ರಸ್ತೆ ತೆರಿಗೆ ಕಟ್ಟಲು ವರ್ಷದವರೆಗೆ ಅವಕಾಶವಿದ್ದರೂ ದಂಡಾಸ್ತ್ರ ಪ್ರಯೋಗ
ಬೆಂಗಳೂರಿನಲ್ಲಿ ವಾಸಿಸುವ ಅನೇಕರು ಪಾಂಡಿಚೇರಿಯಲ್ಲಿ ವಾಹನ ಖರೀದಿಸುತ್ತಾರೆ. ಬಳಿಕ ವರ್ಷದೊಳಗೆ ಕರ್ನಾಟಕ ರಸ್ತೆ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಆರ್‌ಟಿಒ ಅಧಿಕಾರಿಗಳು, ವರ್ಷದ ಅವಧಿ ಮೀರದಿರುವ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಾಗೂ ಆ ವಾಹನಗಳಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದು ಕಾರ್ ಮಾಲೀಕರು ಆರೋಪ ಮಾಡು ತ್ತಿದ್ದಾರೆ


ರಂಜಿತ್ ಎಚ್.ಅಶ್ವತ್ಥ
ನೆರೆ ರಾಜ್ಯದ ಪಾಸಿಂಗ್ ಕಾರುಗಳಿಗೆ ವಿಧಿಸುವ ದಂಡದ ಕ್ರಮವೇ ಸರಿಯಲ್ಲ
ಬೆಂಗಳೂರು: ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯದಲ್ಲಿ ಖರೀದಿಸಿರುವ ವಾಹನ ವನ್ನು ಮತ್ತೊಂದು ರಾಜ್ಯದಲ್ಲಿ ಒಂದು ವರ್ಷದ ಅವಧಿಯವರೆಗೆ ಯಾವುದೇ ರಸ್ತೆ ತೆರಿಗೆಯನ್ನು ಪಾವತಿಸದೇ ಓಡಿಸಲು ಅವಕಾಶವಿದ್ದರೂ ಕರ್ನಾಟಕದ ಆರ್‌ಟಿಒ ಅಧಿಕಾರಿ ಗಳು ಮಾತ್ರ ನಿಯಮ ಮೀರಿ ಹೊರರಾಜ್ಯದ ನೋಂದಣಿ ಕಾರುಗಳನ್ನು ಟಾರ್ಗೆಟ್ ಮಾಡಿ ದಂಡ ವಸೂಲಿ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ವಾಸಿಸುತ್ತಿದ್ದರೂ ಹೊರರಾಜ್ಯದಲ್ಲಿ ವಾಹನವನ್ನು ಖರೀದಿಸಿ, ಅಲ್ಲಿಯ ನೋಂದಣಿಯೊಂದಿಗೆ ಕರ್ನಾಟಕದಲ್ಲಿ ಓಡಾಡಲು ಅವಕಾಶವಿದೆ. ಆದರೆ ಖರೀದಿಸಿದ ಒಂದು ವರ್ಷದೊಳಗೆ ಕರ್ನಾಟಕ ರಾಜ್ಯ ರಸ್ತೆ ತೆರಿಗೆಯನ್ನು ಪಾವತಿಸಬೇಕು ಎನ್ನುವ ನಿಯಮವಿದೆ. ಆದರೆ ಈ ನಿಯಮವನ್ನು ಪರಿಗಣಿಸದೇ, ರಾಜಧಾನಿ ಬೆಂಗಳೂರು ಸೇರಿ ದಂತೆ ಹಲವು ನಗರಗಳಲ್ಲಿ ಹೊರರಾಜ್ಯದ ನೋಂದಣಿಯ ‘ಐಷಾರಾಮಿ’ ಕಾರುಗಳನ್ನು ಟಾರ್ಗೆಟ್ ಮಾಡಿ ದಂಡ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ವಾಸಿಸುವ ಅನೇಕರು ಪಾಂಡಿಚೇರಿಯಲ್ಲಿ ವಾಹನ ಖರೀದಿಸುತ್ತಾರೆ. ಬಳಿಕ ವರ್ಷದೊಳಗೆ ಕರ್ನಾಟಕ ರಸ್ತೆ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಆರ್‌ಟಿಒ ಅಧಿಕಾರಿಗಳು, ವರ್ಷದ ಅವಧಿ ಮೀರದಿರುವ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಾಗೂ ಆ ವಾಹನಗಳಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದು ಕಾರ್ ಮಾಲೀಕರು ಆರೋಪ ಮಾಡುತ್ತಿದ್ದಾರೆ. ಇದರೊಂದಿಗೆ ಯಾವುದೇ ಅಪರಾಧವನ್ನು ಸಾಬೀತುಪಡಿಸುವ ಜವಾಬ್ದಾರಿ ಸಂಬಂಧಿಸಿದ ಇಲಾಖೆಯದ್ದಾಗಿರುತ್ತದೆ. ಆದರೆ ಈ ಪ್ರಕರಣಗಳಲ್ಲಿ ಆರ್ ಟಿಒ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ವಾಹನ ಸವಾರರು ಎಷ್ಟು ವರ್ಷಗಳಿಂದ ಕರ್ನಾಟಕದಲ್ಲಿ ಕಾರು ಓಡಿಸುತ್ತಿದ್ದಾರೆ ಎನ್ನುವ ದಾಖಲೆ ಯನ್ನು ಒದಗಿಸದೇ, ದಂಡ ವಿಧಿಸುತ್ತಿರುವ ಆರೋಪಗಳು ಕೇಳಿ ಬಂದಿವೆ.
