ಇಂಡಿ: ಧರ್ಮ ಎಂದರೆ ಜಾತಿಯಲ್ಲಾ ಧರ್ಮ ಸೂಜಿಯಿದ್ದಂತೆ ಜಾತಿ ಕತ್ತರಿಯಿದ್ದಂತೆ ಮನುಷ್ಯನಿಗೆ ಧರ್ಮವು ಪ್ರೀತಿ, ವಿಶ್ವಾಸ, ಅನುಕಂಪ .ಸಹಾಯ ಸಹಕಾರ ಗುಣ ಕಲಿಸು ತ್ತದೆ, ಆದರೆ ಜಾತಿ ಇಡೀ ಸಮುದಾಯ ದೇಶ ವಿಘಟನೆ ಮಾಡುತ್ತದೆ. ದೇಶದ ಬಗ್ಗೆ ಧರ್ಮದ ಬಗ್ಗೆ ಪ್ರತಿಯೋಬ್ಬರಲ್ಲಿ ಅಭಿಮಾನವಿರಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು.
ಗೋಳಸಾರದ ಸದ್ಗುರು ಚಿನ್ಮಯ ಮೂರ್ತಿ ತ್ರಿಮೂರ್ತಿ ಮಹಶಿವಯೋಗಿಗಳ 31ನೇ ಸ್ಮರಣೋತ್ಸವ ,ದೀಪೋತ್ಸವ ,ಧರ್ಮಸಭೆ ಹಾಗೂ 36 ಜೋಡಿಗಳ ಸಾಮೋಹಿಕ ವಿವಾಹ ಪಾವನ ಸಾನಿಧ್ಯವಹಿಸಿ ಅರ್ಶೀವಚನ ನೀಡಿದ ಶ್ರೀಗಳು ಧರ್ಮ ಮತ್ತು ಜಾತಿ ಒಂದೇ ಅಲ್ಲ ಜಾತಿ ಇಡೀ ದೇಶ ಒಡೇಯುತ್ತದೆ ಧರ್ಮ ಇಡೀ ಮಾನವ ಕುಲವನ್ನು ಒಂದಾಗಿಸುತ್ತದೆ. ಪಂಚ ಪೀಠಗಳು ಮಾನವ ಧರ್ಮಕ್ಕೆ ಜೈವಾಗಲಿ ಎಂಬ ಸಂದೇಶವಿದೆ.
ಕೆಳಬಿದ್ದವರನ್ನು ಧರ್ಮ ಬಿದ್ದವರನ್ನು ತುಳಿತಕ್ಕೆ ಒಳಗಾದವರನ್ನು ಯಾರು ಎತ್ತಿ ಹಿಡಿಯುತ್ತಾರೆಯೂ ಅದೇ ನಿಜವಾದ ಧರ್ಮ, ಇಂದು ಗೋಳಸಾರದ ಶ್ರೀಮಠ ಈ ಭಾಗದಲ್ಲಿ ಶೈಕ್ಷಣಿಕ, ಧಾರ್ಮಿಕ , ಅಧ್ಯಾತ್ಮಿಕ ಸಾಮೋಹಿಕ ವಿವಾಹಗಳಂತ ಧರ್ಮದ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಗೋಳಸಾರ ಪುಂಡಲಿಂಗೇಶ್ವರ ಮಠ ಎಲ್ಲಾ ಪರಂಪರೆಯನ್ನು ಪ್ರೀತಿಸುವ ಪುಣ್ಯಕ್ಷೇತ್ರವಾಗಿದೆ. ಶ್ರೀಶೈಲ ಪೀಠದೊಂದಿಗೆ ಅವಿನಾಭಾವ ಸಂಬAಧ ಇಟ್ಟುಕೊಂಡಿದೆ.ಅಭಿನವ ಪುಂಡಲಿಂಗ ಶಿವಯೋಗಿಗಳು ಎಲ್ಲಿಯೂ ಯಾವ ವೇದಿಕೆಯಲ್ಲಿ ಮಾತನಾಡಿಲ್ಲ ಮಾತನಾಡದೆ ಅವರ ಕೆಲಸ ಕಾರ್ಯಗಳು ಕೃತಿಯಲ್ಲಿರುವ ಎಕೈಕ ಶರಣ ಎಂದರೆ ಅಭಿನವ ಪುಂಡಲಿಂಗೇಶ್ವರರು ಮಾತ್ರ.
ಸಾಮೂಹಿಕ ವಿವಾಹ ಎಂದರೆ ಬಡವರ ದೀನದುರ್ಬಲರ ಮದುವೆಗಳು ಎಂದು ಕೊಳ್ಳುವುದು ತಪ್ಪು ,ಗೋಳಸಾರದ ತ್ರೀಧರೇಶ್ವರರ ಭೂಮಿ ಪುಣ್ಯದನೆಲ ಇಲ್ಲಿ ಗೃಹಸ್ಥ ರಾಗುವುದು ಎಳುಜನ್ಮಗಳ ಅನುಬಂಧ ಸಾಮೋಹಿಕ ವಿವಾಹ ಅಂದರೆ ಭಾಗ್ಯವಂತರ ಮಧುವೆ ಜಗದ್ಗುರುಗಳ ಸನ್ನಿಧಿಯಲ್ಲಿ , ಶರಣರ, ಸಂತರ, ದಾರ್ಶನಿಕರ, ರಾಜಕೀಯ ಧುರೀಣರ ನೂರಾರು ಬಂಧು ಬಾಂಧವರ ಸಮ್ಮುಖದಲ್ಲಿ ನಡೆದ ವಿವಾಹ ಬಹಳ ಪಾವಿತ್ರ್ಯ ಪಡೆದುಕೊಂಡಿದೆ. ಹಣ ಸಂಪತ್ತುಗಳಿಸಿ ಧನದಾಹದಲ್ಲಿರುವದಕ್ಕಿಂತ ಧರ್ಮಾಭಿ ಮಾನಿಗಳಾಗಬೇಕು ದೇಶ ಸದೃಢವಾಗಿ ಕಟ್ಟಲು ಎಲ್ಲರೂ ಕೈಜೋಡಿಸಿ ಎಂದು ಅಶೀರ್ವ ಚನ ನೀಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕಾಸುಗೌಡ ಬಿರಾದಾರ ಮಾತನಾಡಿದರು. ಯು.ಎನ್ ಕುಂಟೋಜಿ ಗ್ರಂಥಪರಿಚಯ ಮಾಡಿದರು.
