SSLC Result 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
SSLC Result 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶೇ. 91.12 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇನ್ನು ಯಾವ ಜಿಲ್ಲೆ ಎಷ್ಟನೆ ಸ್ಥಾನ ಪಡೆದಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.


ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು (SSLC Result 2025) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಶುಕ್ರವಾರ ಬಿಡುಗಡೆ ಮಾಡಿದೆ. ಈ ಬಾರಿ ಹೆಣ್ಣುಮಕ್ಕಳು ಶೇ. 74 ಹಾಗೂ ಗಂಡು ಮಕ್ಕಳು ಶೇ.58.07 ಸೇರಿ ಒಟ್ಟು ಶೇ. 66.14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶೇ. 91.12 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ಶೇ. 42.43 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇನ್ನು ಯಾವ ಜಿಲ್ಲೆ ಎಷ್ಟನೆ ಸ್ಥಾನ ಪಡೆದಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಮಾರ್ಚ್ 21 ರಿಂದ ಏ. 4 ರವರೆಗೆ ಒಟ್ಟು 2818 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 8,42,173 ಅಭ್ಯರ್ಥಿಗಳು ಹಾಜರಾಗಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಏ.15 ರಿಂದ 26 ರವರೆಗೆ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 237 ಮೌಲ್ಯಮಾಪನ ಕೇಂದ್ರಗಳಲ್ಲಿ 60,943 ಮೌಲ್ಯಮಾಪಕರಿಂದ ನಡೆಸಲಾಗಿತ್ತು. ಇದೀಗ ವಿದ್ಯಾರ್ಥಿಗಳ ವೈಯಕ್ತಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಶುಕ್ರವಾರ ಮಧ್ಯಾಹ್ನ ಶಿಕ್ಷಣ ಇಲಾಖೆಯ ವೆಬ್‌ಸೈಟ್ https://karresults.nic.in/ ಬಿಡುಗಡೆ ಮಾಡಲಾಗಿದೆ.
ಜಿಲ್ಲಾವಾರು ಶೇಕಡಾವಾರು ಫಲಿತಾಂಶ
1.ದಕ್ಷಿಣ ಕನ್ನಡ- 91.12
2.ಉಡುಪಿ- 89.96
3.ಉತ್ತರ ಕನ್ನಡ -83.19
4.ಶಿವಮೊಗ್ಗ- 82.29
5.ಕೊಡಗು-82.21
6.ಹಾಸನ- 82.12
7.ಶಿರಸಿ-80.47
8.ಚಿಕ್ಕಮಗಳೂರು-77.9
9.ಬೆಂಗಳೂರು ಗ್ರಾಮಾಂತರ- 74.02
10.ಬೆಂಗಳೂರು ದಕ್ಷಿಣ- 72.3
11.ಬೆಂಗಳೂರು ಉತ್ತರ-72.27
12.ಮಂಡ್ಯ-69.27
13.ಹಾವೇರಿ-69.03
14.ಕೋಲಾರ- 68.47
15.ಮೈಸೂರು-68.39
16.ಬಾಗಲಕೋಟೆ-68.29
17.ಗದಗ- 67.72
18.ಧಾರವಾಡ-67.62
19.ವಿಜಯನಗರ-67.62
20.ತುಮಕೂರು-67.03
21.ದಾವಣಗೆರೆ-66.09
22.ಚಿಕ್ಕಬಳ್ಳಾಪುರ- 63.64
23.ಚಿತ್ರದುರ್ಗ-63.21
24.ರಾಮನಗರ- 63.12
25.ಬೆಳಗಾವಿ-62.16
26.ಚಿಕ್ಕೋಡಿ-62.12
27.ಚಾಮರಾಜನಗರ-61.45
28.ಮಧುಗಿರಿ-60.65
29.ಬಳ್ಳಾರಿ-60.26
30.ಕೊಪ್ಪಳ- 57.32
