ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basanagouda Patil Yatnal: ಯತ್ನಾಳ್‌ ಹತ್ಯೆಗೆ ಸಂಚು; ಆಡಿಯೋ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಡಿಯೋ ವೈರಲ್‌!

Murder conspiracy: ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ವಿಡಿಯೋ ಮಾಡಿದ್ದು, ಬಿಜಾಪುರ ಫೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದಾನೆ. ನಮ್ಮ ಪ್ರವಾದಿಯನ್ನು ಟೀಕಿಸಿರುವುದನ್ನು ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಮರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು ವಿಡಿಯೋದಲ್ಲಿ ಯುವಕ ಹೇಳಿದ್ದಾನೆ.

ಯತ್ನಾಳ್‌ ಹತ್ಯೆಗೆ ಸಂಚು; ಮತ್ತೊಂದು ಸ್ಫೋಟಕ ವಿಡಿಯೋ ವೈರಲ್‌!

Profile Prabhakara R Apr 12, 2025 3:54 PM

ವಿಜಯಪುರ: ಪ್ರವಾದಿ ಮಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಧಿಸಿ ಆಡಿಯೋವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಆಗಿದ್ದು, ಯತ್ನಾಳ್ ವಿರುದ್ಧ ಬೃಹತ್‌ ಹೋರಾಟಕ್ಕೆ ಪ್ಲ್ಯಾನ್‌ ಮಾಡಿರುವ ಬಗ್ಗೆ ವಿಡಿಯೊದಲ್ಲಿ ಯುವಕನೊಬ್ಬ ಮಾತನಾಡಿದ್ದಾನೆ.

ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ವಿಡಿಯೋ ಮಾಡಿದ್ದು, ಬಿಜಾಪುರ ಫೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾನೆ. "ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೆ ಜುದಾ" ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತನಿಂದ ವಿಡಿಯೋ ಮಾಡಲಾಗಿದ್ದು, ಬಿಜಾಪುರ ಪೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ ಅದನ್ನು ಅಪ್ಲೋಡ್ ಮಾಡಿದ್ದಾನೆ.

ನಮ್ಮ ಪ್ರವಾದಿಯನ್ನು ಟೀಕಿಸಿರುವುದನ್ನು ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಮರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಹೋರಾಟ ಯತ್ನಾಳ್ ಎನ್ನುವ ಹುಳದ ವಿರುದ್ಧ ಎಂದು ಕಿಡಿಕಾರಿದ್ದಾನೆ. ಪ್ರವಾದಿಗಾಗಿ ನಮ್ಮ ಪ್ರಾಣ ಬಲಿಗಾಗಿ ಸಿದ್ಧರಿದ್ದೇವೆ. ವಿಡಿಯೋ ಕೊನೆಗೆ ಪ್ರವಾದಿ ವಿರುದ್ಧ ಮಾತನಾಡುವವನಿಗೆ ಒಂದೇ ಶಿಕ್ಷೆ, ತಲೆ ಕತ್ತರಿಸಬೇಕು ಎಂದು ಹೇಳಿದ್ದಾನೆ. ಸದ್ಯ ಯತ್ನಾಳ್‌ ಹತ್ಯೆಯ ಸಂಚಿನ ಕುರಿತು ಆಡಿಯೋ ಮತ್ತು ವಿಡಿಯೋ ವೈರಲ್‌ ಆಗಿದ್ದರಿಂದ ವಿಜಯಪುರ ಜನತೆ ಆತಂಕಕ್ಕೀಡಾಗಿದ್ದಾರೆ.

ಇನ್ನು ಮಾಧ್ಯಮಗಳಲ್ಲಿ ವಿಡಿಯೊ ಬಗ್ಗೆ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ ಖಾತೆಯಿಂದ ವಿಡಿಯೊವನ್ನು ಸೊಹೇಲ್‌ ಡಿಲೀಟ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಶಾಸಕನ ಹತ್ಯೆಗೆ ಸಂಚು ರೂಪಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಆಡಿಯೋದಲ್ಲೇನಿತ್ತು?



ಶಾಸಕ ಯತ್ನಾಳ್‌ ಹತ್ಯೆಗೆ ಸಂಚು ನಡೆಸಿರುವುದಕ್ಕೆ ಸಂಬಂಧಿಸಿ ಇತ್ತೀಚೆಗೆ ಆಡಿಯೋವೊಂದು ವೈರಲ್‌ ಆಗಿತ್ತು. ಅದರಲ್ಲಿ “ಈ ಬಾರಿ ಯತ್ನಾಳ್​ಗೆ ಫೈನಲ್ ಡೇ, ಆತ ಅರೆಸ್ಟ್​ ಆಗಬೇಕು ಅಥವಾ ಆತನ ತಲೆಯನ್ನು ಕತ್ತರಿಸಬೇಕು ಎಂದು ಯುವಕನೊಬ್ಬ ಹೇಳಿದ್ದ. ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಗ್ಗಟ್ಟಾಗಿ ಎಂದು ಆಡಿಯೋದಲ್ಲಿ ಯುವಕ ಕರೆ ನೀಡಿದ್ದ.

ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್‌ ಅವರು ಮಹಮ್ಮದ್‌ ಪೈಗಂಬರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಗೋಲ್​ಗುಂಬಜ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಹಿನ್ನೆಲೆ ಯತ್ನಾಳ್‌ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿದ್ದ ಸ್ಫೋಟಕ ಆಡಿಯೋ ವೈರಲ್‌ ಆಗಿತ್ತು.

ಮುಸ್ಲಿಂ ಯುವಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಜೀವ ಬೆದರಿಕೆ ಹಾಕಿದ್ದ. ವಿಜಯಪುರದಲ್ಲಿ ನಡೆದ NMC ಸಭೆಯಲ್ಲಿ ಮುಸ್ಲಿಂ ಮುಖಂಡರು, ಉಲ್ಮಾಗಳು ಸೇರಿ ಸಭೆ ಮಾಡಲಾಗಿದೆ. ಪೈಗಂಬರ್ ವಿರುದ್ಧ ಮಾತನಾಡಿದ ಯತ್ನಳ್ ಮನೆಗೆ ರ್ಯಾಲಿ ಮಾಡಬೇಕು. ಅದಕ್ಕಾಗಿ ಜನರನ್ನು ಸೇರಿಸಬೇಕು. ಅಂಬೆಡ್ಕರ್​ ಸರ್ಕಲ್​ನಿಂದ ಹೊರಡುವ ರ‍್ಯಾಲಿ, ಅಲ್ಲಿಂದ ಯತ್ನಾಳ್ ಮನೆ ಕಡೆಗೆ ನುಗ್ಗಬೇಕು. ಈ ರ‍್ಯಾಲಿಗೆ ಬರುವವರು ನಿಮ್ಮ ಗೆಳೆಯರನ್ನು ಕರೆದುಕೊಂಡು ಬನ್ನಿ ಎಂದು ಕರೆ ನೀಡಲಾಗಿತ್ತು. ಅಷ್ಟೇ ಅಲ್ಲದೆ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಅದೇ ಯತ್ನಾಳ್‌ ಅವರ ಕೊನೆ ದಿನ ಆಗಲಿದೆ. ಈ ಬಾರಿ ನಾವೆಲ್ಲಾ ನಿರ್ಧಾರ ಮಾಡಿದ್ದಾಗಿದೆ ಎಂದು ಯುವಕ ಹೇಳಿದ್ದ.