ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore Traffic Advisory: ಇಂದು ರಂಜಾನ್‌ ಪ್ರಯುಕ್ತ ಸಂಚಾರ ಬದಲಾವಣೆ; ಚಾಮರಾಜಪೇಟೆ, ಮೈಸೂರು ರಸ್ತೆಗಳಲ್ಲಿ ಸಂಚರಿಸುವವರು ಗಮನಿಸಿ

ಮಾರ್ಚ್‌ 31ರಂದು ರಂಜಾನ್ ಹಬ್ಬದ ಪ್ರಯುಕ್ತ ಹಲವೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದರಿಂದ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಸಂಚಾರ ವ್ಯವಸ್ಥೆ ಬದಲಿಸಲಾಗುತ್ತಿದೆ. ಹಲವೆಡೆ ಪರ್ಯಾಯ ರಸ್ತೆ ವ್ಯವಸ್ಥೆ ಸೂಚಿಸಿ ಟ್ರಾಫಿಕ್‌ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಇಂದು ರಂಜಾನ್‌ ಪ್ರಯುಕ್ತ ಸಂಚಾರ ಬದಲಾವಣೆ; ಬೆಂಗಳೂರಿಗರು ಗಮನಿಸಿ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 31, 2025 9:43 AM

ಬೆಂಗಳೂರು: ರಂಜಾನ್ (Ramadan) ಹಬ್ಬದ ಪ್ರಯುಕ್ತ ಬೆಂಗಳೂರಿನ (Bengaluru) ಹಲವೆಡೆ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕೆಲವು ಕಡೆಗಳಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು (Bangalore Traffic Police) ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಗಳಲ್ಲಿ ಕೂಡ ಸಂಚಾರ ಬದಲಾವಣೆ ಮಾಡಲಾಗಿದೆ.

ಮಾರ್ಚ್‌ 31ರಂದು ರಂಜಾನ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆ ಸಂಚಾರ ಪೊಲೀಸ್ ಸರಹದ್ದಿನ ಬಿಬಿ ಜಂಕ್ಷನ್ ಹತ್ತಿರದ ಮಸೀದಿ ಹಾಗೂ ಬಿಬಿಎಂಪಿ ಆಟದ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಭಾಗವಹಿಸುತ್ತಿರುವುದರಿಂದ ಈ ಕೆಳಕಂಡ ರಸ್ತೆಯ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಬಳಸಲು ಕೋರಿದೆ ಎಂದು ಚಾಮರಾಜಪೇಟೆ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ವಿವರ ತಿಳಿಸಿದ್ದಾರೆ.

ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಮೈಸೂರು ರಸ್ತೆಯ ಪೋಲ್‌ಗೇಟ್ ಜಂಕ್ಷನ್​ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಟೌನ್‌ ಹಾಲ್‌ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮೈಸೂರು ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ರಾಣಾ ಸರಹದ್ದಿನ ಕಿತ್ತೋ ಜಂಕ್ಷನ್‌ನಲ್ಲಿ ಎಡತಿರುವು ಪಡೆದುಕೊಂಡು ವಿಜಯನಗರ ಮೂಲಕ ಸಾಗಬಹುದು.

ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಫ್ಲೈಓವರ್ ಮೇಲ್ಬಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್‌ಗೇಟ್ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಫ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ಭಾರಿ ವಾಹನಗಳು ವೆಟರ್ನರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗೂಡ್‌ಶೆಡ್ ರಸ್ತೆ ಮೂಲಕ ಮತ್ತು ಲಘುವಾಹನಗಳು ಸಿರ್ಸಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಜೆ.ಜೆ ನಗರ-ಟ್ಯಾಂಕ್‌ ಬಂಡ್ ರಸ್ತೆ ಬಿನ್ನಿಮಿಲ್ ಜಂಕ್ಷನ್- ಹುಣಸೇಮರ ಮೂಲಕ ಸಾಗುವುದು.

ಬಸವನಗುಡಿ ಹಾಗೂ ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಂತಹ ವಾಹನಗಳು ಚಾಮರಾಜಪೇಟೆ 1 ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆ, ಸಿರ್ಸಿ ಸರ್ಕಲ್, ಬಿನ್ನಿಮಿಲ್ ರಸ್ತೆಯ ಮೂಲಕ ಸಾಗುವುದು.

ಇವಿಷ್ಟೇ ಅಲ್ಲದೆ, ಇನ್ನೂ ಅನೇಕ ರಸ್ತೆಗಳಲ್ಲಿ ಸಂಚಾರ ನಿಷೇಧ, ಸಂಚಾರ ಬದಲಾವಣೆ ಮಾಡಲಾಗಿದೆ. ಆ ಕುರಿತು ಬೆಂಗಳೂರು ಸಂಚಾರ ಪೊಲೀಸರು ನೀಡಿರುವ ವಿವರವಾದ ಮಾಹಿತಿ ಕೆಳಗಡೆ ನೀಡಿರುವ ಲಿಂಕ್​ನಲ್ಲಿದೆ.

ಇದನ್ನೂ ಓದಿ: ರಸ್ತೆ ತೆರಿಗೆ ಕಟ್ಟಲು ವರ್ಷದವರೆಗೆ ಅವಕಾಶವಿದ್ದರೂ ದಂಡಾಸ್ತ್ರ ಪ್ರಯೋಗ