31.ಬೀದರ್- 53.25
32.ರಾಯಚೂರು- 52.05
33.ಯಾದಗಿರಿ-51.6
34.ವಿಜಯಪುರ- 49.58
35.ಕಲಬುರಗಿ-42.43
ಒಟ್ಟು ಫಲಿತಾಂಶ - ಶೇ. 66.14

2024-25ನೇ ಸಾಲಿನಲ್ಲಿ ಈ ಬಾರಿ ಒಟ್ಟು 66.14% ನಷ್ಟು ಫಲಿತಾಂಶ ಬಂದಿದೆ. ಕರಾವಳಿಯ ಮೂರು ಜಿಲ್ಲೆಗಳು ಮೊದಲ ಮೂರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಕೊನೆಯ ಸ್ಥಾನದಲ್ಲಿ ಕಲಬುರಗಿ (42.43%) ಇದೆ. 65 ಮಕ್ಕಳು 624 ಅಂಕ, 108 ಮಕ್ಕಳು 623 ಅಂಕ, 189 ಮಕ್ಕಳು 622 ಅಂಕ ಗಳಿಸಿದ್ದಾರೆ. 10.51% ಮಕ್ಕಳು ಎ ಪ್ಲಸ್ (90-100%), 18.46% ಮಕ್ಕಳು ಎ (80- 89%) 21.96% ಮಕ್ಕಳು ಬಿ (70- 79%) ಗ್ರೇಡ್ ಅಂಕಗಳನ್ನು ಪಡೆದಿದ್ದಾರೆ. ಸರಕಾರಿ ಶಾಲೆಗಳಿಗೆ 62.7% ಹಾಗೂ ಖಾಸಗಿ ಶಾಲೆಗಳಿಗೆ 75.59 ಫಲಿತಾಂಶ ಬಂದಿದೆ. ನಗರದ ಪ್ರದೇಶದಲ್ಲಿ ಶೇ.67.05 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 65.47 ಫಲಿತಾಂಶ ದಾಖಲಾಗಿದೆ.
ಒಟ್ಟು 144 ಶಾಲೆಗಳಲ್ಲಿ ಶೇಕಡ 0% ಫಲಿತಾಂಶ ದಾಖಲಾಗಿದೆ. ಇದರಲ್ಲಿ ಸರ್ಕಾರಿ ಶಾಲೆ - 6, ಅನುದಾನಿತ ಶಾಲೆ - 30, ಅನುದಾನ ರಹಿತ ಶಾಲೆ - 108 ಸೊನ್ನೆ ಫಲಿತಾಂಶ ಪಡೆದ ಶಾಲೆಗಳು. ಒಟ್ಟು 921 ಶಾಲೆಗಳಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆ - 329, ಅನುದಾನಿತ ಶಾಲೆ - 53, ಅನುದಾನ ರಹಿತ ಶಾಲೆ - 530 ಔಟ್ ಆಫ್ ಔಟ್ ಫಲಿತಾಂಶ ಪಡೆದ ಶಾಲೆಗಳಾಗಿವೆ. ಶೇಕಡ 74.00 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾದರೆ, ಶೇಕಡ 58.07 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 224900 (67.05%) ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸ್. ಒಟ್ಟು 298175 (65.47%) ಗ್ರಾಮಾಂತರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
ಫಲಿತಾಂಶಕ್ಕಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ https://karresults.nic.in/ ನಲ್ಲಿ ಭೇಟಿ ನೀಡಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025 ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಪರೀಕ್ಷಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿ ಅಗತ್ಯ ಮಾಹಿತಿ ದಾಖಲಿಸಬೇಕು.ನಂತರ ಅಂಕಪಟ್ಟಿ ತೆರೆದುಕೊಳ್ಳಲಿದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ.
ಈ ಸುದ್ದಿಯನ್ನೂ ಓದಿ | SSLC Result 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆ: 22 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್! ಗ್ರೇಸ್ ಅಂಕ ಇಲ್ಲದೆಯೂ ಶೇ.8 ಫಲಿತಾಂಶ ಏರಿಕೆ