Viral Video: ಮೆಟ್ರೋ ಸ್ಟೇಷನ್ ಬಳಿ ತನಗೇ ತಾನೇ ಬೆಂಕಿ ಹಚ್ಚಿಕೊಂಡ ಭೂಪ! ಶಾಕಿಂಗ್ ವಿಡಿಯೊ ಫುಲ್ ವೈರಲ್
Brazil Horror: ಬ್ರೆಜಿಲ್‌ನಲ್ಲಿ ವ್ಯಕ್ತಿಯೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಸಾವೊ ಪೌಲೋನಲ್ಲಿರುವ ಸಾವೋ ಬೆಂಟೋ ಮೆಟ್ರೋ ನಿಲ್ದಾಣದಲ್ಲಿ ಮೇ 30 ರಂದು ನಡೆದಿದೆ. ವಿಡಿಯೊದಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಓಡಾಡುತ್ತಿರುವುದನ್ನು ಕಾಣಬಹುದಾಗಿದೆ.


ಬ್ರೆಜಿಲ್: ಮನೆಮಠ ಇಲ್ಲದೇ ಬೀದಿ ಬೀದಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬ (74) ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಭೀಕರ ಘಟನೆ(Brazil Horror) ಬ್ರೆಜಿಲ್‌ನ ಸಾವೊ ಪೌಲೋನದಲ್ಲಿ ನಡೆದಿದೆ. ಇಲ್ಲಿನ ಸಾವೋ ಬೆಂಟೋ ಮೆಟ್ರೋ ನಿಲ್ದಾಣದಲ್ಲಿ ಮೇ 30 ರಂದು ಈ ದುರ್ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈ ಭಾರೀ ವೈರಲ್(Viral Video) ಆಗುತ್ತಿದೆ. ವಿಡಿಯೊದಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಓಡಾಡುತ್ತಿರುವುದನ್ನು ಕಾಣಬಹುದಾಗಿದೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು, ಮೆಟ್ರೋ ಸಿಬ್ಬಂದಿಯವರಲ್ಲಿ ಮತ್ತು ಪ್ರಯಾಣಿಕರಲ್ಲಿ ಆಘಾತ ಉಂಟು ಮಾಡಿದೆ.
ಇನ್ನು ಈ ಕೃತ್ಯಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೊದಲ್ಲಿ ಬೆಂಕಿ ಹಚ್ಚಿರುವ ವ್ಯಕ್ತಿಯನ್ನು ಕಂಡು ಜನ ಆಘಾತಗೊಂಡಿರುವುದು ಮತ್ತು ಆತನ ರಕ್ಷಣೆಗೆ ಮುಂದಾಗುವುದು ಕಾಣಬಹುದಾಗಿದೆ. ಆದರೆ ಆತ ಬದುಕುಳಿದಿದ್ದಾನೆಯೇ ಅಥವಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾನೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ವೈರಲ್ ವಿಡಿಯೊ ಇಲ್ಲಿದೆ
🇧🇷 Brasil 🇧🇷
— Cianurosex (@cianurosex) May 30, 2025
Um homem pega fogo no próprio corpo na estação São Bento, metro de São Paulo.
Funcionários usaram cinco extintores para apagar o fogo.
Um reflexo da sociedade, um reflexo de que o Lula o está a fazer muito bem...
pic.twitter.com/VZlZy7daYD
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ಧಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಹೆಚ್ಚುವರಿ ಮಾಹಿತಿ ಸದ್ಯ ಲಭ್ಯವಿಲ್ಲ. ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿರಬಹುದು ಅಥವಾ ಖಿನ್ನತೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Accident: ಕಾರು ಚಾಲಕನ ಹುಚ್ಚಾಟಕ್ಕೆ ವಿದ್ಯಾರ್ಥಿಗಳು ಸೇರಿದಂತೆ 12 ಮಂದಿಗೆ ಗಾಯ- ಭೀಕರ ದೃಶ್ಯ ವೈರಲ್
ಬ್ರೆಜಿಲ್‌ನಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಿದೆ:
ಇತ್ತೀಚಿಗೆ ಬ್ರೆಜಿಲ್‌ನಲ್ಲಿ ಕಂಡುಬರುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅಲ್ಲಿನ ಜನರಿಗೆ ವಸತಿ ಸೌಲಭ್ಯದ ಕೊರತೆ ಇದೆ. ಬ್ರೆಜಿಲ್‌ನಲ್ಲಿ ವಸತಿ ರಹಿತ ಜನಸಂಖ್ಯೆ ಹೆಚ್ಚುತ್ತಿದ್ದು, 2024 ರಲ್ಲಿ, 327,925 ಜನರು ಬೀದಿಗಳಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 25% ಹೆಚ್ಚಳವಾಗಿದೆ. 2013 ರಲ್ಲಿ ಕೇವಲ 22,922 ಜನರು ವಸತಿ ವ್ಯವಸ್ಥೆ ಇಲ್ಲದೇ ನಿರಾಶ್ರಿತರಾಗಿದ್ದರು ಎಂದು ಅಜೆನ್ಸಿಯಾ ಬ್ರೆಸಿಲ್ ವರದಿ ಮಾಡಿದೆ.