#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ

ಪಹಣಿಯ ಕಲಂ ೧೧ರಲ್ಲಿ ಈ ಬಗ್ಗೆ ನಿಗಮವು ನಮೂದು ಮಾಡಬೇಕು. ಆದರೆ ಭೂ ಒಡೆತನ ಯೋಜನೆ ಯ ಶೇ ೯೦ರಷ್ಟು ಫಲಾನುಭವಿಗಳ ಪಹಣಿಯಲ್ಲಿ ಈ ಷರಾ ನಮೂದಾಗಿಲ್ಲ ಎಂಬುದು ಪರಿಶೀಲನೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ

ಲೋಕಾಯುಕ್ತ ಎಸ್.ಪಿ ಆಂಟೊನಿಜಾನ್ ನೇತೃತ್ವದ ತಂಡವು ಕಡತಗಳ ಪರಿಶೀಲನೆ

ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಜಾಲಾಡಿದ್ದ ಲೋಕಾಯುಕ್ತ ಎಸ್.ಪಿ ಆಂಟೊನಿಜಾನ್ ನೇತೃತ್ವದ ತಂಡವು ಕಡತಗಳ ಪರಿಶೀಲನೆಯನ್ನು ಶುಕ್ರವಾರವೂ ಮುಂದುವರಿಸಿದ್ದು, ಕಡತ ಪರಿಶೀಲನೆಯ ವೇಳೆ ಅಕ್ರಮಗಳು ಮತ್ತು ನ್ಯೂನತೆಗಳು ಬಯಲಾಗುತ್ತಿದೆ ಎಂದು ತಿಳಿದು ಬಂದಿದೆ

Profile Ashok Nayak Feb 8, 2025 11:08 PM

ಚಿಕ್ಕಬಳ್ಳಾಪುರ : ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸಿ ಕಡತ ಗಳನ್ನು ಜಾಲಾಡಿದ್ದ ಲೋಕಾಯುಕ್ತ ಎಸ್.ಪಿ ಆಂಟೊ ನಿಜಾನ್ ನೇತೃತ್ವದ ತಂಡವು ಕಡತಗಳ ಪರಿಶೀಲನೆಯನ್ನು ಶುಕ್ರವಾರವೂ ಮುಂದುವರಿಸಿದ್ದು, ಕಡತ ಪರಿಶೀಲನೆಯ ವೇಳೆ ಅಕ್ರಮಗಳು ಮತ್ತು ನ್ಯೂನತೆಗಳು ಬಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಡಿ ೨೦೧೨–೧೩ನೇ ಸಾಲಿನಿಂದ 310 ಫಲಾನುಭವಿಗಳಿಗೆ ಜಮೀನು ಮಂಜೂರಾಗಿದೆ.

ಈ ಜಮೀನನ್ನು ಪ.ಜಾ ಮತ್ತು ಪಂಗಡದ ಫಲಾನುಭವಿಗಳು ಖರೀದಿ ಸಲು ಸರ್ಕಾರವು ಶೇ.50 ರಷ್ಟು ಹಣ ನೀಡುತ್ತದೆ. ನಿಗಮವು ಶೇ.50ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಭೂ ಒಡೆತನ ಯೋಜನೆಯಡಿ ಪಡೆದ ಜಮೀನನ್ನು ಫಲಾನುಭವಿ ಜೀವನ ಪರ್ಯಂತ ಪರಭಾರೆ ಮಾಡಬಾರದು.

ಇದನ್ನೂ ಓದಿ: Chikkaballapur News: ನೂತನ ಬಿಜೆಪಿ ಜಿಲ್ಲಾಧ್ಯಕ್ಷ 2 ವಾರದಲ್ಲಿ ಬದಲಾಗಲಿದ್ದಾರೆ : ಹೆಚ್.ಆರ್.ಸಂದೀಪ್‌ರೆಡ್ಡಿ ಭವಿಷ್ಯ

ಪಹಣಿಯ ಕಲಂ ೧೧ರಲ್ಲಿ ಈ ಬಗ್ಗೆ ನಿಗಮವು ನಮೂದು ಮಾಡಬೇಕು. ಆದರೆ ಭೂ ಒಡೆತನ ಯೋಜನೆಯ ಶೇ ೯೦ರಷ್ಟು ಫಲಾನುಭವಿಗಳ ಪಹಣಿಯಲ್ಲಿ ಈ ಷರಾ ನಮೂದಾಗಿಲ್ಲ ಎಂಬುದು ಪರಿಶೀಲನೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇನ್ನು ಪ.ಜಾ, ಪ.ಪಂ ಫಲಾನುಭವಿಗಳು ಭೂ ಒಡೆತನ ಯೋಜನೆಯಡಿ ಜಮೀನು ಪಡೆದಿರುವ ಕೆಲ ಕಡತಗಳು ನಾಪತ್ತೆ ಆಗಿವೆ. ಎಷ್ಟು ಕಡತ ನಾಪತ್ತೆಯಾಗಿವೆ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಪಹಣಿಯ ಕಲಂ ೧೧ರ ಹಕ್ಕು ಮತ್ತು ಋಣಗಳಲ್ಲಿ ಈ ಜಮೀನು ಪರಭಾರೆ ಮಾಡಬಾರದು ಎನ್ನು ವ ಷರಾವನ್ನು ಬಹುತೇಕ ಕಡತಗಳಲ್ಲಿ ನಮೂದಿಸಿಲ್ಲ ಎಂಬುದು ತಿಳಿದು ಬಂದಿದೆ.

ಈ ಜಮೀನು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಆಧಾರವಾಗಿರುತ್ತದೆ ಎಂದು ನಮೂದಿಸಿರಬೇಕು. ಇದರ ಪೂರ್ಣ ಜವಾಬ್ದಾರಿ ನಿಗಮದ ವ್ಯವಸ್ಥಾಪಕರದ್ದು. ಆದರೆ ಶೇ.90ರಷ್ಟು ಕಡತಗಳಲ್ಲಿ ಷರಾ ಇಲ್ಲ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ಷರಾ ನಮೂದಾಗದ ಕಾರಣ ಕೆಲವು ಜಮೀನುಗಳನ್ನು ಫಲಾನುಭವಿಗಳು ಮಾರಾಟ ಸಹ ಮಾಡಿದ್ದಾರೆ ಎನ್ನುವುದು ಕಡತಗಳ ಪರಿಶೀಲನೆಯ ವೇಳೆ ಕಂಡು ಬಂದಿದೆ.

ನಿಗಮದಲ್ಲಿ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಕೊಳವೆ ಬಾವಿಗಳನ್ನು ಕೊರೆ ಯುವ ವಿಚಾರದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎನ್ನುವ ಆರೋಪಗಳಿವೆ. ಈ ಬಗ್ಗೆ ಕೆಲವು ಫಲಾನುಭವಿಗಳು ಲೋಕಾಯುಕ್ತಕ್ಕೆ ದೂರು ಸಹ ಸಲ್ಲಿಸಿದ್ದಾರೆ. ೨೦೧೬-೧೭ರ ಕೆಲ ಫಲಾನುಭವಿ ಗಳಿಗೆ ಇಂದಿಗೂ ಕೊಳವೆ ಬಾವಿ ಕೊರೆದಿಲ್ಲ. ಅದೇ ೨೦೨೧–೨೨ನೇ ಸಾಲಿನ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಲಾಗಿದೆ ಎಂದು ತಿಳಿದುಬಂದಿದೆ.

ನಿಗಮಗಳು ಪರಿಶಿಷ್ಟರಿಗೆ ನೇರ ಸಾಲ ಸೌಲಭ್ಯ  ಸೇರಿದಂತೆ ಇನ್ನತರೆ ಯೋಜನೆಗಳಲ್ಲಿಯೂ ಲೋಪ ಗಳಾಗಿರುವ ಕುರಿತು ಕೆಲವು ಫಲಾನುಭವಿಗಳು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆಯೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಸಂಜೆಯ ವರೆಗೂ ಕಡತಗಳನ್ನು ಲೋಕಾಯುಕ್ತ ಸಿಬ್ಬಂದಿ ಪರಿಶೀಲಿಸಿದ್ದು, ನಿಗಮದ ಕಚೇರಿ ಪ್ರವೇಶ ದ್ವಾರ ದಲ್ಲಿಯೇ ಪರಿಶೀಲಿಸಿದ ಕಡತಗಳನ್ನು ಚೀಲಗಳಲ್ಲಿ ತುಂಬಿಡಲಾಗಿತ್ತು.