ಇಂಡಿ: ಭಾರತೀಯರ ತುಂಬ ಆದರ ಅಭಿಮಾನ ಮತ್ತು ಗೌರವಗಳಿಗೆ ಪಾತ್ರನಾದ ರಾಜ ಶಿವಾಜಿ ಯವರು. ಅವರ ಹೆಸರು ಪಾವಿತ್ರ್ಯ ಸ್ವಾಭಿಮಾನ ಸಂಘಟನಾ ಬಲಗಳ ಸಂಕೇತವಾಗಿದೆ. ಸ್ವಾತಂತ್ರ್ಯ ಪ್ರಿಯತೆ ಕಷ್ಟ ಸಹಿಷ್ಣುತೆ ರಾಷ್ಟ್ರಪ್ರೇಮದ ಅಲೆಯನ್ನು ದೇಶದ ಜನತೆಯ ಹೃದಯದಲ್ಲಿ ಮೂಡಿಸಿದ ಶಿವಾಜಿ ಮಹಾರಾಜರ ವ್ಯಕ್ತಿತ್ವ ಸದಾ ಅಮರ ಎಂದು ಶಾಸಕ ಯಶವಂತ ರಾಯಗೌಡ ಪಾಟೀಲ(MLA Yashwant Rayagouda Patil)ರು ಹೇಳಿದರು.
ನಗರದ ಶಿವಾಜಿ ವೃತ್ತದಲ್ಲಿ ಶೋಭಾಯಾತ್ರೆಗೆ ಚಾಲನೆನೀಡಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸೋಮು ನಿಂಬರಗಿಮಠ, ಮಾತನಾಡಿದರು.
ಇದನ್ನೂ ಓದಿ: MLA Yeshwantraya Gowda Patil: ಮಾತುಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ: ಶಾಸಕ ಯಶವಂತರಾಯಗೌಡ ಪಾಟೀಲ
ಕಾರ್ಯಕ್ರಮದಲ್ಲಿ ಜೈನಾಪುರದ ಶ್ರೀಗಳು, ಶ್ರೀಧರ ಕ್ಷತ್ರಿ, ರಾಹುಲ ಸುಲಾಖೆ, ಭಾಗೇಶ ಅಗಸರ, ಶಿವು ಬಗಲಿ, ಮಲ್ಲಿಕಾರ್ಜುನ ವಾಲಿಕಾರ, ಅಂಬಾದಾಸ ಹೊನಕೊರೆ, ಪ್ರಮೋದ ಶಿಂಧೆ, ಮಲ್ಲು ಗುಡ್ಲ, ಬಾಳು ಮುಳಜಿ, ಸತೀಶ ಕುಂಬಾರ ,ರಾಜು ಪತಂಗೆ, ಆನಂದ ಪವಾರ, ರಾಮಸಿಂಗ ಕನ್ನೊಳ್ಳಿ, ಅಪ್ಪು ಮಾನೆ, ಅಪ್ಪು ನರಸಿಂಗ ಪವಾರ, ದೇವೆಂದ್ರ ಕುಂಬಾರ, ಸಂಜು ಪವಾರ, ವಿನೋದ ಸೂರ್ಯವಂಶಿ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಭೀಮಣ್ಣ ಕವಲಗಿ, ಶೀಲವಂತ ಉಮರಾಣಿ, ರವಿ ಗವಳಿ, ಅಕ್ಷಯ ಹಿಬಾರೆ, ಅಕ್ಷಯ ಪಾಟೀಲ, ಮಲ್ಲು ಹಾವಿನಾಳಮಠ ಮತ್ತಿತರಿದ್ದರು.
ಶೋಭಾ ಯಾತ್ರೆ ಶಿವಾಜಿ ವೃತ್ತದಿಂದ ಮಹಾವೀರ, ಅಂಬೇಡ್ಕರ ಬಸವೇಶ್ವರ ವೃತ್ತದ ಮಾರ್ಗವಾಗಿ ಸೇವಾಲಾಲ ವೃತ್ತದ ವರೆಗೆ ನಡೆಯಿತು.