Rishab Shetty: ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್‌ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ-ರಿಷಭ್ ಶೆಟ್ಟಿಗೆ ಎಚ್ಚರಿಸಿದ ದೈವ
Rishab Shetty:ಮಂಗಳೂರಿನಲ್ಲಿ ನಡುರಾತ್ರಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡ ರಿಷಬ್ ಶೆಟ್ಟಿ, ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೂ ದೈವದ ಉತ್ಸವದಲ್ಲಿ ಡಿವೈನ್ ಸ್ಟಾರ್ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಭಾಗಿಯಾಗಿದ್ದಾರೆ. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದಲ್ಲಿ ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ತಮ್ಮ ನೋವನ್ನು ತಿಳಿಸಿದ್ದಾರೆ ಎನ್ನಲಾಗಿದೆ.


ಮಂಗಳೂರು: ಬಹುನಿರೀಕ್ಷಿತ ಕಾಂತಾರ 1(Kantara 1) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) ದೇವರ ಮೊರೆ ಹೋಗಿದ್ದಾರೆ. ಈ ವರ್ಷವೇ ರಿಲೀಸ್ ಆಗಲಿರುವ ಕಾಂತಾರಾ ಶೂಟಿಂಗ್ ಆರಂಭದಲ್ಲಿ ಭರದಿಂದ ಸಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಅದೇಕೋ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿಯೇ ರಿಷಭ್ ಶೆಟ್ಟಿ ದೈವದ ಮೊರೆಹೋಗಿದ್ದಾರೆ. ಮಂಗಳೂರಿನಲ್ಲಿ ನಡುರಾತ್ರಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡ ರಿಷಬ್ ಶೆಟ್ಟಿ, ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೂ ದೈವದ ಉತ್ಸವದಲ್ಲಿ ಡಿವೈನ್ ಸ್ಟಾರ್ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಭಾಗಿಯಾಗಿದ್ದಾರೆ. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದಲ್ಲಿ ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ತಮ್ಮ ನೋವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಇದರ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.
ಪಂಜುರ್ಲಿ ಕೋಲದಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಪತ್ನಿ ಮತ್ತು ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ಬಳಿ ರಿಷಬ್ ಕಷ್ಟ ಹೇಳಿಕೊಂಡಿದ್ದಾರೆ. ಆಗ ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್‌ಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, 5 ತಿಂಗಳ ಒಳಗೆ ನಿನಗೆ ಒಳ್ಳೆಯದು ಮಾಡುತ್ತೇನೆ ಎಂದು ಪಂಜುರ್ಲಿ ದೈವ ಅಭಯ ನೀಡಿದೆ.
'ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್‌ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ', 'ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ಹರಕೆ ಮಾಡಿಕೊ.. ಐದು ತಿಂಗಳ ಗಡುವಲ್ಲಿ ಒಳ್ಳೇದು ಮಾಡುತ್ತೇನೆ ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ಧೈರ್ಯ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara Chapter 1: ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ರಿಲೀಸ್ ಡೇಟ್ ಮುಂದೂಡಿಕೆ ಆಯ್ತಾ? ಇಲ್ಲಿದೆ ಚಿತ್ರತಂಡದ ಸ್ಪಷ್ಟನೆ
ಕಾಂತಾರ ಪ್ರಿಕ್ವೆಲ್ ಗೆ ಕಾಡುತ್ತಿದೆ ಒಂದಲ್ಲ ಒಂದು ಸಂಕಷ್ಟ
ಕಾಂತಾರ ಪ್ರೀಕ್ವೆಲ್ ಚಿತ್ರ ಸೆಟ್ಟೇರಿದ ಬೆನ್ನಲ್ಲೇ ನಾನಾ ವಿವಾದ ಅವಘಡ ಎದುರಿಸಿದೆ. ಇತ್ತಿಚೇಗೆ ಜೂನಿಯರ್ ಆರ್ಟಿಸ್ಟ್ಸ್ ಕೊಂಡೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಉಡುಪಿ ಜಿಲ್ಲೆಯ ಮುದುರಿನಿಂದ ಕೊಲ್ಲೂರಿಗೆ ವಾಪಸ್ ಆಗೋ ವೇಳೆ ಜಡ್ಕಲ್‌ನಲ್ಲಿ ಈ ಅಪಘಾತ ಸಂಭವಿಸಿತ್ತು. ಅದಕ್ಕೂ ಮೊದಲು ಪೇಮೆಂಟ್ ನೀಡದಕ್ಕೆ ಜೂನಿಯರ್ ಆರ್ಟಿಸ್ಟ್‌ಗಳ ಪ್ರತಿಭಟನೆ ನಡೆದಿತ್ತು. ಬಳಿಕ ಚಿತ್ರದಲ್ಲಿ ದೈವಾರಾಧನೆ ಬಳಕೆ ವಿರುದ್ಧ ದೈವಾರಾಧಕರ ಆಕ್ಷೇಪ ವ್ಯಕ್ತವಾಗಿತ್ತು. ಹಲವು ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆಯೂ ನಡೆದಿತ್ತು. ಇತ್ತಿಚೇಗೆ ಕಾಂತಾರ ಚಿತ್ರತಂಡದ ವಿರುದ್ಧ ಅರಣ್ಯ ಸಂರಕ್ಷಣಾ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಹಾಸನದ ಸಕಲೇಶಪುರ ತಾಲೂಕಿನ ಗವಿಗುಡ್ಡದ ಅರಣ್ಯವೊಂದರಲ್ಲಿ ಕಾಂತಾರ ಸಿನಿಮಾ ಚಿತ್ರೀಕರಣ ವೇಳೆ ಸ್ಫೋ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಹಿನ್ನೆಲೆಯಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು.