Viral News: ದ್ವಿಚಕ್ರ ವಾಹನದಲ್ಲೇ 1200 km ಕ್ರಮಿಸಿ, ಕುಂಭಮೇಳ ಸುತ್ತಿ ಬಂದ ದಂಪತಿ!
ಮುಂಬೈ ಮೂಲದ ರಾಜೇಶ್ ಮೆಹ್ತಾ ಮತ್ತು ಅವರ ಪತ್ನಿ ಸಾಧನಾ ಮೆಹ್ತಾ ಅವರು 5ಲಕ್ಷ ರೂಪಾಯಿ ಮೌಲ್ಯದ ಬೈಕ್ ನಲ್ಲಿ ಮಹಾರಾಷ್ಟ್ರದ ಭಾಯಂದರ್ ನಿಂದ ಪ್ರಯಾಗ್‌ರಾಜ್‌ಗೆ ಬೈಕ್‌ನಲ್ಲೇ ಪ್ರಯಾಣ ಮಾಡಿದ್ದಾರೆ. ಝಾನ್ಸಿಯಿಂದ ಉತ್ತರ ಪ್ರದೇಶಕ್ಕೆ ತಲುಪಿ ಆ ಬಳಿಕ ಚಿತ್ರಕೂಟದ ಮೂಲಕ 1200 km ನ ದೂರದಲ್ಲಿದ್ದ ಪ್ರಯಾಗ್ ರಾಜ್ ಸಂಗಮ ಪ್ರದೇಶಕ್ಕೆ ಈ ಜೋಡಿ ತಲುಪಲು ಮೂರು ದಿನಗಳು ಕಳೆದಿವೆ.
![ಕುಂಭಮೇಳಕ್ಕೆ ಬೈಕ್‌ನಲ್ಲೇ ಪ್ರಯಾಣಿಸಿದ ದಂಪತಿ!](https://cdn-vishwavani-prod.hindverse.com/media/original_images/Maha_Kumbh_Couples.jpg)
ಕುಂಭಮೇಳ 2025
![Profile](https://vishwavani.news/static/img/user.png)
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಜಗತ್ತಿನಾದ್ಯಂತ ಪ್ರವಾಸಿಗರ ದಂಡೇ ಆಗಮಿಸಿದೆ. ಮೇಳದಲ್ಲಿ ಕೋಟ್ಯಾಂತರ ಜನ ಭಾಗವಹಿಸುತ್ತಿದ್ದಾರೆ. ಮಹಾಕುಂಭ ಮೇಳ ಪ್ರಯಾಣಕ್ಕಾಗಿ ಪ್ರವಾಸಿಗರು, ಬಸ್ , ಟ್ರೈನ್, ಕಾರು, ಟ್ಯಾಕ್ಸಿ ಎಂದು ಬುಕ್ ಮಾಡುವುದು ಸಹಜ ಆದರೆ ಇಲ್ಲೊಂದು ಜೋಡಿ ತಮ್ಮ ದ್ವಿಚಕ್ರವಾಹನದಲ್ಲಿಯೇ ಕುಂಭಮೇಳ ಸುತ್ತಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral News) ಆಗುತ್ತಿದೆ. ಈ ಮೂಲಕ ಮನಸ್ಸಿದ್ದರೆ ಮಾರ್ಗ ಎನ್ನಲು ಈ ಜೋಡಿ ಬೆಸ್ಟ್ ಉದಾಹರಣೆ ಎಂದರೂ ತಪ್ಪಾಗದು.
ಮುಂಬೈ ಮೂಲದ ರಾಜೇಶ್ ಮೆಹ್ತಾ ಮತ್ತು ಅವರ ಪತ್ನಿ ಸಾಧನಾ ಮೆಹ್ತಾ ಅವರು 5ಲಕ್ಷ ರೂಪಾಯಿ ಮೌಲ್ಯದ ಬೈಕ್ ನಲ್ಲಿ ಮಹಾರಾಷ್ಟ್ರದ ಭಾಯಂದರ್ ನಿಂದ ಪ್ರಯಾಗ್‌ರಾಜ್‌ಗೆ ಬೈಕ್‌ನಲ್ಲೇ ಪ್ರಯಾಣ ಮಾಡಿದ್ದಾರೆ. ಝಾನ್ಸಿಯಿಂದ ಉತ್ತರ ಪ್ರದೇಶಕ್ಕೆ ತಲುಪಿ ಆ ಬಳಿಕ ಚಿತ್ರಕೂಟದ ಮೂಲಕ 1200 km ದೂರದಲ್ಲಿದ್ದ ಪ್ರಯಾಗ್‌ರಾಜ್ ಸಂಗಮ ಪ್ರದೇಶಕ್ಕೆ ಈ ಜೋಡಿ ತಲುಪಲು ಮೂರು ದಿನಗಳು ಕಳೆದಿವೆ. ಪ್ರಯಾಗ್ ರಾಜ್ ನಲ್ಲಿ 1 ದಿನ ಕಳೆದು ಅಲ್ಲಿಂದ ತ್ರಿವೇಣಿ ಘಾಟ್ ಮತ್ತು ರುದ್ರಾಕ್ಷ ದೇವಾಲಯದಂತಹ ಪ್ರಮುಖ ಸ್ಥಳಗಳಿಗೂ ಭೇಟಿ ನೀಡಿದ್ದಾರೆ.
ಕುಂಭಮೇಳ ಪ್ರಯಾಣದ ಕಾರಣ ರೈಲು, ವಿಮಾನಗಳು ಈಗಾಗಲೇ ಬಹುತೇಕ ಬುಕ್ ಆಗಿದ್ದವು. ಟಿಕೆಟ್ ದರಗಳು 20,000 ದಿಂದ 30,000 ರೂಪಾಯಿ ಗಳಷ್ಟಿದ್ದು ಇದಕ್ಕೆ ಪರ್ಯಾಯ ಮಾರ್ಗ ಹುಡುಕಿದಾಗ ರಾಜೇಶ್ ದಂಪತಿಗೆ ತಮ್ಮ ಬಳಿ ಇರುವ 5ಲಕ್ಷ ರೂಪಾಯಿ ಮೌಲ್ಯದ ಬೈಕ್ ನಲ್ಲೇ ಪ್ರಯಾಣ ಮಾಡುವುದು ಉತ್ತಮ ಎಂದು ಭಾವಿಸಿ, ಹೀಗಾಗಿ ಈ ದಂಪತಿ ಅತೀ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮುಗಿಸಿದ್ದು ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ಇದನ್ನು ಓದಿ: Viral Video: 25 ಸೆಕೆಂಡುಗಳಲ್ಲಿ ಗಣಿತ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ ಮಾಡಿದ ಪ್ರಾಂಶುಪಾಲ; ಕಾರಣವೇನು?
ಈ ಬಗ್ಗೆ ಮಾತನಾಡಿ ರಾಜೇಶ್ ದಂಪತಿ ಪ್ರಯಾಗ್ ರಾಜ್ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸಿಎಂ ಯೋಗಿ ಆದಿತ್ಯಾನಾಥ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಉತ್ತರ ಪ್ರದೇಶದ ಜನರು ನೀಡಿದ್ದ ಆಥಿತ್ಯ ವನ್ನು ಸ್ಮರಿಸಿಕೊಂಡು ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಯಾರಾದರೂ ನಮ್ಮಂತೆ ಬೈಕ್ ನಲ್ಲೇ ಸಂಚಾರ ಮಾಡಲು ಬಯಸಿದರೆ ಅಂತವರು ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.