Aghori Baba Chanchal Nath: ಅಘೋರಿ ಬಾಬಾ ಚಂಚಲ್‌ನಾಥ್‌ ರೀಲ್‌ಗಳು ವೈರಲ್‌, ಇವರು ಸಾಧುವೋ, ಸಾಧ್ವಿಯೋ?

ಇವರು ಹುಟ್ಟಿದ್ದು ಹೆಣ್ಣಾಗಿ. ಬಂಗಾಳದಲ್ಲಿನ ಒಂದು ಗ್ರಾಮದಲ್ಲಿ ಇವರ ಜನನ ಆಯಿತು. ಇವರ ಮನೆಯಲ್ಲಿ ಶುದ್ಧವಾದ ಅಧ್ಯಾತ್ಮಿಕ ವಾತಾವರಣ ಇತ್ತು. ಹೀಗಾಗಿ ಬಾಲ್ಯದಿಂದಲೇ ಇವರ ಸುತ್ತ ಆಧ್ಯಾತ್ಮಿಕ ಪ್ರಭಾವಳಿ ಇತ್ತು.

aghori baba chanchal nath
Profile ಹರೀಶ್‌ ಕೇರ Jan 23, 2025 8:07 PM

ಪ್ರಯಾಗ್‌ರಾಜ್‌ನಲ್ಲಿ (Prayagraj) ಮಹಾ ಕುಂಭ ಮೇಳ (Maha Kumbh Mela) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಲ್ಲಿಗೆ ಬಂದಿರುವ ಅನೇಕ ಬಾಬಾಗಳು ಜಗತ್ತಿನ ಗಮನವನ್ನು ಸೆಳೆಯುತ್ತಿದ್ದಾರೆ. ಅನೇಕ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳ ಮೂಲಕ, ವೈರಲ್‌ ವೀಡಿಯಾಗಳ ಮೂಲಕ, ರೀಲ್‌ಗಳ (Reels) ಮೂಲಕ ಇವರು ಪಾಪ್ಯುಲರ್‌ ಆಗುತ್ತಿದ್ದಾರೆ. ಹಾಗೆ ಗಮನ ಸೆಳೀತಾ ಇರುವವರಲ್ಲಿ ಒಬ್ಬರು ಅಘೋರಿ ಬಾಬಾ ಚಂಚಲ್‌ನಾಥ್‌ (Aghori Baba Chanchal Nath). ಯಾರಿವರು ಬಾಬಾ ಚಂಚಲ್‌ನಾಥ್? ಇವರ ಪಂಥ ಯಾವುದು? ಎಲ್ಲಿರ್ತಾರೆ? ಇವೆಲ್ಲದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಅಘೋರಿ ಬಾಬಾ ಚಂಚಲ್‌ನಾಥ್‌ ಅವರನ್ನು ನೀವು ಸಾಧು ಅಂತಾದ್ರೂ ಹೇಳಬಹುದು, ಸಾಧ್ವಿ ಅಂತಾನೂ ಹೇಳಬಹುದು. ಯಾಕೆಂದರೆ ಇವರು ಟ್ರಾನ್ಸ್‌ಜೆಂಡರ್‌ ಸಾಧು. ಇವರು ಹುಟ್ಟಿದ್ದು ಹೆಣ್ಣಾಗಿ. ಬಂಗಾಳದಲ್ಲಿನ ಒಂದು ಗ್ರಾಮದಲ್ಲಿ ಇವರ ಜನನ ಆಗುತ್ತೆ. ಇವರ ಮನೆಯಲ್ಲಿ ಶುದ್ಧವಾದ ಅಧ್ಯಾತ್ಮಿಕ ವಾತಾವರಣ ಇರುತ್ತೆ. ಹೀಗಾಗಿ ಬಾಲ್ಯದಿಂದಲೇ ಇವರ ಸುತ್ತ ಆಧ್ಯಾತ್ಮಿಕ ಪ್ರಭಾವಳಿ ಇತ್ತು. ಸಾಧು ಸಂತರು ಇವರ ಮನೆಗೆ ಭೇಟಿ ನೀಡುತ್ತಿದ್ದರು. ಇದೆಲ್ಲದರಿಂದಾಗಿ ಚಂಚಲ್‌ನಾಥ್‌ಗೆ ಸಂಸಾರಕ್ಕಿಂತಲೂ ಸನ್ಯಾಸದ ಕಡೆಗೇ ಹೆಚ್ಚು ಆಸಕ್ತಿ ಇತ್ತು.



ಇವರ ಮನೆತನಕ್ಕೆ ಒಬ್ಬರು ನಾಥಪಂಥದ ಗುರು ಇದ್ದರು. ಸಂತ ಗೋರಖನಾಥರ ಪಂಥದವರಾದ ಅವರನ್ನು ಇವರ ಫ್ಯಾಮಿಲಿಯವರು ಕುಲಗುರು ಅಂತ ಕರೀತಾ ಇದ್ರು. ಈ ಕುಲಗುರು ಇವರ ಮನೆಗೆ ಆಗಾಗ ಭೇಟಿ ನೀಡ್ತಾ ಇದ್ದರು. ಈ ಬಾಲಕಿಯಲ್ಲಿ ಇದ್ದ ಆಧ್ಯಾತ್ಮದ ಆಸಕ್ತಿಯನ್ನು ಗಮನಿಸಿದ ಆ ನಾಥಗುರು, ಈಕೆಯನ್ನು ನಮ್ಮ ನಾಥಪಂಥಕ್ಕೆ ದಾನ ಕೊಡಿ ಅಂತ ಬಾಲಕಿಯ ಅಪ್ಪ ಅಮ್ಮನ ಬಳಿ ಕೇಳಿದರು. ಆರಂಭದಲ್ಲಿ ಇದಕ್ಕೆ ಒಪ್ಪದ ಹೆತ್ತವರು, ನಂತರ ಚಂಚಲ್‌ನಾಥ್‌ ಅವರಲ್ಲಿಯೇ ಇದ್ದ ವೈರಾಗ್ಯವನ್ನು ಗಮನಿಸಿ ನಾಥಗುರುಗಳ ಆಶ್ರಮಕ್ಕೆ ಒಪ್ಪಿಸಲು ಮನಸ್ಸು ಮಾಡಿದರು. ಹೀಗೆ ಚಂಚಲ್‌ನಾಥ್‌ ನಾಥಪಂಥ ಸೇರಿ ಸನ್ಯಾಸಿ ಆದರು. ನೆನಪಿಡಿ, ಇದೆಲ್ಲಾ ಆದದ್ದು ಅವರು ಏಳು ವರ್ಷದ ಬಾಲಕಿ ಆಗಿದ್ದಾಗ.

ಅಲ್ಲಿಂದ ಬಳಿಕ ಚಂಚಲ್‌ನಾಥ್‌, ನಾಥ ಸಂಪ್ರದಾಯದ ಅನೇಕ ಆಧ್ಯಾತ್ಮಿಕ ಜಪ ತಪ ಧ್ಯಾನ ಯೋಗ ಮತ್ತು ತಂತ್ರದ ಉಪಾಸನೆಗಳಲ್ಲಿ ತೊಡಗಿಕೊಂಡಳು. ಹಲವಾರು ಗುರುಗಳು ಆಕೆಗೆ ತಂತ್ರೋಪಾಸನೆಯ ಮಾರ್ಗದರ್ಶನ ನೀಡಿದರು. ಇದೇ ವೇಳೆಗೆ ಚಂಚಲ್‌ನಾಥ್‌ಗೆ ಅಘೋರಿಗಳ ಸಂಪರ್ಕ ಕೂಡ ಸಿಕ್ಕಿತು. ಅಘೋರಿಗಳ ಜೊತೆಗೆ ನೇಪಾಳ, ಅಸ್ಸಾಂ ಮೊದಲಾದ ಕಡೆಗಳಲ್ಲಿ, ಅಘೋರಿಗಳ ಘೋರ ತಂತ್ರೋಪಾಸನೆಯ ಸ್ಮಶಾನಗಳಲ್ಲಿ ಓಡಾಡಿದರು. ರುದ್ರಭೂಮಿಗಳಲ್ಲಿ ತಂತ್ರದ ಸಾಧನೆಗಳಾದ ಪಂಚಮಗಳ ಉಪಾಸನೆ, ಶವೋಪಾಸನೆ, ಕಾಳಿಕಾಮಾತೆಯ ಅವಾಹನೆ ಹಾಗೂ ಪೂಜೆ, ರುಂಡಮಾಲಿನೀ ಪೂಜೆ, ರುದ್ರಯಾಮಳ ತಂತ್ರಗಳ ಅನುಷ್ಠಾನ ಮೊದಲಾವುಗಳಲ್ಲಿ ತೊಡಗಿಕೊಂಡು ಸಾಧನೆಯ ಸಿದ್ಧಿ ಅನುಭವಿಸಿದರು.

ಹರ್ಯಾಣ ರಾಜ್ಯದ ಕರ್ನಾಲ್‌ ಜಿಲ್ಲೆಯ ರಾಯ್‌ಪುರ್‌ನಲ್ಲಿ ಈಗ ಒಂದು ಆಶ್ರಮ ಸ್ಥಾಪಿಸಿಕೊಂಡಿದ್ದಾರೆ. ಇಲ್ಲಿ ಅವರು ನಿತ್ಯವೂ ಉಪಾಸನೆ ಮಾಡುವ ಕಾಳಿಕಾ ಮಾತೆಯ ಮಂದಿರ ಇದೆ. ಜೊತೆಗೆ ಗುರು ಗೋರಖನಾಥರ ಪುಟ್ಟ ಮಂದಿರವಿದೆ. ಕಾಲಭೈರವ ಮೊದಲಾದ ಇತರ ದೇವದೇವತೆಗಳ ಮೂರ್ತಿಗಳೆಲ್ಲ ಇವೆ. ಇವರ ಶಿಷ್ಯರು, ಉಪಾಸಕರು ಇಲ್ಲಿಗೆ ಭೇಟಿ ಕೊಡ್ತಾ ಇರ್ತಾರೆ. ಇತ್ತೀಚೆಗೆ ರೀಲ್ಸ್‌ಗಳಿಂದಾಗಿ ಚಂಚಲ್‌ನಾಥ್‌ಜೀ ಅವರ ಜನಪ್ರಿಯತೆ ಹೆಚ್ಚಾಗಿದ್ದು, ಆಗಮಿಸುವ ಭಕ್ತಾದಿಗಳ ಸಂಖ್ಯೆ ಇನ್ನಷ್ಟು ಜಾಸ್ತಿಯಾಗಿದೆ ಎಂದು ಹೇಳಲಾಗಿದೆ. ಈ ಆಶ್ರಮದಲ್ಲಿ ಉಪಾಸನೆ ಪಡೆಯುವ ಕಾಳಿಕಾಮಾತೆಯ ಮೂರ್ತಿಯ ಸ್ವರೂಪ ದಿನಕ್ಕೆ ಮೂರು ಸಲ ಬದಲಾಗುತ್ತದೆ ಎಂದು ಇಲ್ಲಿನ ಭಕ್ತರು ದಂತಕತೆಗಳನ್ನು ಹೇಳ್ತಾರೆ. ಹಾಗೇ ಬಾಬಾ ಚಂಚಲ್‌ನಾಥ್‌ ಕೆಲವು ಚಮತ್ಕಾರಗಳನ್ನು ಕೂಡ ಮಾಡುತ್ತಾರೆ. ನೆಲದಲ್ಲಿಟ್ಟ ನಿಂಬೆಹಣ್ಣು ತನ್ನಷ್ಟಕ್ಕೇ ಮೇಲೆದ್ದು ಗಾಳಿಯಲ್ಲಿ ಚಲಿಸುವಂತೆ ಮಾಡುವ ಚಮತ್ಕಾರವನ್ನೂ ಇವರು ತೋರಿಸ್ತಾರೆ.

ಇನ್ನೂ ಯುವ ಪ್ರಾಯದಲ್ಲಿರುವ ಚಂಚಲ್‌ನಾಥ್‌ಜೀ ಅವರಿಗೆ ಯವ್ವನದಲ್ಲಿ ಕಾಡಬಹುದಾದ ಯಾವುದೇ ದೈಹಿಕ ವಾಂಛೆಗಳು ಇಲ್ವಾ ಹಾಗಾದರೆ ಅಂತ ನೀವು ಕೇಳಬಹುದು. ಆದರೆ ಅಘೋರಿಯಾಗುವ ಹಂತದಲ್ಲಿಯೇ ಅಂಥ ಎಲ್ಲಾ ವ್ಯಾಮೋಹ, ವಾಂಛೆಗಳಿಂದ ಕಳಚಿಕೊಂಡಿರುವ ಈ ಬಾಬಾ, ನಿತ್ಯ ನಿರಂಜನವಾಗಿರುವ ಆತ್ಮಸತ್ಯದಲ್ಲಿ ಲೀನವಾಗುವ ಬಗ್ಗೆ ಮಾತಾಡ್ತಾರೆ ಹೊರತು ಇತರ ವಿಷಯಗಳ ಬಗ್ಗೆ ಮಾತಾಡಲ್ಲ. ಸದ್ಯ ಭಾರತದಾದ್ಯಂತ ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡುತ್ತಾ ಓಡಾಡ್ತಿರುವ ಈ ಬಾಬಾರನ್ನು ನೀವು ಯಾವುದಾದರೂ ಶಕ್ತಿಪೀಠದಲ್ಲಿ ಭೇಟಿಯಾದರೂ ಆಶ್ಚರ್ಯವಿಲ್ಲ!

ಇದನ್ನೂ ಓದಿ: Aghori: ಸ್ಮಶಾನದಲ್ಲೇ ವಾಸ, ಮೃತದೇಹಗಳೊಂದಿಗೆ ಸಹವಾಸ; ಇದು ಅಘೋರಿಗಳ ನಿಗೂಢ ಜಗತ್ತು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು