಾಚಾರ್ಯ ಹಿಪ್ಪರಗಿ ಮತ್ತೀತರ ಆಚಾರ್ಯರು ಹೋಮ ನೆರವೇರಿಸಿದರು.