ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhima River Floods: ಭೀಮಾ ನದಿ ಪ್ರವಾಹಕ್ಕೆ ಗಿರಿನಾಡು ಯಾದಗಿರಿ ತತ್ತರ; ಹಲವು ಬಡಾವಣೆಗಳ ಮನೆಗಳಿಗೆ ನುಗ್ಗಿದ ನೀರು!

Yadgir Rains: ಭೀಮಾ ನದಿಯ ಜಲಪ್ರಳಯದಿಂದ ಯಾದಗಿರಿ ನಗರದ ಗ್ರೀನ್ ಸಿಟಿ, ವಿಶ್ವರಾಧ್ಯ ಬಡಾವಣೆಗೆ ನೀರು ನುಗ್ಗಿದು,ಜಿಲ್ಲಾ ಕ್ರೀಡಾಂಗಣ, ಬಿಜೆಪಿ ಕಚೇರಿ ಸೇರಿದಂತೆ ಹಲವು ಪ್ರದೇಶ ಮುಳುಗಡೆಯಾಗಿವೆ. ನೀರು ನುಗ್ಗಿರುವುದರಿಂದ ನಗರದ ನಿವಾಸಿಗಳು ಮನೆಗಳಲ್ಲಿ ಸಿಲುಕಿದ್ದಾರೆ.

ಯಾದಗಿರಿ: ಮಹಾರಾಷ್ಟ್ರದಲ್ಲಿ 'ಮಹಾ' ಮಳೆಯಿಂದ (Yadgir Rains) ಭೀಮಾ ನದಿಯ ಪ್ರವಾಹದ ತೀವ್ರತೆ (Bhima River Floods) ಹೆಚ್ಚಾಗಿ, ಗಿರಿನಾಡು ಯಾದಗಿರಿ ತತ್ತರಿಸಿದೆ. ನಗರದ ಹಲವು ಬಡಾವಣೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭೀಮಾ ನದಿಯ ಜಲಪ್ರಳಯದಿಂದ ನಗರದ ಗ್ರೀನ್ ಸಿಟಿ, ವಿಶ್ವರಾಧ್ಯ ಬಡಾವಣೆಗೆ ನೀರು ನುಗ್ಗಿದು, ಜಿಲ್ಲಾ ಕ್ರೀಡಾಂಗಣ, ಬಿಜೆಪಿ ಕಚೇರಿ ಸೇರಿದಂತೆ ಹಲವು ಪ್ರದೇಶ ಮುಳುಗಡೆಯಾಗಿವೆ. ನೀರು ನುಗ್ಗಿರುವುದರಿಂದ ನಗರದ ನಿವಾಸಿಗಳು ಮನೆಗಳಲ್ಲಿ ಸಿಲುಕಿದ್ದಾರೆ.

ಪ್ರವಾಹದ ತೀವ್ರತೆ ಇನ್ನೂ ಹೆಚ್ಚಾದರೆ ಮನೆಯಲ್ಲಿನ ಅಗತ್ಯ ವಸ್ತುಗಳು ಹಾನಿಯಾಗುವ ಆತಂಕದಲ್ಲಿ ಜನತೆ ಇದ್ದಾರೆ. ಬೆಳಗ್ಗೆಯಿಂದ ಪ್ರವಾಹದ ನೀರಿನಲ್ಲಿ ಜನರು ಓಡಾಡುತ್ತಾ ಜನರನ್ನು ಹೈರಾಣಾಗಿದ್ದಾರೆ.

ಭಾರಿ ಮಳೆಗೆ ನರಳಿದ ಉತ್ತರ ಕರ್ನಾಟಕ

ಕಲಬುರಗಿ: ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಲ್ಯಾಣ ಮತ್ತು ಮುಂಬೈ ಕರ್ನಾಟಕದ 6 ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಬಾಗಲಕೋಟೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ವಿಜಯಪುರದಲ್ಲಿ ಇನ್ನೊಬ್ಬರು ಮಳೆಯಿಂದ ಕೊಚ್ಚಿ ಹೋಗಿದ್ದಾರೆ. ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಬೆಳಗಾವಿಯಲ್ಲಿ ಮನೆಗಳು, ಹೊಲಗಳು ಮುಳುಗಿವೆ. ಮನೆಗಳು ನೆಲಸಮ ಗೊಂಡಿದ್ದು, ದನಕರುಗಳು ಸಾವನ್ನಪಿವೆ.

ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಪ್ರವಾಹದ ಸ್ಥಿತಿ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಯ ಕಾರಣ ಕೃಷ್ಣಾ ಮತ್ತು ಭೀಮಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಇದು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮಾರಕವಾಗಿದ್ದು ಭಾರಿ ಹಾನಿಯಾಗಿದೆ. ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತ ಗೊಂಡಿದೆ. ಸೆ.28ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸನ್ನತಿ, ಗುರುಸಣಗಿ ಬ್ಯಾರೇಜ್ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಹಲವು ಗ್ರಾಮಗಳಿಗೆ ಮುಳು ಗಡೆ ಭೀತಿ ಎದುರಾಗಿದೆ. ವಾಡಿಕೆಗಿಂತ ಮಳೆ ಹೆಚ್ಚಾಗಿ ಒಟ್ಟು 2239ರಷ್ಟು ಹೆಚ್ಚಿನ ಮಳೆ ಬಿದ್ದಿದೆ.

ಈ ಸುದ್ದಿಯನ್ನೂ ಓದಿ | Karnataka Weather: ಇಂದು ಕರಾವಳಿ, ಉತ್ತರ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ಸಾಧ್ಯತೆ

ಬೆಳಗಾವಿ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸವದತ್ತಿ, ರಾಮ ದುರ್ಗ, ಬೈಲಹೊಂಗಲ ಸೇರಿದಂತೆ ಅನೇಕ ತಾಲೂ ಕುಗಳಲ್ಲಿ ಬೆಳೆ ಹಾನಿ ಸಂಭವಿಸಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷ್ಣಾನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಅಥಣಿ ಹಾಗೂ ಮಸರಗುಪ್ಪ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ. ಇನ್ನೂ ಬೈಲಹೊಂಗಲ ತಾಲೂಕಿನಲ್ಲಿ ಮಳೆ ಆವಾಂತರ ಸೃಷ್ಟಿಸಿದ್ದು, ಹಳ್ಳಗಳು ತುಂಬಿ ಹರಿಯು ತ್ತಿರುವ ಕಾರಣ ರಸ್ತೆ ಸಂಪರ್ಕ ಕಡಿತವಾಗಿದೆ.