ಟ್ರಂಪ್ ಕುರಿತು ಅವಹೇಳನಕಾರಿ ಮಾತನಾಡಿದ್ದಕ್ಕೆ ಹೆತ್ತ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ!
Father Shoots Daughter in Texas: ಅಮೆರಿಕದ ಟೆಕ್ಸಾಸ್‌ನಲ್ಲಿ ರಾಜಕೀಯ ವಿಚಾರದ ವಾಗ್ವಾದ ಭೀಕರ ಅಂತ್ಯ ಕಂಡಿದೆ. ಡೊನಾಲ್ಡ್ ಟ್ರಂಪ್ ಮತ್ತು ಬಂದೂಕು ಮಾಲಿಕತ್ವದ ವಿಷಯವಾಗಿ ಉಗ್ರವಾದ ಜಗಳದ ಬಳಿಕ ತಂದೆಯೇ ತನ್ನ 23 ವರ್ಷದ ಪುತ್ರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕುಟುಂಬದಲ್ಲಿನ ತೀವ್ರ ಭಿನ್ನಾಭಿಪ್ರಾಯಗಳು ಹೇಗೆ ದುರ್ಘಟನೆಯಾಗಿ ಮಾರ್ಪಡಬಹುದು ಎಂಬುದನ್ನು ನೆನಪಿಸಿದೆ.
ಟೆಕ್ಸಾಸ್‌ನಲ್ಲಿ ತಂದೆಯಿಂದಲೇ ಪುತ್ರಿಯ ಗುಂಡಿಕ್ಕಿ ಹತ್ಯೆ -
ವಾಷಿಂಗ್ಟನ್, ಫೆ.11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿಚಾರವಾಗಿ ಪ್ರಾರಂಭವಾದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ. ಅಮೆರಿಕದ ಟೆಕ್ಸಾಸ್‌ನ (Texas) ಪ್ರಾಸ್ಪರ್‌ನಲ್ಲಿರುವ 23 ವರ್ಷದ ಯುವತಿಯನ್ನು ಆಕೆಯ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಟ್ರಂಪ್ ಮತ್ತು ಬಂದೂಕು ಮಾಲೀಕತ್ವದ ಬಗ್ಗೆ ನಡೆದ ತೀವ್ರ ವಾಗ್ವಾದದ ನಂತರ ಈ ಹತ್ಯೆ ನಡೆದಿದೆ.
ಈ ಘಟನೆ ಜನವರಿ 10ರಂದು ಸಂಭವಿಸಿದೆ. ಚೆಷೈರ್‌ನ ವಾರಿಂಗ್ಟನ್ ಮೂಲದ ಫ್ಯಾಷನ್ ಖರೀದಿದಾರರಾದ ಲೂಸಿ ಹರಿಸನ್ ತಮ್ಮ ಪ್ರಿಯಕರ ಸ್ಯಾಮ್ ಲಿಟ್ಲರ್ ಜೊತೆ ಟೆಕ್ಸಾಸ್‌ಗೆ ತೆರಳಿ, ತಮ್ಮ ತಂದೆ ಕ್ರಿಸ್ ಹರಿಸನ್ ಅವರನ್ನು ಭೇಟಿ ಮಾಡಿದ್ದರು. ಲೂಸಿ ಮತ್ತು ಕ್ರಿಸ್ ನಡುವೆ ದೊಡ್ಡ ವಾಗ್ವಾದ ನಡೆದಿದೆ ಎಂದು ಸ್ಯಾಮ್ ಚೆಷೈರ್ ಕರೋನರ್ ನ್ಯಾಯಾಲಯಕ್ಕೆ ತಿಳಿಸಿದರು.
ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ: ಶಂಕಿತ ಮಹಿಳೆ ಸೇರಿದಂತೆ 10 ಮಂದಿ ಸಾವು, 25 ಮಂದಿಗೆ ಗಾಯ
ವರದಿ ಪ್ರಕಾರ, ಲೂಸಿಯ ತಂದೆ ಗನ್ ಹೊಂದಿರುವ ಬಗ್ಗೆ ಮಾತನಾಡಿದಾಗ ಅವಳು ಆಗಾಗ ಅಸಮಾಧಾನಗೊಳ್ಳುತ್ತಿದ್ದಳು ಎಂದು ಸ್ಯಾಮ್ ಹೇಳಿದ್ದಾರೆ. ವಾದದ ವೇಳೆ, ಟ್ರಂಪ್ ಸಂಬಂಧಿತ ವಿವಾದಗಳನ್ನು ಉಲ್ಲೇಖಿಸಿ, ಲೂಸಿ ತನ್ನ ತಂದೆಯನ್ನು ಪ್ರಶ್ನಿಸಿ, ಆ ಪರಿಸ್ಥಿತಿಯಲ್ಲಿ ಇದ್ದ ಹುಡುಗಿ ನಾನು ಆಗಿದ್ದರೆ ಮತ್ತು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ನಿಮಗೆ ಹೇಗನಿಸುತ್ತಿತ್ತು? ಎಂದು ಕೇಳಿದ್ದಾಳೆ.
ಅದಕ್ಕೆ ಅವಳ ತಂದೆ, ತನ್ನೊಂದಿಗೆ ವಾಸಿಸುವ ಇನ್ನೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಅದು ತಮಗೆ ಅಷ್ಟು ಹೆಚ್ಚು ನೋವಾಗುವುದಿಲ್ಲ ಎಂದು ಉತ್ತರಿಸಿದರೆಂದು ವರದಿಯಾಗಿದೆ. ಈ ಪ್ರತಿಕ್ರಿಯೆಯಿಂದ ಲೂಸಿ ತುಂಬಾ ಮನನೊಂದು, ಅವಳು ತುಂಬಾ ಬೇಸರಗೊಂಡು ಮೇಲ್ಮಹಡಿಗೆ ಓಡಿಹೋದಳು ಎಂದು ಸ್ಯಾಮ್ ಹೇಳಿದ್ದಾರೆ.
ವಿಚಾರಣೆಯಲ್ಲಿ ಲೂಸಿ ತನ್ನ ತಂದೆ ಬಂದೂಕು ಹೊಂದಿರುವುದರ ಬಗ್ಗೆ ಅನಾನುಕೂಲತೆಯನ್ನು ಅನುಭವಿಸುತ್ತಿದ್ದಳು ಎಂದು ತಿಳಿದುಬಂದಿದೆ. ಬಂದೂಕುಗಳ ಬಗ್ಗೆ ಮಾತನಾಡುವಾಗ, ವಿಶೇಷವಾಗಿ ಆಕೆಯ ತಂದೆ ಅದನ್ನು ಹೊಂದುವ ಹಕ್ಕನ್ನು ಸಮರ್ಥಿಸಿಕೊಂಡಾಗ, ಅವಳು ಆಗಾಗ ದುಃಖಿತಳಾಗುತ್ತಿದ್ದಳು ಎಂದು ಸ್ಯಾಮ್ ವಿವರಿಸಿದರು.
ಕೆನಡಾದಲ್ಲಿ ನೆಲಮಂಗಲ ಮೂಲದ ವ್ಯಕ್ತಿಯ ಮೇಲೆ ಗುಂಡಿನ ದಾಳಿ; ಸ್ಥಳದಲ್ಲಿಯೇ ಮೃತಪಟ್ಟ ಕನ್ನಡಿಗ
ಲೂಸಿಯ ತಾಯಿ ಜೇನ್ ಕೋಟ್ಸ್ ಅವರು, ಅವಳು ಬಹಳ ಕಾಳಜಿ ಹೊಂದಿದ್ದಳು. ಅವಳು ಎಲ್ಲಾ ವಿಷಯಗಳ ಬಗ್ಗೆ ಉತ್ಸಾಹದಿಂದಿರುತ್ತಿದ್ದಳು. ಅವಳಿಗೆ ಮಹತ್ವವಾದ ವಿಷಯಗಳ ಬಗ್ಗೆ ಚರ್ಚೆ ಮಾಡುವುದೆಂದರೆ ತುಂಬಾ ಇಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.
ಶೂಟಿಂಗ್ ದಿನದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಅಡುಗೆಮನೆಯಲ್ಲಿದ್ದಳು. ಆಗ ಅವಳ ತಂದೆ ಅವಳ ಕೈ ಹಿಡಿದು ತನ್ನ ಮಲಗುವ ಕೋಣೆಗೆ ಕರೆದೊಯ್ದರು ಎಂದು ಸ್ಯಾಮ್ ಹೇಳಿದನು. ಸುಮಾರು 15 ಸೆಕೆಂಡುಗಳ ನಂತರ, ಸ್ಯಾಮ್ ಜೋರಾಗಿ ಬಡಿಯುವ ಶಬ್ಧ ಕೇಳಿಸಿತು ಎಂದು ಹೇಳಿದನು. ಸ್ಯಾಮ್ ತಕ್ಷಣ ಮಲಗುವ ಕೋಣೆಯ ಕಡೆಗೆ ಓಡಿದೆ ಎಂದು ಹೇಳಿದರು. ಅವನು ಕೋಣೆಗೆ ಪ್ರವೇಶಿಸಿದಾಗ, ಸ್ನಾನಗೃಹದ ಪ್ರವೇಶದ್ವಾರದ ಬಳಿ ಲೂಸಿ ನೆಲದ ಮೇಲೆ ಮಲಗಿರುವುದನ್ನು ನೋಡಿದ್ದಾಗಿ ಹೇಳಿದನು.