ಇಂಡಿ: ನೌಕರರು ಸಮರ್ಪಣಾ ಭಾವದಿಂದ ಕೆಲಸ ನಿರ್ವಹಿಸಿದರೆ ದೇಶಕ್ಕೆ ಒಳ್ಳೆಯದಾಗು ತ್ತದೆ. ಪ.ಜಾ , ಪ.ಪಂಗಡ ನೌಕರರ ಬಡ್ತಿಯಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚು ಸಹಾಯ ಮಾಡಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು(MLA Yashwant Raya gouda Patil) ಹೇಳಿದರು.
ನಗರದ ಗುರುಭವನದಲ್ಲಿ ರಾಜ್ಯ ಪ.ಜಾ,ಪ ಪಂಗಡ ಸಮನ್ವಯ ಸಮಿತಿ ಇಂಡಿ ತಾಲೂಕಾ ಶಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ನೌಕರರ ಸಮಾವೇಶಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಮತ್ತು ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: Indi News: ರಾಷ್ಟ್ರಪ್ರೇಮದ ಅಲೆ ಜನತೆಯ ಹೃದಯದಲ್ಲಿ ಮೂಡಿಸಿದ ಶಿವಾಜಿ ಮಹಾರಾಜರು
ಮೇಲು ಕೀಳು ಎಂಬ ಭಾವನೆ ಬದಿಗಿಟ್ಟು ಸೈದ್ದಾಂತುಕ ವೈಚಾರಿಕ ಚಿಂತನೆ ಇಟ್ಟುಕೊಂಡು ಬದುಕು ಸಾಗಿಸಬೇಕು. ಬುದ್ದ ಬಸವ ಅಂಬೇಡಕರ ತತ್ವಗಳ ಆಶಯದಂತೆ ಆಡಳಿತ ನಡೆಸಿ ಸರ್ವರನ್ನು ಪ್ರೀತಿಸುವ ಗುಣ ಹೊಂದಬೇಕು ಎಂದರು.
ತಾಲೂಕಾ ಅಧ್ಯಕ್ಷ ಬಿ.ಎಂ.ವಠಾರ, ರಾಜ್ಯಾಧ್ಯಕ್ಷ ಡಿ.ಶಿವಶಂಕರ, ಉಪಾಧ್ಯಕ್ಷ ಆರ್ ಮೋಹನ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ, ಎಂ.ಬಿ.ಶಿವಕುಮಾರ, ಜಿಲ್ಲಾಧ್ಯಕ್ಷ ಬಿ.ಎಚ್.ನಾಡಗೀರಿ ಮಾತನಾಡಿದರು.
ಎಸ್.ಆರ್.ನಡಗಡ್ಡಿ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ, ಎಸ್.ವಿ.ಹರಳಯ್ಯ, ಬುದ್ದವ್ವ ಕಾಳೆ, ಎ.ಎಸ್.ಪಾಟೀಲ, ಡಿ.ಸಿ.ಹರಿಜನ, ಪ್ರಶಾಂತ ಕಾಳೆ ಡಾ. ಕಾಂತು ಇಂಡಿ, ವಿ.ಜಿ.ಕಲ್ಮನಿ, ನಿಜಣ್ಣಾ ಕಾಳೆ, ಹುಚ್ಚಪ್ಪ ಶಿವಶರಣ, ವಿಜಯ ಕುಮಾರ ಪೋಳ, ಉಮೇಶ ಭಜಂತ್ರಿ, ಸದಾನಂದ ಈರನಕೇರಿ, ಸುಭಾಸ ಲಮಾಣಿ, ಪಿ.ಬಿ.ಪುಜಾರಿ, ದತ್ತು ದೇವರಮನಿ, ಎಸ್.ಎನ್.ಕೋಳಿ, ದುಂಡಪ್ಪ ಹರಿಜನ, ಚಂದ್ರು ರಾಠೋಡ, ಮಂಜು ನಾಥ ನಾಯ್ಕೋಡಿ, ಚಂದ್ರಕಲಾ ಕಾಳೆ, ಚೌಡಮ್ಮ ತೊರವಿ ಮತ್ತಿತರರಿದ್ದರು.