ಅಧಿಕಾರಿಗಳಿಂದ ಸ್ಪಷ್ಟ ನಿಯಮ ಉಲ್ಲಂಘನೆ: ಕೇಂದ್ರಿಯ ಮೋಟಾರು ವಾಹನ ಕಾಯಿದೆ ಹಾಗೂ ಮೋಟಾರು ತೆರಿಗೆ ಸಂಗ್ರಹ ಕಾನೂನಿನಲ್ಲಿ ಯಾವುದೇ ರಾಜ್ಯದಿಂದ ವಾಹನ ಖರೀದಿಸಿ, ಕರ್ನಾಟಕದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಓಡಿಸಿದರೆ ಕರ್ನಾಟಕ ರಸ್ತೆ ತೆರಿಗೆಯನ್ನು ಪಾವತಿಸಬೇಕು ಎಂದಿದೆ. ಇದರೊಂದಿಗೆ ಹೊರ ರಾಜ್ಯದಲ್ಲಿ ನೋಂದಣಿ ಯಾಗಿರುವ ವಾಹನಗಳ ಮಾಲೀಕರ ವಿಳಾಸ ಅದೇ ರಾಜ್ಯದಲ್ಲಿದ್ದು, ಇಲ್ಲಿ ಕಾರನ್ನು ಓಡಿಸಿದರೆ ರಸ್ತೆ ತೆರಿಗೆ ಪಾವತಿಸಬೇಕಿಲ್ಲ.
ಆದರೆ ಬಹುತೇಕ ಆರ್‌ಟಿಒ ಅಧಿಕಾರಿಗಳು ಈ ನಿಯಮವನ್ನು ಪಾಲಿಸದೇ ವಾಹನ ಮಾಲೀ ಕರಿಗೆ ಬೆದರಿಸಿ ದಂಡ ವಿಧಿಸುತ್ತಿದ್ದಾರೆ. ಇದರೊಂದಿಗೆ ದಂಡದ ಪ್ರಮಾಣವನ್ನು ಹೆಚ್ಚಿಸ ಬೇಕು ಎನ್ನುವ ಕಾರಣಕ್ಕೆ, ಕೇಂದ್ರದ ಕಾನೂನಿನಲ್ಲಿರುವ ಒಂದು ವರ್ಷದ ಅವಕಾಶವನ್ನು ಒಂದು ತಿಂಗಳಿಗೆ ತಗ್ಗಿಸಿ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿ ಕಾಯಿದೆಯನ್ನು ಹೈಕೋ ರ್ಟ್ ವಜಾಗೊಳಿಸಿದ್ದರೂ, ಅದನ್ನೇ ಮುಂದಿಟ್ಟುಕೊಂಡು ದಂಡ ವಸೂಲಿ ಮಾಡುತ್ತಿ ದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಹೈಕೋರ್ಟ್ ಹೇಳಿರುವುದೇನು?