ಡಾ. ವೃಷಭಲಿಂಗ ಮಹಾಶಿವಯೋಗಿಗಳು, ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ನೈತೃತ್ವ ವಹಿಸಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಗುರುಪಾದೇಶ್ವರ ಶಿವಾಚಾರ್ಯ ರು, ಅಭಿನವ ಶಿವಲಿಂಗ ಶಿವಾಚಾರ್ಯರು, ಸಿದ್ದಲಿಂಗ ಶಿವಾಚಾರ್ಯರು, ಸೋಮಲಿಂಗ ಮಹಾರಾಜರು, ರಾಚೋಟೇಶ್ವರ ಶಿವಾಚಾರ್ಯರು, ಚನ್ನಮಲ್ಲ ಶಿವಾಚಾರ್ಯರು, ಗುರುಪಾದಲಿಂಗ ಮಹಾಶಿವಯೋಗಿಗಳು, ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಡಾ. ಅಭಿನವ ಬಸಲಿಂಗ ಮಹಾಸ್ವಾಮಿಗಳು, ಸಿದ್ದಮಲ್ಲಿಕಾರ್ಜುನ ಶಿವಾಚಾರ್ಯರು ಕಂಠಿಮಠ, ಚಂದ್ರಶೇಖರ ಶಿವಾಚಾರ್ಯರು, ರ‍್ಯಾಣಸಿದ್ದ ಮಹರಾಜರು,ಅಮೋಘಿಸಿದ್ದ ಮಹಾರಾಜ ಸಾನಿಧ್ಯವಹಿಸಿದರು.
ದಯಾಸಾಗರ ಪಾಟೀಲ, ಬಿ.ಡಿ ಪಾಟೀಲ, ಜಗದೀಶ ಕ್ಷತ್ರಿ, ರಮೇಶ ಗುತ್ತೆದಾರ, ಬಾಬು ಸಾಹುಕಾರ ಮೇತ್ರಿ, ಮನೋಹರ ಮಂದೋಲಿ, ಡಾ.ಝಂಪಾ, ಮಲ್ಲಿಕಾರ್ಜುನ ವಗ್ಗರ, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಶ್ರೀಮತಿ ಗುತ್ತರಗಿಮಠ ಎ.ಪಿ ಕಾಗವಾಡಕರ್, ಎ.ಎಸ್ ಪಾಸೋಡಿ, ರವೀಂದ್ರ ಅಳೂರ, ವೇದಿಕೆಯಲ್ಲಿದ್ದರು.
*
ಭಾರತ ವಿಶ್ವದಲ್ಲಿಯೇ ಶ್ರೇಷ್ಠ ಪರಂಪರೆ, ಸಂಸ್ಕೃತಿಯನ್ನು ನಮ್ಮ ಪೂರ್ವಜರು ನಮಗೆ ಕರುಣಿಸಿದ್ದಾರೆ. ನಾಡಿನಾದ್ಯೆಂತ ಅನೇಕ ಮಠ-ಮಾನ್ಯಗಳು ಶರಣರು, ದಾರ್ಶನಿಕ ಯುಗ್ ಪುರುಷರು ನಮಗೆ ಸಂಸ್ಕಾರ ನೀಡಿದ್ದಾರೆ, ವಿಜಯಪೂರದ ಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಮಹಾಶಿವಯೋಗಿಗಳು ಜ್ಞಾನದ ಮೂಲಕ ಈ ಭಾಗದ ಜನರಿಗೆ ಹೃದಯ ಶ್ರೀಮಂತರನ್ನಾಗಿಸಿದ್ದಾರೆ. ಗೋಳಸಾರ ಕ್ಷೇತ್ರ ಅಧ್ಯಾತ್ಮಿಕ,ಧಾರ್ಮಿಕ, ಸಾಮಾಜಿಕ ಕಾರ್ಯ ಹಾಗೂ ಸರಳ ಸಾಮೋಹಿಕ ವಿವಾಹಗಳನ್ನು ಮಾಡುವ ಮೂಲಕ ನಾಡಿನ ಮಠಗಳಲ್ಲಿ ಅಗ್ರ ಗಣ್ಯಸ್ಥಾನ ಪಡೆದುಕೊಂಡಿದೆ. ಶ್ರೀಶೈಲ ಜಗದ್ಗುರುಗಳ ಸನ್ನಿಧಿಯವರ ನೂರಾರು ಶರಣರ ಹರ -ಗುರುಚರಣ ಸಮ್ಮುಖ ನಡೆದ ವಿವಾಹ ಗೃಹಸ್ಥ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ
ಇದನ್ನೂ ಓದಿ: Vijayapura News: ತೊಗರಿ ಇಳುವರಿ ಇಲ್ಲ, ಸರಕಾರ ರೈತರಿಗೆ ಪರಿಹಾರ ನೀಡಬೇಕು: ಬಾಳು ಮುಳಜಿ ಆಗ್ರಹ