ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Visheshanka: ವಿಶ್ವವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ ಮಾಡಿದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಸಚಿವ ಎಂ.ಬಿ.ಪಾಟೀಲ್‌

Vijayapura News: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಉಪ್ಪಾರ ಸಮಾಜ ಸೇವಾ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹಾಗೂ ಸಚಿವ ಎಂ. ಬಿ. ಪಾಟೀಲ್‌ ಅವರು ವಿಶ್ವವಾಣಿ ದೀಪಾವಳಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿದ್ದಾರೆ.

ವಿಶ್ವವಾಣಿ ವಿಶೇಷಾಂಕ ಬಿಡುಗಡೆ ಮಾಡಿದ ಪುರುಷೋತ್ತಮಾನಂದಪುರಿ ಸ್ವಾಮೀಜಿ

-

Prabhakara R Prabhakara R Oct 25, 2025 7:59 PM

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಶನಿವಾರ ಉಪ್ಪಾರ ಸಮಾಜ ಸೇವಾ ಸಂಘ ಆಯೋಜಿಸಿದ್ದ ಶ್ರೀ ರಾಜ ಋಷಿ ಭಗೀರಥರ ಕಂಚಿನ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ವಿಶ್ವವಾಣಿ ಕನ್ನಡ ದಿನಪತ್ರಿಕೆ ಹೊರತಂದಿರುವ ದೀಪಾವಳಿ ವಿಶೇಷಾಂಕವನ್ನು (Vishwavani Visheshanka) ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿದ್ಯಾನಗರ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹಾಗೂ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್‌ ಅವರು ಬಿಡುಗಡೆಗೊಳಿಸಿದರು.

Vishwavani Visheshanka (1)

ಈ ವೇಳೆ ಶಿಕ್ಷಕ ಲಕ್ಷ್ಮಣಗೌಡ ವಿ. ಪಾಟೀಲ, ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು, ಕಾಖಂಡಕಿ ಶ್ರೀ ನಿಜಲಿಂಗಯ್ಯ ಮಹಾಸ್ವಾಮಿಗಳು, ಚಿಕ್ಕಾಲಗುಂಡಿಯ ಶ್ರೀ ಶಿವಶರಣಾನಂದ ಮಹಾಸ್ವಾಮಿಗಳು, ಉಪ್ಪಾರ ಅಭಿವೃದ್ಧಿ ನಿಗಮ‌ ಅಧ್ಯಕ್ಷ ಭರಮಣ್ಣ ಉಪ್ಪಾರ ಕಾಖಂಡಕಿಯ ಅಶೋಕ ಹುಚ್ಚಪ್ಪಯ್ಯ ದಿಗಂಬರಿಮಠ, ಮುಖಂಡರಾದ ರಾಮನಗೌಡ ಬಿ. ಪಾಟೀಲ, ಬಾಪುಗೌಡ ಬಿ. ಪಾಟೀಲ ಶೇಗುಣಸಿ, ಮುತ್ತಪ್ಪ ಕೆ.‌ ಶಿವಣ್ಣವರ, ಜಕ್ಕಪ್ಪ ಯಡವೆ, ಅನೀಲ ಅವಳೆ, ಸೋಮಶೇಖರ ಬಂಡಿ, ಶಂಕರ ಬೆಳ್ಳುಬ್ಬಿ, ಅಪ್ಪುಗೌಡ ಪಾಟೀಲ, ಪದ್ಮಾವತಿ ಗೌಡಪ್ಪಗೋಳ, ಅರವಿಂದ ಕೆ. ಕೊಪ್ಪದ, ರುಕ್ಮಾಬಾಯಿ ಚ. ಲೆಂಕಪ್ಪಗೋಳ, ರಾಜು ಮು. ತೇಲಣ್ಣವರ, ಮಲ್ಲಿಕಾರ್ಜುನ ಹು. ಪರಸನ್ನವರ, ಅಲಿಸಾಬ ಎಂ. ಖಡಕೆ, ಈರಗೊಂಡ ಬಿರಾದಾರ, ರಮೇಶ ಹೆಬ್ಬಿ, ವಿ. ಎಸ್. ಪಾಟೀಲ, ನಂದಕುಮಾರ ಚಂದರಗಿ, ಉಮೇಶ ಮಲ್ಲಣ್ಣವರ, ಮಲ್ಲು ಲೆಂಕಪ್ಪಗೋಳ ಇದ್ದರು.

ಈ ಸುದ್ದಿಯನ್ನೂ ಓದಿ | ISKCON Temple: ದೀಪಾವಳಿ ಹಿನ್ನೆಲೆ ಬೆಂಗಳೂರಿನ ಇಸ್ಕಾನ್‌ನಲ್ಲಿ ಗೋವರ್ಧನ ಪೂಜೆ ಸಂಪನ್ನ