ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ( District Working Journalists Association) ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಮಲ್ಲಪ್ಪ ಸಂಕೀನ್ (Mallappa Sankeen)ಅವರು ಭರ್ಜರಿಯಾಗಿ ಜಯ ಸಾಧಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ತಮ್ಮ ಎದುರಾಳಿ ಯಾಗಿದ್ದ ದಿನೇಶ್ ವಿ.ಸಿ. ಅವರನ್ನು 9 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬಿರಿಸಿನಿಂದ ಮತದಾನ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 142 ಮತದಾರರ ಪೈಕಿ 137 ಮತದಾರರು ಸರದಿಯಲ್ಲಿ ನಿಂತುಕೊಂಡರು ತಮ್ಮ ಮತದಾನ ಹಕ್ಕು ಚಲಾಯಿಸಿದರು.
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಪ್ಪ ಸಂಕೀನ್ ಅವರು 73 ಮತಗಳನ್ನು ಪಡೆದರು. ಚುನಾವಣೆಯಲ್ಲಿ ಪರಾಭವಗೊಂಡಿರುವ ದಿನೇಶ್ ವಿ.ಸಿ. 64 ಮತ ಪಡೆಯುವ ಮೂಲಕ ಸೋಲು ಅನುಭವಿಸಿದರು.
ಇದನ್ನೂ ಓದಿ: Yadgir News: ಯಾದಗಿರಿ ನೂತನ ಜಿಲ್ಲಾಧಿಕಾರಿಯಾಗಿ ಭೋಯರ್ ಹರ್ಷಲ್ ನೇಮಕ
ಮಲ್ಲಪ್ಪ ಸಂಕೀನ್ ಅವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಸಂಕಿನ್
ರವಿವಾರ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಮಲ್ಲಪ್ಪ ಸಂಕಿನ್ ಅವರು ಜಯಭೇರಿ ಬಾರಿಸಿದ್ದು ಗುಲಾಲ ಹಚ್ಚಿ ಸಂಭ್ರಮಿಸಿದರು.
ಒಟ್ಟು 142 ಅರ್ಹ ಮತದಾರರಲ್ಲಿ 5 ಮತದಾರರು ಬಾರದ ಹಿನ್ನಲೆ 137 ಮತ ಚಲಾವಣೆ ಯಾಗಿದ್ದು 73 ಮತ ಹಾಲಿ ಅಧ್ಯಕ್ಷ ಮಲ್ಲಪ್ಪ ಸಂಕಿನ್ ಪಡೆದುಕೊಂಡರೆ , 64 ಮತ ಪಡೆದುಕೊಂಡ ದಿನೇಶ್ ವಿ. ಸಿ ಸೋಲು ಒಪ್ಪಿಕೊಳ್ಳಬೇಕಾಯಿತು.
ಇಬ್ಬರು ಅಭ್ಯರ್ಥಿಗಳ ನಡುವೆ ಭಾರಿ ಬಿರುಸಿನ ಪೈಪೋಟಿ ನಡೆದಿತ್ತು. ತೆರೆಮರೆಯಲ್ಲಿ ಕೆಲ ಸಮುದಾಯದವರು ಒಬ್ಬರಿಗೊಬ್ಬರು ಫೋನ್ ಹಾಯಿಸಿ ಹೇಳುವುದು ನಡೆದಿತ್ತು.
ಆದರೆ ಈ ಮೊದಲಿನ ಅವಧಿಗೆ ತಮ್ಮ ಕಾರ್ಯವೈಖರಿಯ ಮೂಲಕ ಚಾಪೂ ಮೂಡಿಸಿದ್ದ ಮಲ್ಲಪ್ಪ ಸಂಕಿನ್ ಅವರಿಗೆ ಮತದಾರರು ಮತ್ತೊಮ್ಮೆ ಕೈಹಿಡಿದಿದ್ದಾರೆ.