ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Indi News: ನಿರಂತರ ರಕ್ತದಾನದಿಂದ ಆರೋಗ್ಯ ಉತ್ತಮ

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ 2014ರಲ್ಲಿ ಸಾಲೋಟಗಿಯ ಶಿವಯೋಗೀಶ್ವರ ಮಾಧ್ಯಮಿಕ ಶಾಲೆಯಲ್ಲಿ ಓದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗ ಮತ್ತು ಶ್ರೀ ಶಿವಯೋಗೀಶ್ವರ ಜಾತ್ರಾ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿ ದರು.

ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ನೇತ್ರ ಮತ್ತು ರಕ್ತದಾನ ಶಿಬಿರದಲ್ಲಿ ಸೋನಾವನೆ ಮಾತನಾಡಿದರು..

ಇಂಡಿ: ರಕ್ತದಾನದಿಂದ ರಕ್ತ ಕಳೆದುಕೊಂಡ ರೋಗಿಗಳಿಗೆ ಅನುಕೂಲವಾಗುವ ಜತೆಗೆ ರಕ್ತದಾನ ಮಾಡುವವರ ಆರೋಗ್ಯ ಉತ್ತಮವಾಗಲಿದೆ ಎಂದು ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ.ಶಿವಾನಂದ ಸೋನಾವನೆ ಹೇಳಿದರು.

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ 2014ರಲ್ಲಿ ಸಾಲೋಟಗಿಯ ಶಿವಯೋಗೀಶ್ವರ ಮಾಧ್ಯಮಿಕ ಶಾಲೆಯಲ್ಲಿ ಓದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗ ಮತ್ತು ಶ್ರೀ ಶಿವಯೋಗೀಶ್ವರ ಜಾತ್ರಾ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿ ದರು.

ಇದನ್ನೂ ಓದಿ: Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

ಪ್ರತಿಯೊಬ್ಬರು ರಕ್ತದಾನ ಮಾಡಬಹುದು.ಸಂಘಟನೆಗಳ ಮೂಲಕ ಯುವಕರು ರಕ್ತದಾನ ಮಾಡುವದರಿಂದ ರಕ್ತದ ಅಗತ್ಯ ಇರುವವರಿಗೆಅನುಕೂಲವಾಗಲಿದೆ. ರಕ್ತ ತಯಾರಿಸಲು ಸಾಧ್ಯ ವಿಲ್ಲ, ಮನುಷ್ಯನಿಂದಲೇ ಇನ್ನೊಬ್ಬರಿಗೆ ರಕ್ತವನ್ನು ನೀಡಬೇಕಾಗಿದೆ ಎಂದರು.

210 ಜನರ ಆರೋಗ್ಯ ತಪಾಸಣೆ, 42 ಜನರ ನೇತ್ರ ತಪಾಸಣೆ ಮತ್ತು 45 ಜನರಿಂದ ರಕ್ತದಾನ ಮಾಡಲಾಯಿತು.

ಆರೋಗ್ಯ ಇಲಾಖೆಯ ವೈ.ವಿ.ಪೂಜಾರಿ, ಡಾ.ಲಕ್ಷ್ಮೀಕಾಂತ ಮೇತ್ರಿ, ಎಸ್ಸೆಸ್ಸೆಲ್ಸಿ ಗೆಳೆಯರ ಬಳಗದ ಇಂದ್ರಕುಮಾರ ವಾಲಿಕಾರ,ಕೇದಾರನಾಥ ಅಕ್ಕಲಕೋಟ, ಶ್ರೀಶೈಲ ಕಾಳೆ, ಸಿದ್ದು ಬಿರಾದಾರ, ಗಂಗಾಧರ ಗುಳೆದ, ಶಿವಪ್ರಸಾದ ಹತ್ತರಕಿ, ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಯ್ಯ ಚಿಕ್ಕಪಠ, ಮಲ್ಲನಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ವಿನೋದ ಗಾಣಿಗೇರ, ಮಲ್ಲಿಕಾರ್ಜುನ ಕಿವಡೆ, ಸರಕಾರಿ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತಿತರಿದ್ದರು.