ಪಾಟ್ನಾ: ಉತ್ತರಪ್ರದೇಶದ(Uttar Pradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ನಡೆಯತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳದಲ್ಲಿ(Mahakumbh) ಪಾಲ್ಗೊಳ್ಳಲು, ಕೋಟ್ಯಂತರ ಭಕ್ತರು ಹರಿದು ಬರುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಬರುವ ಯಾತ್ರಿಕರಿಗೆ ಟ್ರಾಫಿಕ್ ಬಿಸಿ ತಟ್ಟುತ್ತಿದೆ. ಈ ಮಧ್ಯೆಯೇ ಬಿಹಾರದ(Bihar) ಸಾಸಾರಾಂ– ರೋಹ್ತಾಸ್ ಜಿಲ್ಲೆಗಳ ಪ್ರಮುಖ ರಸ್ತೆಗಳಲ್ಲಿ ನಿನ್ನೆ(ಫೆ.10) 35 ಕಿ.ಮೀ ಉದ್ದಕ್ಕೂ ಸಂಚಾರ ದಟ್ಟಣೆ ಉಂಟಾಗಿದೆ. ಭಕ್ತಾದಿಗಳು ರಾತ್ರಿಯಿಡಿ ಹೆದ್ದಾರಿಯಲ್ಲೇ ಕಳೆದಿದ್ದು, ಟ್ರಾಫಿಕ್ ಜಾಮ್‌ನಿಂದಾಗಿ ಹೈರಾಣಾಗಿದ್ದಾರೆ. ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಸಾಕಷ್ಟು ಪರದಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಪ್ರಯಾಗ್‌ರಾಜ್ ಮಾರ್ಗದಲ್ಲಿ ದೊಡ್ಡ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ. ಈ ಪರಿಣಾಮ ಗಡಿ ಜಿಲ್ಲೆಗಳಾದ ಸಾಸಾರಾಂ, ರೋಹ್ತಾಸ್ ಜಿಲ್ಲೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಕೆಲ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದು, ಕೆಲವರು ರಸ್ತೆ ಬದಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಾಕಷ್ಟು ಹರ ಸಾಹಸಪಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ದ್ವಿಚಕ್ರ ವಾಹನದಲ್ಲೇ 1200 km ಕ್ರಮಿಸಿ, ಕುಂಭಮೇಳ ಸುತ್ತಿ ಬಂದ ದಂಪತಿ!
ಪ್ರಯಾಗ್‌ರಾಜ್‌ನತ್ತ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರಿಂದ ಸೋಮವಾರ ಕಿ.ಮಿ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. 48 ಗಂಟೆಗಳಿಂದ ಹೆದ್ದಾರಿಯಲ್ಲಿ ಸಿಲುಕಿದ್ದೇವೆ. 50 ಕಿ.ಮೀ. ಅಂತರ ಕ್ರಮಿಸಲು 10ರಿಂದ 12 ಗಂಟೆ ಸಮಯ ಕಳೆಯಿತು ಎಂದು ಪ್ರಯಾಣಿಕರೊಬ್ಬರು ಹೇಳಿದರು.
ಬಸಂತ್ ಪಂಚಮಿಯ ಶಾಹಿ ಸ್ನಾನದ ನಂತರ ಜನಸ್ತೋಮ ಕಡಿಮೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಫೆ.12ರ ಶಾಹಿ ಸ್ನಾನಕ್ಕಾಗಿ ಲಕ್ಷಾಂತರ ಮಂದಿ ಪ್ರಯಾಗ್ ರಾಜ್‌ಗೆ ಆಗಮಿಸಿದ್ದಾರೆ. ಜನಸಂದಣಿಯನ್ನು ತಡೆಯಲು ಪ್ರಯಾಗ್ ರಾಜ್ ಕಡೆಗೆ ಹೋಗುವ ಹಲವಾರು ವಾಹನಗಳನ್ನು ವಿವಿಧ ಪ್ರದೇಶಗಳಲ್ಲಿ ತಡೆ ಹಿಡಿಯಲಾಗಿದೆ.