ಬೇರೆ ರಾಜ್ಯದಲ್ಲಿ ನೋಂದಣಿಯಾಗಿರುವ ಕಾರುಗಳ ಮೇಲೆ ಆರ್‌ಟಿಒ ದಾಳಿ ನಡೆಸಿ, ದಂಡ ವಸೂಲಿ ಮಾಡಿರುವ ಹಾಗೂ ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ ಅನೇಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ತೆರಿಗೆ ಕಾನೂನಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕರ್ನಾಟಕ ದಲ್ಲಿ ಓಡಿದರೆ ಮಾತ್ರ ಕರ್ನಾಟಕದ ರಸ್ತೆ ತೆರಿಗೆ ಪಾವತಿಸ ಬೇಕು ಎಂದಿದೆ. ಆದರೆ ಅದನ್ನು ಒಂದು ತಿಂಗಳಿಗೆ ಇಳಿಸಿರು ವುದು ಕಾನೂನುಬಾಹಿರ.
ಇನ್ನು ವರ್ಷಕ್ಕಿಂತ ಹೆಚ್ಚು ಕಾಲ ರಾಜ್ಯದಲ್ಲಿ ವಾಹನ ಓಡಿದೆ ಎನ್ನುವುದನ್ನು ಸಾಬೀತು ಪಡಿಸಬೇಕಿರುವುದು ಆರ್‌ಟಿಒ ಅಧಿಕಾರಿಗಳು. ವರ್ಷದ ಬಳಿಕವೂ ತೆರಿಗೆ ಪಾವತಿ ಸಿಲ್ಲ ಎನ್ನುವುದನ್ನು ನ್ಯಾಯಾ ಲಯದಲ್ಲಿ ಸಾಬೀತುಪಡಿಸಿದ ಬಳಿಕ ದಂಡ ವಿಧಿಸಬೇಕು ಎಂದು ಹೇಳಿದೆ.
*
5 ಕೋಟಿಗೂ ಹೆಚ್ಚು ದಂಡ ವಸೂಲಿ
ಹೈಕೋರ್ಟ್ ನೀಡಿರುವ ಆದೇಶದ ಹೊರತಾಗಿಯೂ ಸಾರಿಗೆ ಇಲಾಖೆ ಕಳೆದ ಕೆಲ ತಿಂಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದು ಐದು ಕೋಟಿ ರು.ಗೂ ಹೆಚ್ಚು ದಂಡ ವಸೂಲಿ ಮಾಡಿದೆ. ಇಲಾಖೆಯೇ ನೀಡಿರುವ ಅಂಕಿ-ಅಂಶಗಳ ಪ್ರಕಾರ, 250ಕ್ಕೂ ಹೆಚ್ಚು ಕಾರುಗಳನ್ನು ಸೀಜ್ ಮಾಡಿ 400 ಕೇಸ್ ದಾಖಲಿಸಿದ್ದಾರೆ. ಸುಮಾ ರು 5 ಕೋಟಿ ರು. ದಂಡ ವಸೂಲಿ ಮಾಡಿದ್ದಾರೆ. ಆದರೆ ಆರ್‌ಟಿಒ ಅಧಿಕಾರಿಗಳು ಹೈಕೋ ರ್ಟ್ ಆದೇಶವನ್ನೂ ಮೀರಿ ದಂಡ ಸಂಗ್ರಹಿಸುತ್ತಿರುವುದು ಇದೀಗ ವಿವಾದಕ್ಕೆ ಕಾರಣ ವಾಗಿದೆ.
ಹೈಕೋರ್ಟ್ ಹೇಳಿರುವುದೇನು ?
ಬೇರೆ ರಾಜ್ಯದಲ್ಲಿ ಖರೀದಿಸಿದ ಕಾರನ್ನು ತಂದರೆ ವರ್ಷ ಕಳೆಯುವುದರೊಳಗೆ ಕರ್ನಾಟಕದ ರಸ್ತೆ ತೆರಿಗೆ ಪಾವತಿಸಬೇಕು ವರ್ಷದೊಳಗೆ ತೆರಿಗೆ ಪಾವತಿಸದಿದ್ದರೆ ದಂಡ ವಸೂಲಿ ಮಾಡ ಬೇಕು ವರ್ಷದ ಕಾಲ ರಾಜ್ಯದಲ್ಲಿಯೇ ಕಾರು ಓಡಿದೆ ಎನ್ನುವುದನ್ನು ಸಾಬೀತು ಪಡಿಸುವು ದು ಆರ್‌ಟಿಒ ಜವಾಬ್ದಾರಿ ವರ್ಷದ ಬಳಿಕ ರಾಜ್ಯ ರಸ್ತೆ ತೆರಿಗೆ ಕಟ್ಟಿದರೆ, ಯಾವುದೇ ದಂಡ ವಿಧಿಸುವಂತಿಲ್ಲ