Murder Case: ಹಳೇ ವೈಷಮ್ಯ; ದಲಿತ ಮುಖಂಡ ಸೇರಿ ಇಬ್ಬರ ಬರ್ಬರ ಕೊಲೆ
Murder Case: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರದ ಬಳಿ ಭಾನುವಾರ ಬೆಳಗ್ಗೆ ಜೋಡಿ ಕೊಲೆ ನಡೆದಿದೆ. ತರಕಾರಿ ತರಲು ಊರಿನಿಂದ ಬೈಕ್‌ನಲ್ಲಿ ಹೊರಟ್ಟಿದ್ದ ಇಬ್ಬರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.


ಯಾದಗಿರಿ: ಹಳೇ ವೈಷಮ್ಯದ ಹಿನ್ನೆಲೆ ದಲಿತ ಮುಖಂಡ ಸೇರಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ (Murder Case) ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರದ ಬಳಿ ನಡೆದಿದೆ. ದಲಿತ ಮುಖಂಡ ಮಾಪ್ಪಣ್ಣ ಮದ್ರಕ್ಕಿ(48) ಅಲಿಸಾಬ್ (50) ಹತ್ಯೆಯಾದವರು. ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದು, ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ದಲಿತ ಮುಖಂಡ ಮಾಪ್ಪಣ್ಣ ಮತ್ತು ಆತನ ಜತೆಗಿದ್ದ ಅಲಿಸಾಬ್‌ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ತರಕಾರಿ ತರಲು ಊರಿನಿಂದ ಬೈಕ್‌ನಲ್ಲಿ ಹೊರಟ್ಟಿದ್ದ ಇಬ್ಬರನ್ನು ಸಾದ್ಯಾಪುರ ಸಮೀಪದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Assault Case: ಬೆಂಗಳೂರಲ್ಲಿ ಅಮಾನವೀಯ ಘಟನೆ; ವ್ಯಕ್ತಿಗೆ ಸನ್ಮಾನ ಮಾಡಿ, ಮನಸೋ ಇಚ್ಛೆ ಹಲ್ಲೆ
ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಮೃತ ದೇಹಗಳನ್ನು ಶಹಾಪುರ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ . ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ.
ಕಲಬುರಗಿಯಲ್ಲಿ ಹೀನ ಕೃತ್ಯ; ಮಂಗಳಮುಖಿಯನ್ನು ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ
ಕಲಬುರಗಿ: ನಗರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಮಂಗಳಮುಖಿಯನ್ನು ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ ಮಾಡಿರುವುವುದು ಕಂಡುಬಂದಿದ್ದು, ಭೀಕ್ಷಾಟನೆಯ ಹಣದಲ್ಲಿ ಪಾಲು ಕೊಡದಿದಕ್ಕೆ ಮುಂಗಳಮುಖಿಯರೇ ಹಲ್ಲೆ ಮಾಡಿದ್ದಾರೆ.
ಅಂಕಿತಾ ಹಲ್ಲೆಗೆ ಒಳಗಾದ ಮಂಗಳಮುಖಿ. ಕಲಬುರಗಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಶೀಲಾ, ಮಾಲಾ, ಭವಾನಿ ಸೇರಿ 6 ಮಂಗಳಮುಖಿಯರು ಕೃತ್ಯ ಎಸಗಿದ್ದು, ಮಂಗಳಮುಖಿಯರು ಹಲ್ಲೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಾಳುವನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Belagavi Accident: ಕಾಂಕ್ರೀಟ್ ಮಿಕ್ಸರ್ ವಾಹನ ಉರುಳಿ ಕಾರು ಅಪ್ಪಚ್ಚಿ; ಪವಾಡಸದೃಶವಾಗಿ ಇಬ್ಬರು ಪಾರು
ಹಣ ಡಬ್ಲಿಂಗ್ ಪ್ರಕರಣ; ರನ್ಯಾ ರಾವ್ ಕಾರು ಚಾಲಕ ಅರೆಸ್ಟ್
ಬೆಂಗಳೂರು: ಹಣ ಡಬ್ಲಿಂಗ್ ಪ್ರಕರಣಕ್ಕೆ (Money doubling scam) ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ದೀಪಕ್ ಬಂಧಿತ ಆರೋಪಿ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯ ನಿವಾಸಿ. ಈತ ಈ ಹಿಂದೆ ರನ್ಯಾ ರಾವ್ ಕಾರು ಚಾಲಕನಾಗಿದ್ದ ಎನ್ನಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಹಲವರಿಗೆ ವಂಚಿಸಿದ್ದ ಆರೋಪ ದೀಪಕ್ ಮೇಲಿದೆ. ಹಲವರಿಂದ ಹಣ ಪಡೆದು ಈತ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ದೀಪಕ್‌ನನ್ನು ಬಂಧಿಸಲಾಗಿದೆ. ಇನ್ನು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೂ ದೀಪಕ್‌ಗೂ ಸಂಬಂಧವಿದೆಯಾ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.